ಬೆಂಗಳೂರು: ಕ್ಷೌರಿಕನಿಂದ ಹೈಟೆಕ್ ವೇಶ್ಯಾವಾಟಿಕೆ ದಂಧೆ

ವೃತ್ತಿಯಲ್ಲಿ ಕ್ಷೌರಿಕನಾಗಿರುವ ಗೋವಿಂದರಾಜು ಸ್ಪಾ ಹೆಸರಿನಲ್ಲಿ ಹೆಬ್ಬಾಳದಲ್ಲಿರುವ ಪ್ರತಿಷ್ಠಿತ ಮಾನ್ಯತಾ ರೆಸಿಡೆನ್ಸಿ ಬಡಾವಣೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದ.
ಬಳ್ಳಾರಿಯಲ್ಲಿದ್ದ ಮಾಲೀಕರಿಗೆ ತಾನು ಬೆಂಗಳೂರಿನ ದೊಡ್ಡ ಸ್ಪಾ ಉದ್ಯಮಿ ಎಂದು ಸುಳ್ಳು ಹೇಳಿ ಗೋವಿಂದರಾಜು 75 ಸಾವಿರ ರುಪಾಯಿಯಷ್ಟು ದುಬಾರಿ ಬಾಡಿಗೆಗೆ ಮನೆಯೊಂದನ್ನು ಪಡೆದು ಸ್ಪಾ ಸೆಂಟರ್ ಆಗಿ ಪರಿವರ್ತನೆ ಮಾಡಿಕೊಂಡಿದ್ದ.
ಸಿನಿಮಾ ನಟರು, ನಿವೃತ್ತ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳೇ ಹೆಚ್ಚಾಗಿ ನೆಲೆಸಿರುವ ಮಾನ್ಯತಾ ರೆಸಿಡೆನ್ಸಿ ಬಡಾವಣೆಯಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ಆರಂಭವಾಗಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.[ಕುಖ್ಯಾತ ಕುಣಿಗಲ್ ಗಿರಿ ಬಗ್ಗೆ ಒಂದಷ್ಟು ವಿವರಗಳು]
ಈ ಸ್ಪಾ ಸೆಂಟರ್‌ನಲ್ಲಿ ನಿಜವಾಗಿ ನಡೆಯುತ್ತಿರುವುದು ಏನು ಎನ್ನುವುದನ್ನು ತಿಳಿಯಲು ಸಿಸಿಬಿ ಪೊಲೀಸರಲ್ಲಿ ಒಬ್ಬರು ಗಿರಾಕಿಯ ವೇಷ ಧರಿಸಿ ಒಳಗಡೆ ನಡೆಯುತ್ತಿರುವುದು ವೇಶ್ಯಾವಾಟಿಕೆ ದಂಧೆ ಎಂದು ಖಚಿತ ಪಡಿಸಿದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಲವಂತವಾಗಿ ಈ ದಂಧೆಗೆ ನೂಕಲ್ಪಟ್ಟ ಇಬ್ಬರು ಯುವತಿಯರನ್ನ ರಕ್ಷಿಸಲಾಗಿದೆ. ಮನೆಯನ್ನು ಬಾಡಿಗೆ ಪಡೆದು ದಂಧೆ ನಡೆಸುತ್ತಿದ್ದ ಗೋವಿಂದರಾಜುವಿನ ಪತ್ತೆ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ.












Click it and Unblock the Notifications