ಬೆಂಗಳೂರು: ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ನೂರಾರು ವಿಘ್ನಗಳು
ಬೆಂಗಳೂರು, ಏಪ್ರಿಲ್ 06: ಸಾರಿಗೆ ಸಂಸ್ಥೆಯು ಬೆಂಗಳೂರಿನ ರಸ್ತೆಗಳಲ್ಲಿ ವಿದ್ಯುತ್ ಚಾಲಿತ ಬಸ್ ಗಳನ್ನು ಓಡಿಸಬೇಕು ಎಂದು ಕನಸು ಕಂಡಿತ್ತು. ಆದರೆ ಗುತ್ತಿಗೆ ಆಧಾರದ ಮೇಲೆ ಪಡೆಯುವ ಸಬ್ಸಿಡಿ ನೀಡಲು ಕೇಂದ್ರ ನಿರಾಕರಿಸಿದೆ.
ಬಿಎಂಟಿಸಿಯು ಗುತ್ತಿಗೆ ಆಧಾರದ ಮೇಲೆ 150 ಎಲೆಕ್ಟ್ರಿಕ್ ಬಸ್ ಗಳನ್ನು ಒದಗಿಸಲು ಕೆಲ ತಿಂಗಳ ಹಿಂದೆ ಟೆಂಡರ್ ಕರೆದಿತ್ತು. ಇದರಲ್ಲಿ ಸುಮಾರು 7 ಕಂಪನಿಗಳು ಭಾಗವಹಿಸಿದ್ದವು.ಅತ್ಯಂತ ಕಡಿಮೆ ದರ ನಮೂದಿಸಿದ್ದ ಹೈದರಾಬಾದ್ ಮೂಲದ ಗೋಲ್ಡ್ ಸ್ಟೋನ್ ಕಂಪನಿಯು ಬಸ್ ಗಳನ್ನು ಒದಗಿಸುವ ಗುತ್ತಿಗೆ ಪಡೆದುಕೊಂಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಮೊದಲ ಹಂತದಲ್ಲಿ ಗುತ್ತಿಗೆ ವ್ಯವಸ್ಥೆಯಡಿ 40 ಬಸ್ ಗಳನ್ನು ಕಾರ್ಯಾಚರಣೆಗೊಳಿಸಲು ನಿರ್ಧರಿಸಿತ್ತು.ಗೋಲ್ಡ್ ಸ್ಟೋನ್ ಕಂಪನಿಯು ಮುಂದಿನ ಆರು ತಿಂಗಳೊಳಗೆ ಎಲೆಕ್ಟ್ರಿಕ್ ಬಸ್ ಗಳನ್ನು ಬೆಂಗಳೂರಿನ ರಸ್ತೆಗಿಳಿಸುವುದಾಗಿ ಸಂಸ್ಥೆಗೆ ತಿಳಿಸಿದೆ.

ಅದರಂತೆ ಬಿಎಂಟಿಸಿಯು ಹವಾನಿಯಂತ್ರಿತ ಬಸ್ ಗಳ ಕಾರ್ಯಾಚರಣೆಗೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಕೇಂದ್ರ ಬೃಹತ್ ಕೈಗಾರಿಕೆಗಳ ಇಲಾಖೆಯು, ಗುತ್ತಿಗೆ ಆಧಾರದಲ್ಲಿ ಓಡಿಸುವ ಎಲೆಕ್ಟ್ರಿಕ್ ಬಸ್ ಗಳಿಗೆ ತಲಾ 1 ಕೋಟಿ ರೂ ಸಬ್ಸಿಡಿ ನೀಡಲು ಸಾಧ್ಯವಿಲ್ಲ. ಖರೀದಿ ಮಾಡಿದರಷ್ಟೇ ಸಬ್ಸಿಡಿ ನೀಡಲಾಗುತ್ತದೆ ಎಂದು ಷರತ್ತು ವಿಧಿಸಿದೆ.
ಕೇಂದ್ರ ಸರ್ಕಾರವು ಒಂದನೇ ಹಂತದಲ್ಲಿ 80 ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ ಗಳಿಗೆ ಸಬ್ಸಿಡಿ ನೀಡಲು ಅನುಮೋದನೆ ನೀಡಿತ್ತು. ಆ ತರುವಾಯವೇ 150 ಎಲೆಕ್ಟ್ರಿಕ್ ಬಸ್ ಗಳನ್ನು ಗುತ್ತಿಗೆಗೆ ಪಡೆಯಲು ತೀರ್ಮಾನಿಸಿ ಟೆಂಡರ್ ಕರೆದಿತ್ತು.












Click it and Unblock the Notifications