• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಕ್ಯಾಬ್ ಚಾಲಕನ ಅಪಹರಣ

|

ಬೆಂಗಳೂರು, ಜುಲೈ 27: ನಗರದಲ್ಲಿ ಕ್ಯಾಬ್ ಚಾಲಕನನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬ್ರೇಕ್ ಹಾಕಿ ಅಪಘಾತಕ್ಕೆ ಕಾರಣನಾಗಿದ್ದಾನೆ ಎನ್ನುವ ಕ್ಷುಲ್ಲಕ ಕಾರಣಕ್ಕೆ ಕ್ಯಾಬ್ ಚಾಲಕನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಮೆಜೆಸ್ಟಿಕ್‌ನಲ್ಲಿ ಅಂಧ ದಂಪತಿಯ 8 ತಿಂಗಳ ಹಸುಗೂಸು ಅಪಹರಣ ಮೆಜೆಸ್ಟಿಕ್‌ನಲ್ಲಿ ಅಂಧ ದಂಪತಿಯ 8 ತಿಂಗಳ ಹಸುಗೂಸು ಅಪಹರಣ

ಕೆಂಗೇರಿ ಬಳಿಯ ಹೆಮ್ಮಿಗೆಪುರ ನಿವಾಸಿ ಮಂಡ್ಯ ಮೂಲದ ವಿಜಯ್‌ಕುಮಾರ್ (31) ಹಲ್ಲೆಗೆ ಒಳಗಾದ ಕ್ಯಾಬ್ ಚಾಲಕ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ವಿಜಯ್ ಕುಮಾರ್ ಬನಶಂಕರಿಗೆ ಹೋಗುತ್ತಿದ್ದರು.

ಆರ್‌ಟಿ ನಗರದ ಸಿಬಿಐ ಜಂಕ್ಷನ್ ಬಳಿಯ ಮೇಲು ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಬಸ್‌ನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ, ಬಸ್‌ನ ಹಿಂದಿದ್ದ ವಿಜಯ್ ಕುಮಾರ್ ಕೂಡ ಬ್ರೇಕ್ ಹಾಕಿ, ಪಕ್ಕದಲ್ಲಿ ಬರುತ್ತಿದ್ದ ಮತ್ತೊಂದು ಕಾರು ಬ್ರೇಕ್ ಹಾಕಿ ಪಕ್ಕದಲ್ಲಿ ಬರುತ್ತಿದ್ದ ಕಾರು ಹಾಗೂ ಇನ್ನೊಂದು ಕಾರಿಗೆ ಡಿಕ್ಕಿಯಾಗಿದೆ. ಹಾನಿ ಉಂಟಾದ ಕಾರುಗಳ ಚಾಲಕರು ವಿಜಯ್‌ಕುಮಾರ್‌ನನ್ನು ಅಡ್ಡಗಟ್ಟಿ ನಿನ್ನಿಂದಲೇ ಅಪಘಾತವಾಗಿದೆ. ಜಾನಿಗೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದರು.

ಜೈಲಿನಲ್ಲೇ ಇದ್ದುಕೊಂಡು ಅಪಹರಣಕ್ಕೆ ಸಂಚು, ಸತ್ಯ ಹೊರಬಿದ್ದಿದ್ಹೇಗೆ? ಜೈಲಿನಲ್ಲೇ ಇದ್ದುಕೊಂಡು ಅಪಹರಣಕ್ಕೆ ಸಂಚು, ಸತ್ಯ ಹೊರಬಿದ್ದಿದ್ಹೇಗೆ?

ಹಣ ನೀಡಲು ವಿಜಯ್ ಕುಮಾರ್ ನಿರಾಕರಿಸಿದಾಗ ಅವರನ್ನು ಕಾರಿಗೆ ಹತ್ತಿಸಿಕೊಂಡು ಹೊರಟ ಚಾಲಕರು ಹೊಂಗಸಂಧ್ರದ ಬಳಿ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಕಿವಿಯ ಭಾಗಕ್ಕೆ ತುಂಬಾ ಗಾಯಗಳಾಗಿವೆ. ಪೊಲೀಸರಿಗೆ ದೂರು ನೀಡಲಾಗಿದ್ದು ತನಿಖೆ ನಡೆಯುತ್ತಿದೆ.

English summary
Cab Driver Kidnaped in Bengaluru over silly reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X