ಹೈಟೆಕ್ ವೇಶ್ಯಾವಾಟಿಕೆ ದಂಧೆ- ಇಬ್ಬರ ಬಂಧನ
ಬೆಂಗಳೂರು, ಮೇ 10. ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಕೋಲ್ಕತ್ತಾ ಮೂಲದ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.
ಬಂಧಿತರು ಸುನೀಲ್ ಗೌಡ ಮತ್ತು ರಾಜೇಶ್ ಎಂದು ಗುರುತಿಸಲಾಗಿದ್ದು, ಈ ಆರೋಪಿಗಳು ವಿಲ್ಸನ್ ಗಾರ್ಡನ್‌ನಲ್ಲಿರುವ ಪೂರ್ಣಿಮಾ ರೆಸ್ಟೊರೆಂಟ್ ಮುಂದೆ ಈ ದಂಧೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.[ಬೆಂಗಳೂರು ಕ್ರೈಂ ಬೀಟ್ : ಮಾಂಗಲ್ಯ ಸರ ಕಳ್ಳತನ]

ಕಳೆದ 15 ದಿನಗಳಿಂದ ಹುಡುಗಿಯರನ್ನು ಮಸಾಜ್ ಪಾರ್ಲರ್‌ನಲ್ಲಿ ಕೆಲಸವಿದೆ ಎಂದು ಹೇಳಿ ಕರೆಸುತ್ತಿದ್ದ ಇವರು, ವೇಶ್ಯಾವಾಟಿಕೆ ನಡೆಸಿದರೆ ಹೆಚ್ಚಿನ ಹಣಗಳಿಸಬಹುದು ಎಂಬ ಅಮಿಷವನ್ನು ತೋರಿಸಿ ಈ ದಂಧೆಗೆ ಇಳಿಯುವಂತೆ ಪ್ರಚೋದನೆ ನೀಡುತ್ತಿದ್ದರು. ಬಳಿಕ ಕಾರ್‌ನಲ್ಲಿ ಯುವತಿಯರನ್ನು ಗಿರಾಕಿಗಳಿಗೆ ಸರಬರಾಜು ಮಾಡಿ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದರು.[ಪಾನಮತ್ತರ ಲೈಸೆನ್ಸ್ ಕಿತ್ತ ಬೆಂಗಳೂರು ಪೊಲೀಸರು]
ಈ ದಂಧೆಯ ಮುಖ್ಯ ಆರೋಪಿ ಶಿವು ತಲೆಮೆರೆಸಿಕೊಂಡಿದ್ದಾನೆ. ಬಂಧಿತರಿಂದ ಒಂದು ಮೊಬೈಲ್, ಒಂದು ಇಂಡಿಕಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.












Click it and Unblock the Notifications