ಸಿಸಿಬಿ ಕಾರ್ಯಾಚರಣೆ: ಇರಾನಿ ಗ್ಯಾಂಗ್‌ನ ಐವರು ಅರೆಸ್ಟ್‌

 Irani Gang
ಬೆಂಗಳೂರು,ಜು.24: ಪೊಲೀಸರ ಸೋಗಿನಲ್ಲಿ ವೃದ್ಧೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಕುಖ್ಯಾತ ಇರಾನಿ ಗ್ಯಾಂಗ್‌ ಐವರು ಸದಸ್ಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇರಾನಿ ಗ್ಯಾಂಗ್‌ನ ಮುಖ್ಯಸ್ಥ ಮಹಾರಾಷ್ಟ್ರದ ಲಾಲಾ ಸಮೀರ್‌ ಜಾಫರ್‌ ಹುಸೇನ್‌ ಅಲಿಯಾಸ್‌ ಲಾಲಾ (35) ಜಾಫರ್‌ ಆಲಿ ಸೈಯದ್‌ (31), ಗುಲಾಂ ಆಲಿ ಫರುವಲಿ ಸೈಯದ್‌ (26), ಉಸ್ಮಾನ್‌ (32), ಅಬ್ಬಾಸ್‌ ಆಲಿ (28) ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು ಎರಡು ಕೆ.ಜಿ ಚಿನ್ನಾಭರಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇರಾನಿ ಗ್ಯಾಂಗ್‌ನ ಸದಸ್ಯರು ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌, ಗೋವಾ, ರಾಜಸ್ತಾನ, ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗಿದ್ದರು. ಬೆಂಗಳೂರು, ಮಂಗಳೂರು, ಉಡುಪಿ, ಕುಂದಾಪುರ ಮತ್ತು ಮೈಸೂರಿನಲ್ಲೂ ಚಿನ್ನಾಭರಣ ದೋಚಿದ್ದರು.

ಇವರ ಬಂಧನಕ್ಕೆ ಪೊಲೀಸರು ಸಿಬ್ಬಂದಿ ಎರಡು ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿದ್ದರು. ಜು.8ರಂದು ಬೆಳಗ್ಗೆ ವಿಜಯನಗರದಲ್ಲಿ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾಗ ಸಿಸಿಬಿ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಹೇಗೆ ಕಳ್ಳತನ ಮಾಡುತ್ತಿದ್ದರು? ಈ ಗ್ಯಾಂಗ್‌ನ ಸದಸ್ಯರು ವೃದ್ಧೆಯರನ್ನು ಗುರಿಯಾಗಿಸಿಕೊಳ್ಳು ಕಳ್ಳತನ ನಡೆಸುತ್ತಿದ್ದರು. ನಕಲಿ ಗುರುತಿನ ಚೀಟಿ ತೋರಿಸಿ ಪೊಲೀಸರೆಂದು ನಂಬಿಸಿ 'ಪಕ್ಕದ ರಸ್ತೆಯಲ್ಲಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದಾರೆ. ನಿಮ್ಮಲ್ಲಿರುವ ಆಭರಣವನ್ನು ಕೂಡಲೇ ತೆಗೆದು ಕವರ್‌ನಲ್ಲಿ ಹಾಕಿ' ಎಂದು ಹೇಳಿ ಬೆದರಿಸುತ್ತಿದ್ದರು. ಈ ಸಂದರ್ಭದಲ್ಲಿ ಇರಾನಿ ಸದಸ್ಯರು ಅವರಿಗೆ ಸಹಾಯ ಮಾಡುವ ನೆಪದಲ್ಲಿ ಚಿನ್ನದ ಸರಗಳನ್ನು ಕವರ್‌ಗೆ ಹಾಕುವಾಗ ವೃದ್ಧೆಯರ ಗಮನ ಬೇರೆಡೆ ಸೆಳೆದು ಅದರಲ್ಲಿ ಕಲ್ಲು ಮಣ್ಣುಗಳನ್ನು ಹಾಕಿ ಚಿನ್ನದೊಂದಿಗೆ ಪರಾರಿಯಾಗುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+