BWSSB: ಮಾರ್ಚ್ 31ರೊಳಗೆ ನಲ್ಲಿಗಳಿಗೆ 'ಏರಿಯೇಟರ್' ಅಳವಡಿಕೆಗೆ ತಾಕೀತು
ಬೆಂಗಳೂರು, ಮಾರ್ಚ್ 20: ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಸಿಗುವ ಏರಿಯೇಟರ್ ಅನ್ನು ನಲ್ಲಿಗಳಿಗೆ ಅಳವಡಿಕೆ ಮಾಡುವ ಮೂಲಕ ನೀರಿನ ಅನಗತ್ಯ ಪೋಲಾಗುವುದನ್ನು ತಡೆಯುವಂತೆ 'ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ' (BWSSB) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಕಟ್ಟುನಿಟ್ಟಿನ ಸೂಚನೆ ನೀಡದ್ದಾರೆ.
ಜಲಮಂಡಳಿ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಬೆಂಗಳೂರು ನಗರ ಪ್ಲಂಬರ್ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಸಭೆಯಲ್ಲಿ ಅವರು ಮಾತನಾಡಿದರು. ಇಂದಿನ ಸಂಕಷ್ಟ ಪರಿಸ್ಥಿತಿಯಲ್ಲಿ ನೀರಿನ ಮಿತ ಬಳಕೆಗೆಗಾಗಿ ಇದೇ ಮಾರ್ಚ್ 31ರೊಳಗಾಗಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಸಬೇಕು.

ಈ ನಿಯಮವು ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿ, ಐಷಾರಾಮಿ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್ (ವಾಟರ್ ಟ್ಯಾಪ್ ಮಾಸ್ಕ್) ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಇದು ನೀರಿನ ಬಿಲ್ ಅನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಹೇಳಿದರು.
ಅಳವಡಿಕೆಯಿಂದ ಶೇ.60-85 ನೀರು ರಕ್ಷಣೆ
ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಇಲ್ಲದೇ ಇರುವಂತಹ ಹೆಚ್ಚಿನ ಪ್ರಮಾಣದ ನೀರು ಪೋಲಾಗುತ್ತದೆ. ಈ ನಲ್ಲಿಗಳಲ್ಲಿ ಏರಿಯೇಟರ್ ಅಳವಡಿಸುವುದರಿಂದ ಶೇಕಡಾ 60 ರಿಂದ 85 ರಷ್ಟು ನೀರಿನ ಉಳಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ವಾಟರ್ ಟ್ಯಾಪ್ ಮಾಸ್ಕ್ ಬಳಸುವುದು ಅಗತ್ಯವಾಗಿದೆ. ಜನರು ತಾವೇ ಅಳವಡಿಸಿಕೊಳ್ಳಬಹುದು. ಅಗತ್ಯವಿದ್ದರೆ ಮಾತ್ರ ಪ್ಲಂಬರ್ ಗಳ ಸಹಾಯ ಪಡೆಯಬಹುದು ಎಂದು ಸಲಹೆ ನೀಡಿದರು.

ಮಾರ್ಚ್ 21 ರಿಂದ 31 ರ ವರೆಗೆ ಗಡುವು
ಸೂಚಿಸಲಾದ ಗ್ರಾಹಕರು ತಾವೇ ಸ್ವಯಂ ಪ್ರೇರಿತರಾಗಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಸಿಕೊಳ್ಳಲು ಮಾರ್ಚ್ 21 ರಿಂದ ಮಾರ್ಚ್ 31 ರ ವರೆಗೆ ಜಲಮಂಡಳಿ ಗಡುವು ನಿಗದಿ ಮಾಡಿದೆ. 10 ದಿನಗಳಲ್ಲಿ ಸಿಗುವ ಏರಿಯೇಟರ್ ಅಳವಡಿಸಿಕೊಳ್ಳಬೇಕು.
ಒಂದು ವೇಳೆ ಗಡುವಿನ ಅವಧಿಯಲ್ಲಿ ಈ ಏರಿಯೇಟರ್ ಅಳವಡಿಸಿಕೊಳ್ಳದೇ ಇರುವ ಕಟ್ಟಡಗಳಲ್ಲಿ ಜಲಮಂಡಳಿಯಿಂದ ಪರವಾನಗಿ ಹೊಂದಿರುವ ಪ್ಲಂಬರ್ ಗಳ ಸಹಾಯದಿಂದ ಏರಿಯೇಟರ್ ಗಳನ್ನು ಅಳವಡಿಸಲಾಗುವುದು ಮತ್ತು ವೆಚ್ಚವನ್ನು ಕಟ್ಟಡ ಮಾಲೀಕರಿಂದ ಭರಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಮನೆಯ ಗ್ರಾಹಕರಿಗೂ ಜಲಮಂಡಳಿ ಸೂಚನೆ
ಮನೆಯಲ್ಲಿ ಕೈತೊಳೆಯುವ, ಪಾತ್ರೆ ತೊಳೆಯುವ, ಶವರ್, ವಾಷ್ ಬೇಸಿನ್ ನಲ್ಲಿಗಳು ಸೇರಿದಂತೆ ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವ ಕಡೆಗಳಲ್ಲಿ ಸಾರ್ವಜನಿಕರು ಏರಿಯೇಟರ್ ಗಳನ್ನು ಅಳವಡಿಸಿಕೊಳ್ಳಬೇಕು. ಈ ಉಪಕರಣ ಮಾರುಕಟ್ಟೆಯಲ್ಲಿ 60 ರೂಪಾಯಿಗಳಿಂದ ಲಭ್ಯವಿದೆ. ಇದರಿಂದ ಜನರ ಮನೆಯಲ್ಲಿ ನೀರಿನ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ಹಾಗೆಯೇ, ನೀರಿನ ಬಿಲ್ ಕೂಡಾ ಕಡಿಮೆ ಆಗುತ್ತದೆ ಎಂದು ವಿವರಿಸಿದರು.
ಜಲಮಂಡಳಿಯಿಂದ ಪ್ಲಂಬರ್ ಗಳಿಗೆ ತರಬೇತಿ
ಜಲಮಂಡಳಿಯಿಂದ ಪರವಾನಗಿ ಹೊಂದಿರುವಂತಹ 1500 ಪ್ಲಂಬರ್‌ಗಳಿದ್ದಾರೆ. ಇವರು ತಾವು ಕೆಲಸ ಮಾಡುತ್ತಿರುವ ಹಾಗೂ ಮುಂದೆ ಮಾಡಲಿರುವ ಕಟ್ಟಡಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್ ಅಳವಡಿಸುವುದರ ಬಗ್ಗೆ ಮಾಲೀಕರಲ್ಲಿ ಜಾಗೃತಿ ಮೂಡಿಸಬೇಕು.
ಉತ್ತಮ ಗುಣಮಟ್ಟದ "ವಾಟರ್ ಟ್ಯಾಪ್ ಮಾಸ್ಕ್ (ಏರಿಯೇಟರ್)" ಅಳವಡಿಸುವುದರಿಂದ ನೀರಿನ ರಕ್ಷಣೆ ಆಗುತ್ತದೆ. ವಾಣಿಜ್ಯ ಮಳಿಗೆ, ಕೈಗಾರಿಕೆ, ಅಪಾರ್ಟ್‌ಮೆಂಟ್‌ಗಳಲ್ಲಿ, ಐಷಾರಾಮಿ ಹೋಟೆಲ್ ಗಳು ಹಾಗೂ ರೆಸ್ಟೋರೆಂಟ್ ಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಇದನ್ನು ಅಳವಡಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ತರಬೇಟಿ ನೀಡಲಾಗುವುದು ಎಂದರು.
ಪ್ಲಂಬರ್ ಗಳಿಗೆ ಪ್ರಶಂಸಾ ಪತ್ರ
ಹೆಚ್ಚಿನ ಸಂಖ್ಯೆಯಲ್ಲಿ ನಲ್ಲಿಗಳಿಗೆ ಏರಿಯೆಟ್ ರ್ ಗಳನ್ನು ಅಳವಡಿಸುವ ಪ್ಲಂಬರ್ ಗಳನ್ನು ಪ್ರೋತ್ಸಾಹಿಸಲಾಗುವುದು. ಜಲಮಂಡಳಿಯ ಪರವಾನಗಿ ಹೊಂದಿರುವ ಪ್ಲಂಬರ್‌ಗಳು ಹೆಚ್ಚಿನ ಜನರನ್ನು ಈ ನಿಟ್ಟಿನಲ್ಲಿ ಪ್ರೇರೆಪಿಸಬೇಕು. ಹೆಚ್ಚು ಏರಿಯೇಟರ್ ಅಳವಡಿಸುವ ಪ್ಲಂಬರ್‌ಗಲಿಗೆ ಜಲಮಂಡಳಿಯಿಂದ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ಅವರು ಹೇಳಿದರು.












Click it and Unblock the Notifications