ಜೇಟ್ಲಿಗೆ ಸಂತಾಪ ಸೂಚಿಸುವಾಗ ಸಿಎಂ ಪುತ್ರ ವಿಜಯೇಂದ್ರ ಎಡವಟ್ಟು
ಬೆಂಗಳೂರು, ಆಗಸ್ಟ್ 24: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ ನಿಧನರಾಗಿದ್ದಾರೆ. ಜೇಟ್ಲಿಗೆ ಸಂತಾಪ ಸೂಚಿಸುವಾಗ ಸಿಎಂ ಪುತ್ರ ವಿಜಯೇಂದ್ರ ಎಡವಟ್ಟು ಮಾಡಿದ್ದಾರೆ.
''ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಅವರು ಕರ್ನಾಟಕ ಉಸ್ತುವಾರಿಗಳಾಗಿದ್ದರು' ಎಂದು ವಿಜಯೇಂದ್ರ ಬರೆದಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಆ ವಾಕ್ಯವನ್ನೇ ತೆಗೆದುಹಾಕಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರು, ಶ್ರೇಷ್ಠ ಸಂಸದೀಯ ಪಟು, ಅದ್ಭುತ ವಾಗ್ಮಿ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ನಿಧನದಿಂದ ದೇಶಕ್ಕೆ, ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ನನಗೂ ಕೂಡ ಅನಾಥಪ್ರಜ್ಞೆ ಕಾಡುತ್ತಿದೆ.

• ಆ ಎತ್ತರದ ವ್ಯಕ್ತಿತ್ವದ ರಾಜನೀತಿಜ್ಞರಿಗೆ ನನ್ನ ಗೌರವಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಿದ್ದೇನೆ.
• ದೇವರು ಅವರ ಕುಟುಂಬದವರು ಮತ್ತು ಅಪಾರ ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
• ಎಲ್ಲ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ವಿದ್ವತ್ತು ಅವರಲ್ಲಿತ್ತು.
• ಏಕ ರೂಪ ತೆರಿಗೆ (GST) ಸೇರಿದಂತೆ ನಮ್ಮ ದೇಶದ ಆರ್ಥಿಕ ಸುಧಾರಣೆಯಲ್ಲಿ ಅವರ ಪಾತ್ರ ದೇಶ ಎಂದಿಗೂ ಮರೆಯುವುದಿಲ್ಲ.
• ಜೇಟ್ಲಿಯವರ ಸಮರ್ಥ ನಿರ್ವಹಣೆಯಲ್ಲಿ ಭಾರತ 2 ಟ್ರಿಲಿಯನ್ ಡಾಲರ್ ಆರ್ಥಿಕ ದೈತ್ಯಶಕ್ತಿಯಾಗಿ ಬೆಳೆಯಿತು.
• ಅವರು ಉದಾರವಾದಿಯಾಗಿದ್ದರು, ರಾಷ್ಟ್ರವಾದಿಯಾಗಿದ್ದರು, ಅತ್ಯುತ್ತಮ ನ್ಯಾಯವಾದಿಗಳಾಗಿದ್ದಂತೆ ಆರ್ಥಿಕ ತಜ್ಞರೂ ಆಗಿದ್ದರು.

• ಎಲ್ಲ ಪಕ್ಷಗಳ ನಾಯಕರು ಶ್ರೀ ಅರುಣ್ ಜೇಟ್ಲಿಯವರನ್ನು ಗೌರವಿಸುತ್ತಿದ್ದರು.
• ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲೂ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಅರುಣ್ ಜೇಟ್ಲಿಯವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದಂತೆ "ಅಮೂಲ್ಯ ವಜ್ರ" ಸದೃಶರಾಗಿದ್ದರು.
• ಅಂತಹ ಅದ್ವಿತೀಯ ನಾಯಕರಾಗಿದ್ದ ಶ್ರೀ ಅರುಣ್ ಜೇಟ್ಲಿಯವರು ಇಷ್ಟು ಬೇಗ ನಮ್ಮನ್ನು ಅಗಲಿರುವುದು ಎಂದಿಗೂ ತುಂಬಲಾರದ ನಷ್ಟವಾಗಿದೆ.
• ಅವರಿಲ್ಲದ ದೊಡ್ಡ ಶೂನ್ಯತೆ ನಮ್ಮ ಪಕ್ಷವನ್ನು ಆವರಿಸಿದೆ.
• ಮತ್ತೊಮ್ಮೆ ನನ್ನ ಆತ್ಮೀಯ ಮಾರ್ಗದರ್ಶಕರಾಗಿದ್ದ ಶ್ರೀ ಅರುಣ್ ಜೇಟ್ಲಿಯವರಿಗೆ ನನ್ನ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.












Click it and Unblock the Notifications