ನಕಲಿ ದಾಖಲೆ: ಬೆಂಗಳೂರಿನ 5 ಶಾಲೆಗಳ ಮಾನ್ಯತೆ ರದ್ದು

ಬೆಂಗಳೂರು, ಸೆಪ್ಟೆಂಬರ್ 06: ಬೆಂಗಳೂರು ಮತ್ತು ಮೈಸೂರಿಗೆ ಸಂಬಂಧಿಸಿದ ಆರು ಶಾಲೆಗಳ ಮಾನ್ಯತೆಯನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ ಬಿಎಸ್ ಇ) ಮಂಗಳವಾರ ರದ್ದು ಮಾಡಿದೆ. ನಕಲಿ ದಾಖಲೆ ಸೃಷ್ಟಿ ಮಾಡಿ ಶಾಲೆ ನಡೆಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ 5 ಮತ್ತು ಮೈಸೂರಿನ 1 ಶಾಲೆಯ ಮಾನ್ಯತೆ ರದ್ದು ಮಾಡಲಾಗಿದೆ.

ಬಸವೇಶ್ವರ ನಗರದ ನ್ಯಾಶನಲ್ ಅಕಾಡೆಮಿ ಫಾರ್ ಲರ್ನಿಂಗ್, ನ್ಯಾಶನಲ್ ಪಬ್ಕಿಕ್ ಸ್ಕೂಲ್(ಇಂದಿರಾ ನಗರ, ಕೋರಮಂಗಲ, ರಾಜಾಜಿನಗರ, ಎಚ್ ಎಸ್ ಆರ್ ಲೇಔಟ್ 4 ನೇ ಹಂತ) ಮತ್ತು ಮೈಸೂರಿನ ವಿಜಯನಗರದ ಎನ್ ಪಿಎಸ್ ಇಂಟರ್ ನ್ಯಾಶನಲ್ ಸ್ಕೂಲ್ ನ ಮಾನ್ಯತೆಗಳು ರದ್ದಾಗಿವೆ.[ಸಿಬಿಎಸ್‌ಇ: ಸಿಂಗಪುರದಲ್ಲಿ ಸಾಧನೆ ಮೆರೆದ ಭಾರತ ಸಂಜಾತರು]

school

ಆರ್ ಟಿ ಐ ಅಡಿಯಲ್ಲಿ ಪಡೆದ ಕೆಲ ಮಾಹಿತಿಗಳು, ಕರ್ನಾಟಕ ಸರ್ಕಾರದ ಸಲಹೆ, ಸಾರ್ವಜನಿಕ ಸಹಕಾರ ಸಂಘದ ಸಲಹೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವರದಿ ಎಲ್ಲವನ್ನು ಆಧರಿಸಿ ಸಿಬಿಎಸ್ ಇ ಈ ನಿರ್ಧಾರವನ್ನು ತೆಗೆದುಕೊಂಡಿದೆ.[ಈ ಬಾರಿಯ ಸಿಬಿಎಸ್ ಇ ಫಲಿತಾಂಶದ ಪೂರ್ಣ ಪಟ್ಟಿ]

ಸದ್ಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವ ಆತಂಕ ಇಲ್ಲ, ಅವರು ಪರೀಕ್ಷೆಯನ್ನು ಎದುರಿಸಬಹುದು. ಆದರೆ ಮುಂದಿನ ವರ್ಷದಿಂದ ಶಾಲೆಗಳು ತಮ್ಮ ಮಾನ್ಯತೆ ಕಳೆದುಕೊಳ್ಳುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+