BWSSB: ಬೆಂಗಳೂರು ವಾಹನ ಸವಾರರಿಗೆ ಗುಡ್‌ನ್ಯೂಸ್: ರೊಬೋಟಿಕ್ ತಂತ್ರಜ್ಞಾನದ ಕೊಡುಗೆ

ಬೆಂಗಳೂರು ಮೇ 14: ಬೆಂಗಳೂರು ಜಲಮಂಡಳಿ ಅಳವಡಿಸಿಕೊಂಡಿರುವ ರೊಬೋಟಿಕ್‌ ತಂತ್ರಜ್ಞಾನದ ಯಶಸ್ವಿ ಬಳಕೆಯನ್ನು ಮುಂದುವರೆಸಿದೆ. ಕಳೆದ ಆರು ತಿಂಗಳಲ್ಲಿ 32,661 ಮೀಟರ್‌ಗಳ ತಪಾಸಣೆ ನಡೆಸಿದ್ದು, 399 ಸ್ಥಳಗಳಲ್ಲಿ ರಸ್ತೆ ಅಗತೆವನ್ನು ತಪ್ಪಿಸಿದೆ. ಈ ಮೂಲಕ ಸಾರ್ವಜನಿಕರಿಗೆ ಅಗುತ್ತಿದ್ದ ತೊಂದರೆಯನ್ನು ತಪ್ಪಿಸಿಲಾಗಿದೆ. ಇದರ ಬಳಕೆ ಮುಂದುವರಿದಲ್ಲಿ ವಾಹನ ಸವಾರರಿಗೆ ರಸ್ತೆಗುಂಡಿ, ಕಾಮಗಾರಿಯಿಂದ ಆಗುತ್ತಿದ್ದ ಕಿರಿಕಿರಿ ತಪ್ಪಲಿದೆ.

ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ ಪ್ರಸಾತ್‌ ಮನೋಹರ್ ಅವರು ಮಾತನಾಡಿ, ನಗರದ ಸಂಚಾರ ದಟ್ಟಣೆಗೆ ಕಿರಿಕಿರಿಯಾಗದಂತೆ ಹಾಗೂ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಿರುವ ಬೆಂಗಳೂರು ಜಲಮಂಡಳಿಯು, ಕಳೆದ ವರ್ಷ ನವೆಂಬರ್‌ ನಲ್ಲಿ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವನ್ನು ಪೈಪ್‌ಲೈನ್ ಹಾಗೂ ಒಳಚರಂಡಿ ದೋಷಗಳನ್ನು ಪತ್ತೆಹಚ್ಚಲು ಯಶಸ್ವಿಯಾಗಿ ಬಳಕೆ ಮಾಡುತ್ತಿದೆ. ಈ ವಿನೂತನ ತಂತ್ರಜ್ಞಾನದ ನೆರವಿನಿಂದ ಕಳೆದ ಆರು ತಿಂಗಳಲ್ಲಿ ನಗರದ ನೂರಾರು (399) ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆ ಅಗೆಯುವುದನ್ನು (Road Excavation) ತಪ್ಪಿಸಿದೆ. ಇದರಿಂದ ನಿತ್ಯ ನಗರದ ಪ್ರಯಾಣಿಕರು ಮತ್ತು ವಾಹನ ಸವಾರರು ಅನುಭವಿಸುತ್ತಿದ್ದ ಟ್ರಾಫಿಕ್ ಬವಣೆಗೆ ಬಹುದೊಡ್ಡ ಮಟ್ಟದಲ್ಲಿ ಮುಕ್ತಿ ಸಿಕ್ಕಿದೆ ಎಂದು ಹೇಳಿದರು.

BWSSB Robotic Technology

ಸಂಚಾರ ದಟ್ಟಣೆಗೆ ಕೊಡುಗೆ

ಬೆಂಗಳೂರಿನಲ್ಲಿ ರಸ್ತೆ ಅಗೆಯುವುದು ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಎಷ್ಟು ಕಿರಿಕಿರಿ ಉಂಟು ಮಾಡುತ್ತದೆ ಎಂಬುದು ಜಲಮಂಡಳಿಗೆ ಅರಿವಿದೆ. ಈ ಹಿಂದೆ, ಪೈಪ್‌ಲೈನ್ ಸೋರಿಕೆ ಅಥವಾ ಒಳಚರಂಡಿ ದೋಷವನ್ನು ಪತ್ತೆಹಚ್ಚಲು ರಸ್ತೆಯುದ್ದಕ್ಕೂ ಅಗೆಯುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರ ನಿರ್ದೇಶನದಂತೆ ಅತ್ಯಾಧುನಿ ರೋಬೋಟಿಕ್ ತಂತ್ರಜ್ಞಾನವನ್ನು ಕಾರ್ಯಾಚರಣೆಗೆ ಅಳವಡಿಸಿಕೊಂಡಿದ್ದೇವೆ ಎಂದು ವಿವರಿಸಿದರು.

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಬಫರ್‌ 18 ಕಿಮೀ ಸರ್ವಿಸ್‌ ರಸ್ತೆ ಯೋಜನೆ: ಭೂ ಸಮೀಕ್ಷೆ ಕಾರ್ಯಕ್ಕೆ ವೇಗ
ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಬಫರ್‌ 18 ಕಿಮೀ ಸರ್ವಿಸ್‌ ರಸ್ತೆ ಯೋಜನೆ: ಭೂ ಸಮೀಕ್ಷೆ ಕಾರ್ಯಕ್ಕೆ ವೇಗ

ಈ ಯಂತ್ರಗಳು ರಸ್ತೆಯನ್ನು ಅಗೆಯದೆಯೇ ಪೈಪ್‌ಲೈನ್ ಒಳಗೆ ಚಲಿಸಿ, ನಿಖರವಾಗಿ ದೋಷವನ್ನು ಪತ್ತೆಹಚ್ಚಿವೆ. ಇದರಿಂದ ಸತತ ಸುಮಾರು 32 ಕಿಲೋಮೀಟರ್‌ ವ್ಯಾಪ್ತಿಯ 399 ಕಡೆಗಳಲ್ಲಿ ರಸ್ತೆ ಅಗೆಯುವುದು ತಪ್ಪಿದ್ದು, ಸಾರ್ವಜನಿಕರಿಗೆ ತೊಂದರೆ ಆಗುವುದು ತಪ್ಪಿಸಲಾಗಿದೆ.

ತಂತ್ರಜ್ಞಾನ ಅಳವಡಿಕೆಯ ಪ್ರಮುಖಾಂಶಗಳು

32 ಕಿ.ಮೀ ರೋಬೋಟಿಕ್ ತಪಾಸಣೆ: ಜಲಮಂಡಳಿಯ ರೋಬೋಟ್‌ಗಳು ಪೈಪ್‌ಲೈನ್ ಒಳಗೆ ಬರೋಬ್ಬರಿ 32,661 ಮೀಟರ್ (ಸುಮಾರು 32.66 ಕಿ.ಮೀ) ಉದ್ದದ ಮಾರ್ಗವನ್ನು ಕ್ರಮಿಸಿ ಅತ್ಯಂತ ವೈಜ್ಞಾನಿಕವಾಗಿ ತಪಾಸಣೆ ನಡೆಸಲಾಗಿದೆ.

ನಿಖರ ದೋಷ ಪತ್ತೆ: ಈ ರೋಬೋಟಿಕ್ ತಪಾಸಣೆಯ ವೇಳೆ ಒಟ್ಟಾರೆ 394 ದೋಷಗಳನ್ನು ಅತ್ಯಂತ ನಿಖರವಾಗಿ ಗುರುತಿಸಿ, ರಸ್ತೆಗಳಿಗೆ ಹೆಚ್ಚು ಹಾನಿಯಾಗದಂತೆ ಕರಾರುವಕ್ಕಾಗಿ ಅವುಗಳಿಗೆ ಪರಿಹಾರ ಕಲ್ಪಿಸಲಾಗಿದೆ.

ತ್ವರಿತ ಸ್ಪಂದನೆ: ಈ ಆರು ತಿಂಗಳ ಅವಧಿಯಲ್ಲಿ ಬಂದಿದ್ದ ಒಟ್ಟು 404 ದೂರುಗಳ ಪೈಕಿ 399 ದೂರುಗಳನ್ನು ಈಗಾಗಲೇ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ಬಾಕಿ ಉಳಿದಿರುವ ಕೇವಲ 5 ದೂರುಗಳನ್ನು ಸಹ ಆದ್ಯತೆಯ ಮೇರೆಗೆ ಶೀಘ್ರವೇ ಬಗೆಹರಿಸಲಾಗುವುದು.

SWR: ಹುಬ್ಬಳ್ಳಿ ವಿಭಾಗದಲ್ಲಿ ರೈಲು ಸಂಚಾರ ವ್ಯತ್ಯಯ; ಹಲವು ರೈಲುಗಳು ಭಾಗಶಃ ರದ್ದು
SWR: ಹುಬ್ಬಳ್ಳಿ ವಿಭಾಗದಲ್ಲಿ ರೈಲು ಸಂಚಾರ ವ್ಯತ್ಯಯ; ಹಲವು ರೈಲುಗಳು ಭಾಗಶಃ ರದ್ದು

ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಜೊತೆಗೆ, ನಗರದ ಮೂಲಸೌಕರ್ಯಗಳಿಗೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಎಚ್ಚರ ವಹಿಸುವುದು ಜಲಮಂಡಳಿಯ ಬದ್ಧತೆ ಎಂದರು. ಮುಂದಿನ ದಿನಗಳಲ್ಲೂ ಇಂತಹ ಜನಸ್ನೇಹಿ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ನಾವು ಮುಂದುವರಿಸಲಿದ್ದೇವೆ ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+