ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಕೆಇಎ

ಬೆಂಗಳೂರು, ಮೇ 08 : ಈ ಬಾರಿಯ (2017) ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ತಲಾ ಒಂದು ಗ್ರೇಸ್ ಅಂಕ ಸಿಗಲಿದೆ.

ಎರಡೂ ಪ್ರಶ್ನೆ ಪತ್ರಿಕೆಗಳಲ್ಲಿ ತಲಾ ಒಂದು ಪ್ರಶ್ನೆಯನ್ನು ಅಸ್ಪಷ್ಟವಾಗಿ ಕೇಳಲಾಗಿದ್ದ ಕಾರಣ ತಜ್ಞರ ಸಲಹೆಯಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2 ಗ್ರೇಸ್ ಅಂಕ ನೀಡಲಿದೆ.[ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ, ಅಭ್ಯರ್ಥಿಗಳಿಗೆ ಮಾರ್ಗಸೂಚಿಗಳು]

CET students will get two grace marks: KEA

ಭೌತಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಮೊದಲನೇ ಪ್ರಶ್ನೆ ಮತ್ತು ರಸಾಯನಶಾಸ್ತ್ರ ಪರೀಕ್ಷೆಯ 48ನೇ ಪ್ರಶ್ನೆಗೆ ಈ ಗ್ರೇಸ್ ಅಂಕ ದೊರೆತಿದೆ. ಈ ಎರಡೂ ಪ್ರಶ್ನೆಗಳು ಕೊಂಚ ಉದ್ದ ಹಾಗೂ ಅಸ್ಪಷ್ಟತೆಯಿಂದ ಕೂಡಿದ್ದವು.

ಇದರಿಂದ ಉತ್ತರ ಬರೆಯಲು ಗೊಂದಲ ಉಂಟಾಗಿ​ದ್ದಾಗಿ ವಿದ್ಯಾರ್ಥಿಗಳು ಮತ್ತು ಕಾಲೇಜು ಉಪ​ನ್ಯಾ​ಸಕರಿಂದ ಆಕ್ಷೇಪಗಳು ಕೇಳಿಬಂದಿದ್ದವು. ಈ ಆಕ್ಷೇಪದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ತಜ್ಞರೊಂದಿಗೆ ಚರ್ಚೆ ನಡೆಸಿದರು.[ಮುಗಿದ ನೀಟ್ ಪರೀಕ್ಷೆ, ಜೂನ್ 8ಕ್ಕೆ ಫಲಿತಾಂಶ]

ಗ್ರೇಸ್ ಅಂಕ ನೀಡುವ ಮಾಹಿತಿಯನ್ನು ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರದಲ್ಲೂ ನೀಡಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+