ಮಧ್ಯರಾತ್ರಿ ಯುವತಿಯ ಕಾಲ್ ರಿಸೀವ್ ಮಾಡಿದ ಕ್ಯಾಬ್ ಚಾಲಕನಿಗೆ ಕಾದಿತ್ತು ಗ್ರಹಚಾರ

ಬೆಂಗಳೂರು, ಜೂನ್ 14: ಮಧ್ಯರಾತ್ರಿ ಕ್ಯಾಬ್ ಚಲಾಯಿಸುತ್ತಿದ್ದಾಗ ಮೊಬೈಲ್‌ಗೆ ಅನಾಮಿಕ ಕರೆಯೊಂದು ಬಂದಿತ್ತು, ರಿಸೀವ್ ಮಾಡಿದ್ದೇ ತಡ ಕ್ಯಾಬ್ ಚಾಲಕನಿಗೆ ಗ್ರಹಚಾರವೇ ಕಾದಿತ್ತು.

ರಿಸೀವ್ ಮಾಡಿ ಹೆಲೋ ಯಾರು ನೀವು ಎಂದಿದ್ದೇ ತಡ ಆಕಡೆಯಿಂದ ಯುವತಿ ನಿಮ್ಮ ಮೊಬೈಲ್‌ನಿಂದ ನನಗೆ ಕಾಲ್ ಬಂದಿತ್ತು ಅದಕ್ಕೆ ಮಾಡಿದೆ ಎಂದಳು, ಅದಕ್ಕೆ ಚಾಲಕ ಇಲ್ಲ ಮೇಡಂ ನಾನು ಯಾರಿಗೂ ಕಾಲ್ ಮಾಡಿಲ್ಲ ಎಂದಿದ್ದ ಅಲ್ಲಿಗೆ ಕಾಲ್ ಕಟ್ ಮಾಡಿದ್ದಳು.

ಆದರೆ ಇದು ಅಷ್ಟಕ್ಕೇ ನಿಂತಿಲ್ಲ ಬಳಿಕ ವ್ಯಕ್ತಿಯೊಬ್ಬ ಕಾಲ್ ಮಾಡಿ ನೀವಿರುವ ಲೊಕೇಶನ್ ಕಳಿಸಿ ಎಂದಿದ್ದ ಅದಕ್ಕೆ ಕ್ಯಾಬ್ ಡ್ರೈವರ್ ಲೊಕೇಶನ್ ಶೇರ್ ಮಾಡಿದರೆ ಆತ ಇದ್ದಲ್ಲಿಗೆ ಕೆಲವು ಜನರನ್ನು ಕರೆದುಕೊಂಡು ಬಂದು ಕಣ್ಣಿಗೆ ಕಾರದಪುಡಿ ಎರಚಿ ಥಳಿಸಿದ್ದಾರೆ.

Cab driver recieves girls call at midnight assaulted

ಹೆಣ್ಣು ಮಗಳಿಗೆ ಕಾಲ್ ಮಾಡಿ ತೊಂದರೆ ಕೊಡ್ತೀಯಾ ನಿನಗೆ ಎಷ್ಟು ಧೈರ್ಯ ಎಂದಾಗ, ಇಲ್ಲ ಸಾರ್ ನನಗೆ ಆಕೆ ಯಾರು ಅಂತಲೇ ಗೊತ್ತಿಲ್ಲ, ನಾನು ಯಾರಿಗೂ ಕಾಲ್ ಮಾಡಿಲ್ಲ ಅವರ ನಂಬರ್ ಕೂಡ ನನ್ನ ಬಳಿ ಇಲ್ಲ ಬೇಕಾದರೆ ಮೊಬೈಲ್ ಒಮ್ಮೆ ಚೆಕ್ ಮಾಡಿ ಎಂದಿದ್ದಾನೆ ಅದಕ್ಕೆ ಯುವಕರು ನೀನು ಕಾಲ್ ಲಿಸ್ಟ್ ಡಿಲೀಟ್ ಮಾಡಿರಬೇಕು ಎಂದು ಹೇಳಿ ಮತ್ತೆ ಥಳಿಸಿದ್ದಾರೆ.

ಇದಾದ ಬಳಿಕ ಹೇಗೋ ಅಲ್ಲಿಂದ ಬಚಾವಾದ ಡ್ರೈವರ್ ನವೀನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ, ಆಕೆ ಯಾರು ಎಂದೇ ನನಗೆ ಗೊತ್ತಿಲ್ಲ ನಾನು ಯಾರಿಗೂ ಕಾಲ್ ಮಾಡಿಲ್ಲ ಆದರೂ ಈ ರೀತಿ ನನಗೆ ಹೊಡೆದಿದ್ದಾರೆ ಎಂದು ದೂರು ದಾಖಲಿಸಿದ್ದಾರೆ, ಆದರೆ ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+