Get Updates
Get notified of breaking news, exclusive insights, and must-see stories!

‍ಕಾವೇರಿ ನೀರಿನ ಸಂಪರ್ಕ ಹೊಂದುವವರಿಗೆ EMI ಸೌಲಭ್ಯ: ಪಾವತಿ ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಏಪ್ರಿಲ್ 08: ಬೆಂಗಳೂರಿನಲ್ಲಿ ಲಕ್ಷಾಂತರ ಕಾವೇರಿ ನೀರಿನ ಸಂಪರ್ಕ ಇದೆ. ಹೊಸ 110 ಹಳ್ಳಿಗಳಲ್ಲಿ ಕಾವೇರಿ ನೀರಿನ ಸಂಪರ್ಕ ಒದಗಿಸಲಾಗುತ್ತಿದೆ. ಬೇಸಿಗೆ ಬಂತೆಂದರೆ ನೀರಿಗೆ ಬೇಡಿಕೆ ಹೆಚ್ಚಾಗುವ ಜೊತೆಗೆ ಹೊಸ ಸಂಪರ್ಕ ಪಡೆಯುವವರ ಸಂಖ್ಯೆಯು ಹೆಚ್ಚಿರುತ್ತದೆ. ಹೀಗೆ ಕಾವೇರಿ ನೀರಿನ ಹೊಸ ಕನೆಕ್ಷನ್ ಪಡೆಯುವವರಿಗೆ 'ಮಾಸಿಕ ಸಮಾನ ಕಂತುಗಳ (EMI) ಮೂಲಕ ಪಾವತಿಗೆ ಅವಕಾಶ ಇದೆ ಎಂದು 'ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ' (BWSSB) ತಿಳಿಸಿದೆ.

BWSSB ಮಾಸಿಕ ಸಮಾನ ಕಂತುಗಳ (ಇಎಂಐ) ಮೂಲಕ ಕಾವೇರಿ ಸಂಪರ್ಕ ಪಡೆಯುವ ಸೌಲಭ್ಯವನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಕಾವೇರಿ ನೀರಿನ ಸಂಪರ್ಕ ಪಡೆಯುವ ನಿಟ್ಟಿನಲ್ಲಿ, ಒಮ್ಮೆಲೆ ಹಣ ಪಾವತಿಸಲು ಸಾಧ್ಯವಾಗದೇ ಇರುವಂತಹ ಅಪಾರ್ಟ್‌ಮೆಂಟ್‌ ಅಸೋಷಿಯೇಷನ್‌ಗಳಿಗೆ ಹಾಗೂ ಕಟ್ಟಡ ಮಾಲೀಕರಿಗೆ ಅನುಕೂಲ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ನೀವು ಇಎಂಐ ಮೂಲಕ ಶುಲ್ಕ ಪಾವತಿಸುವ ಸುರ್ವಣಾವಕಾಶ ನೀಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

BWSSB has Given EMI Facility to get New Cauvery Water Connection in Bengaluru

ನಗರದ ಪ್ರತಿಯೊಬ್ಬರಿಗೂ ಶುದ್ಧ ಮತ್ತು ಬಿಐಎಸ್‌ ಪ್ರಾಮಾಣೀಕೃತ ಕುಡಿಯುವ ನೀರು ಸಿಗುವಂತಾಗಬೇಕು. ಈ ಕಾರಣದಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಡಿಸಿಎಂ ಅವರು ಚಾಲನೆ ನೀಡಿದಂತೆ ಈ ಸೌಲಭ್ಯವು ಏಪ್ರಿಲ್‌ 15 ರ ನಂತರ ಲಭ್ಯವಾಗಲಿದೆ ಎಂದರು.

ಇಎಂಐ ಮೂಲಕ ಕಾವೇರಿ ನೀರಿನ ಸಂಪರ್ಕ ಪಡೆಯುವ ಸುವರ್ಣಾವಕಾಶ ಇದಾಗಿದೆ. ಅಪಾರ್ಟ್‌ಮೆಂಟ್‌ ಅಸೋಷಿಯೇಷನ್‌ಗಳು ಅಥವಾ ಮನೆಗಳ ಮಾಲೀಕರು ಈ ಸುವರ್ಣವಕಾಶವನ್ನು ಬಳಸಿಕೊಂಡು 12 ತಿಂಗಳ ಸಮಾನ ಕಂತುಗಳಲ್ಲಿ ಶುಲ್ಕ ಪಾವತಿಸುವ ಮೂಲಕ ಸಂಪರ್ಕ ಪಡೆದುಕೊಳ್ಳಬಹುದು. ಏಪ್ರಿಲ್‌ ಕೊನೆಯ ವಾರದಲ್ಲಿ ಪ್ರಾರಂಭವಾಗಲಿರುವ ಈ ಯೋಜನೆಗೆ ಎರಡು ತಿಂಗಳ ಅವಕಾಶ ನೀಡಲಾಗುತ್ತದೆ. ಅಷ್ಟರೊಳಗೆ ನೋಂದಾಯಿಸಿಕೊಂಡು ಹೊಸ ಸಂಪರ್ಕ ಪಡೆಯಬಹುದು.

BWSSB has Given EMI Facility to get New Cauvery Water Connection in Bengaluru

EMI ಸೌಲಭ್ಯದಿಂದ ನೀರಿನ ಸಂಪರ್ಕ: ಪ್ರಯೋಜನಗಳು

* ಈ ಸೌಲಭ್ಯದಿಂದ ಒಮ್ಮೆಲೆ ಡಿಮ್ಯಾಂಡ್ ನೋಟಿಸ್ ನ ಸಂಪೂರ್ಣ ಹಣ ಸಂಗ್ರಹ ಮಾಡಲು ಸಾಧ್ಯವಾಗದೇ ಇರುವ ಅಪಾರ್ಟ್‌ಮೆಂಟ್‌ಗಳಿಗೆ ಅನುಕೂಲ ಆಗಲಿದೆ.

* ಮುಖ್ಯವಾಗಿ ನಗರದ ಬಡವರಿಗೆ, ಮಧ್ಯಮ ವರ್ಗದವರಿಗೆ ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಅನುಕೂಲ ಮಾಡುವ ಜನಪರ ಕಾಳಜಿಯಿಂದ ಈ ಇಎಂಐ ಸೌಲಭ್ಯ ಯೋಜನೆ ಜಾರಿಗೆ ತರಲಾಗಿದೆ.

* ಸಮಾನ ಕಂತುಗಳಲ್ಲಿ ಹಣವನ್ನು ಪಾವತಿಸುವ ಮೂಲಕ ಸಂಪರ್ಕ ಪಡೆಯಬಹುದು.

* ಡಿಮ್ಯಾಂಡ್‌ ನೋಟೀಸ್‌ನ ಶೇಕಡಾ 20 ರಷ್ಟು ಪಾವತಿಸಿ ಇಎಂಐ ಪಡೆಯಲು ಅವಕಾಶ ಇದೆ.

* ಗ್ರಾಹಕರು ಬಾಕಿ ಶೇಕಡಾ 80 ರಷ್ಟು ಹಣವನ್ನು ಪಾವತಿಸಲು 12 ತಿಂಗಳ ಅವಕಾಶ ನೀಡಲಾಗುತ್ತದೆ.

* ಮಾಸಿಕ ಸಮಾನ ಕಂತುಗಳಲ್ಲಿ ಗ್ರಾಹಕರಿಗೆ ಹಣ ಪಾವತಿ ಅವಕಾಶ ಸಿಗುತ್ತದೆ.

Take a Poll

EMI ಸಹಿತ ಸಂಪರ್ಕ ಪಡೆಯುವವರಿಗೆ ಷರತ್ತು ಅನ್ವಯ

* ಡಿಮ್ಯಾಂಡ್‌ ನೊಟೀಸ್‌ನ (ಅನ್ವಯಿಸಿದಲ್ಲಿ ಪ್ರೋರೇಟಾ ಶುಲ್ಕ, ಮೀಟರ್‌ ಶುಲ್ಕ, ಇನ್ಸ್ ಪೆಕ್ಷನ್‌ ಚಾರ್ಜಸ್‌, ಜಿಬಿ ವಾಸ್ಟ್‌, ಬಿಸಿಸಿ ಶುಲ್ಕಗಳು ಹಾಗೂ ಲೈನ್‌ ಕಾಸ್ಟ್‌ ಸೇರಿದ) ಶೇಕಡಾ 20 ರಷ್ಟು ಹಣ ಮೊದಲ ಕಂತಾಗಿ ಕಟ್ಟಬೇಕು.

* ಇನ್ನುಳಿದ ಶೇಕಡಾ 80 ರಷ್ಟು ಶುಲ್ಕವನ್ನು ಕ್ರಮೇಣ ಮಾಸಿಕ ಕಂತಿನ ರೂಪದಲ್ಲಿ ಒಂದು ವರ್ಷದೊಳಗೆ ಪಾವತಿಸಬೇಕು.

* ಅಪಾರ್ಟ್‌ಮೆಂಟ್‌ ಅಸೋಷಿಯೇಷನ್‌ಗಳು ಹಾಗೂ ಮನೆ/ಕಟ್ಟಡ ಮಾಲೀಕರಿಗೆ ಮಾತ್ರ EMI ಸೌಲಭ್ಯ ಲಭ್ಯ.

ಅಂತರ್ಜಲ ಕುಸಿತ ತಡೆಗೆ ಸರ್ಕಾರ ಕ್ರಮ

ಬೆಂಗಳೂರಿನ ಹೃದಯ ಭಾಗಕ್ಕಿಂತಲೂ ನಗರದಿಂದ ದೂರವಿರುವ ಹೊರವಲಯದ ಪ್ರದೇಶಗಳಲ್ಲಿರುವ ನಿವಾಸಿಗಳು ಅಂತರ್ಜಲದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಅಂತರ್ಜಲ ಬಳಕೆ ಶೇಕಡಾ 187 ರಷ್ಟು ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಅಂತರ್ಜಲ ಪ್ರಮಾಣದಲ್ಲಿ ಗಣನೀಯ ಕುಸಿತವಾಗಿದೆ. ಮುಂದೆ ಹೀಗಾಗದಂತೆ ತಡೆಯಲು ರಾಜ್ಯ ಸರ್ಕಾರ ದೂರದ ಪ್ರದೇಶಗಳ ಜನರನ್ನು ಕಾವೇರಿ ನೀರು ಸರಬರಾಜು ವ್ಯಾಪ್ತಿಗೆ ಒಳಪಡಿಸುವಂತೆ ಮಾಡುತ್ತಿದೆ. ಅದಕ್ಕಾಗಿ ಇಎಂಐ ನಂತರ ಹಲವು ಉಪಕ್ರಮ ಜಾರಿ ಮಾಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+