ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಲಿ ಕಂಡರೆ 9448030063 ಕ್ಕೆ ಕರೆ ಮಾಡಿ ತಿಳಿಸಿ

By Kiran B Hegde
|
Google Oneindia Kannada News

ಬೆಳಗಾವಿ, ಡಿ. 27: ಜಿಲ್ಲೆಯ ಖಾನಾಪುರ ಅರಣ್ಯ ಪ್ರದೇಶದಲ್ಲಿ ಗರ್ಭಿಣಿಯನ್ನು ಹತ್ಯೆಗೈದಿರುವ ಹುಲಿಯ ಶೋಧ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಹುಲಿ ಕಂಡರೆ ತಿಳಿಸಬೇಕೆಂದು ಜನರಲ್ಲಿ ಕೋರಿರುವ ಅರಣ್ಯ ಇಲಾಖೆ ಅಧಿಕಾರಿಗಳು, ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಗ್ರಾಹಕ ಸೇವಾ ಕೇಂದ್ರ (94480 30063) ಆರಂಭಿಸಿದ್ದಾರೆ.

tiger

ಪ್ರಸ್ತುತ ಜಾಂಬೋಟಿ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ನಕ್ಸಲ್ ನಿಗ್ರಹ ಪಡೆ ಹಾಗೂ ಗರುಡಾ ಫೋರ್ಸ್ ಒಳಗೊಂಡ 12 ತಂಡಗಳು ಸೇರಿ ಒಟ್ಟು 275 ಸಿಬ್ಬಂದಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ. 10 ಜನ ಶಾರ್ಪ್ ಶೂಟರ್‌ಗಳು ಬಂದಿದ್ದು, ಹುಲಿಗೆ ಕಂಡಲ್ಲಿ ಗುಂಡಿಕ್ಕಲು ಸಜ್ಜಾಗಿದ್ದಾರೆ. [ಚಿಕ್ಕಮಗಳೂರು ಹುಲಿಗೆ ಬೆಳಗಾವಿಯಲ್ಲೂ ಮಹಿಳೆ ಬಲಿ]

ಸೋಲಿಗರು : ವಾಸನೆ ಗ್ರಹಿಕೆಯಿಂದ ಹುಲಿಯ ಜಾಡನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿರುವ ಸೋಲಿಗ ಸಮುದಾಯದ ಆರು ಜನರನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಚಾಮರಾಜನಗರದಿಂದ ಕರೆಸಿಕೊಳ್ಳಲಾಗಿದೆ. ಕಾರ್ಯಾಚರಣೆ ನಡೆಸುವ ಪ್ರತಿ ತಂಡದಲ್ಲಿ ಓರ್ವ ಸೋಲಿಗ ಸಮುದಾಯದವರು ಇರುತ್ತಾರೆ. ಇವರು ಹುಲಿಯ ಹೆಜ್ಜೆ, ಮರ ಪರಚಿರುವುದು ಹಾಗೂ ಮಲ ವಿಸರ್ಜನೆಯ ವಾಸನೆಯನ್ನು ಗ್ರಹಿಸಬಲ್ಲರು. [ನರಭಕ್ಷಕ ಹುಲಿ ಇನ್ನೂ ಸಿಕ್ಕಿಲ್ಲ]

English summary
Forest department is searching for man eater tiger near Khanapur and has started a call center. People can call to 9448030063 and give information regarding man eater tiger. Now 10 sharp shooters and 6 soligas also have been included in the teams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X