ಜಲಮಂಡಳಿಯಲ್ಲಿ ಕೆಲಸ ಖಾಲಿ ಇದೆ ಅರ್ಜಿ ಹಾಕಿ
ಬೆಂಗಳೂರು, ಮಾ.2 : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 25.
ಸಹಾಯಕ ಅಭಿಯಂತರ 86, ಕಿರಿಯ ಅಭಿಯಂತರ 34, ಸಹಾಯಕ 12, ಕಿರಿಯ ಸಹಾಯಕ 136, ಶೀಘ್ರಲಿಪಿಕಾರ 06, ಬೆರಳಚ್ಚುಗಾರ/ಡಿಇಓ 21, ಕೆಮಿಸ್ಟ್ ಗ್ರೇಡ್ -2 2, ಪ್ರಯೋಗಾಲಯ ಸಹಾಯಕ ದರ್ಜೆ -1 2, ಪ್ರಯೋಗಾಲಯ ಸಹಾಯಕ ದರ್ಜೆ -2 6, ಮಾಪಕ ಓದುಗ 62, ಆಪರೇಟರ್ 26, ಎಲೆಕ್ಟ್ರೀಷಿಯನ್ ದರ್ಜೆ -2 9 ಹುದ್ದೆಗಳು ಖಾಲಿ ಇವೆ. [ನೇಮಕಾತಿ ಆದೇಶ ಕನ್ನಡದಲ್ಲಿ ಓದಿ]

ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. ಅಂಗೀಕೃತ ಸಂಸ್ಥೆಯಿಂದ ಕಂಪ್ಯೂಟರ್ ಬೇಸಿಕ್‌ನಲ್ಲಿ ತರಬೇತಿ ಮುಗಿಸಿರುವ ಪ್ರಮಾಣ ಪತ್ರವನ್ನು ಹೊಂದಿರಬೇಕು. [ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ]
ವಯೋಮಿತಿ : ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷ. ಪ.ಜಾ/ಪ.ಪಂ/ಪ್ರವರ್ಗ 1 ರ ಅಭ್ಯರ್ಥಿಗಳಿಗೆ 40 ವರ್ಷಗಳು, ಪ್ರವರ್ಗ 2ಎ/2ಬಿ/3ಎ/3ಬಿ 38 ವರ್ಷಗಳು. [ಬೆಸ್ಕಾಂನಲ್ಲಿ 628 ಹುದ್ದೆಗಳು ಖಾಲಿ ಇವೆ ಅರ್ಜಿ ಹಾಕಿ]
ಅರ್ಜಿ ಶುಲ್ಕ : ಅರ್ಜಿ ಸಲ್ಲಿಸುವಾಗ ಪಾವತಿ ಮಾಡುವ ಮೊತ್ತವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡಲಾಗುವುದಿಲ್ಲ. ಪ್ರವರ್ಗ 2ಎ/2ಬಿ/3ಎ/3ಬಿ/ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ., ಪ್ರ.ಜಾ/ಪ.ಪಂ/ಪ್ರವರ್ಗ 1ರ ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದ ನಂತರ ಜಲಮಂಡಳಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ Axis Bank ಚಲನ್ ಡೌನ್‌ಲೋಡ್ ಮಾಡಿಕೊಂಡು ಯಾವುದೇ ಶಾಖೆಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವೊಳಗೆ ಶುಲ್ಕವನ್ನು ಪಾವತಿ ಮಾಡಬೇಕು.












Click it and Unblock the Notifications