ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಲೈವ್‌ಬ್ಯಾಂಡ್ ಮೇಲೆ ಸಿಸಿಬಿ ದಾಳಿ
ಬೆಂಗಳೂರು, ಮಾರ್ಚ್ 23: ಅನುಮತಿ ಇಲ್ಲದೆ ನಿಯಮ ಬಾಹಿರವಾಗಿ ನಡೆಸುತ್ತಿದ್ದ ಲೈವ್ ಬ್ಯಾಂಡ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಯಾಲೇಸ್ ಗುಟ್ಟಹಳ್ಳಿಯ ವಿನಾಯಕ ವೃತ್ತ ಬಳಿ ಇರುವ ಶ್ರೀನಿವಾಸ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಹೊರರಾಜ್ಯಗಳಿಂದ ಮಹಿಳೆಯರನ್ನು ಬಾರ್ ಗರ್ಲ್‌ಗಳಾಗಿ ಕೆಲಸ ಮಾಡಲು ಕರೆತಂದು ಅವರ ಇಚ್ಛೆಗೆ ವಿರುದ್ಧವಾಗಿ ಯಾವುದೇ ಡ್ಯಾನ್ಸ್ ಫ್ಲೋರ್ ಅಥವಾ ಸ್ಟೇಜ್ ಇಲ್ಲದೆ ಗ್ರಾಹಕರ ಮುಂದೆ ಅಶ್ಲೀಲವಾಗಿ ನೃತ್ಯ ಮಾಡಿಸುತ್ತಿದ್ದರು. ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ನಾಲ್ವರು ಬಾರಿನ ಮಾಲಿಕರು ಹಾಗೂ 13 ಮಂದಿ ಗ್ರಾಹಕರನ್ನು ಬಂಧಿಸಲಾಗಿದೆ.

ಬಾರ್‌ನ ಮಾಲೀಕರು, ಮ್ಯಾನೇಜರ್‌ಗಳಾದ ಸಂತೋಷ್, ಅಭಿಷೇಕ್, ಉಮೇಶ್ , ರಮೇಶ್ ಹಾಗೂ ಗ್ರಾಹಕರಾದ ರಾಕೇಶ್, ಬೈಯ್ಯರೆಡ್ಡಿಯನ್ನು ಬಂಧಿಸಲಾಗಿದೆ.












Click it and Unblock the Notifications