ಬೆಂಗಳೂರಲ್ಲಿ ಮನೆ - ಫ್ಲಾಟ್ ಖರೀದಿ ಸಾಧ್ಯವೇ: ಇಲ್ಲಿದೆ ಮಹತ್ವದ ಸಲಹೆಗಳು!
ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಈ ರೀತಿ ಇರುವಾಗಲೇ ಬೆಂಗಳೂರಿನಲ್ಲಿ ಭೂಮಿ ಹಾಗೂ ಫ್ಲಾಟ್ ಖರೀದಿ ಮಾಡುವುದಕ್ಕೆ ಎಷ್ಟು ಹಣ ಇರಬೇಕು ಅಥವಾ ಎಷ್ಟು ಹಣವಿದ್ದರೆ ಬೆಂಗಳೂರಿನಲ್ಲಿ ಭೂಮಿ ಖರೀದಿ ಮಾಡಬಹುದು ಎನ್ನುವ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ. ಬೆಂಗಳೂರಿನಲ್ಲಿ ಫ್ಲಾಟ್‌ಗಳ ಬೆಲೆಗಳು ಈಗ ₹1.5-2 ಕೋಟಿ ರೂಪಾಯಿಗೆ ತಲುಪುತ್ತಿದೆ. ಈ ಸಂದರ್ಭದಲ್ಲಿ ಮನೆ ಖರೀದಿ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಚರ್ಚೆ ಜೋರಾಗಿದೆ.
ಬೆಂಗಳೂರಿನಲ್ಲಿ ಮನೆ ಖರೀದಿ ಕೇವಲ ಶ್ರೀಮಂತರಿಗೆ ಮಾತ್ರ ಸಾಧ್ಯವೇ ಬಡವರು ಹಾಗೂ ಮಧ್ಯಮ ವರ್ಗದವರು ಮನೆ ಹಾಗೂ ಫ್ಲಾಟ್ ಖರೀದಿ ಮಾಡಲು ಸಾಧ್ಯವಿಲ್ಲವೇ ಎನ್ನುವ ವಿಚಾರವು ಪದೇ ಪದೇ ಚರ್ಚೆ ಆಗುತ್ತಿದೆ. ಒಂದು ಫ್ಲಾಟ್ ಖರೀದಿ ಮಾಡಬೇಕೆಂದರೆ ಎಷ್ಟು ಆದಾಯ ಬೇಕು, ಮನೆಗಳನ್ನು ಖರೀದಿಸಲು ಇರುವ ಮಾರ್ಗಗಳೇನು ಎನ್ನುವ ಬಗ್ಗೆ ರೆಡ್ಡಿಟ್ ಪೋಸ್ಟ್ ಹಂಚಿಕೊಳ್ಳಲಾಗಿದ್ದು. ಹೊಸ ಚರ್ಚೆ ಶುರುವಾಗಿದೆ. ದೇಶದಾದ್ಯಂತ ಕಳೆದ ಐದು ವರ್ಷಗಳ ಅವಧಿಯಲ್ಲಿ ಅದರಲ್ಲೂ ಕೋವಿಡ್ ನಂತರ ಭೂಮಿ ಹಾಗೂ ಬಂಗಾರದ ಬೆಲೆ ಹೆಚ್ಚಳವಾಗಿದೆ.

ಇದಕ್ಕೆ ಎರಡು ಮುಖ್ಯ ಕಾರಣಗಳೆಂದರೆ ಭೂಮಿ ಹಾಗೂ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ದೀರ್ಘಕಾಲದಲ್ಲಿ ಒಳ್ಳೆಯ ಲಾಭ ತರಲಿದೆ ಎನ್ನುವುದು. ಬರುವ ಸಂಬಳ ಇರುವ ಇಎಂಐ ಹಾಗೂ ಸಾಲ ಮತ್ತು ಆದಾಯ ಮಟ್ಟಗಳನ್ನು ಸೇರಿಸಿ, ಬೆಂಗಳೂರಿನಲ್ಲಿ ಭೂಮಿ ಅಥವಾ ಆಸ್ತಿ ಖರೀದಿ ಮಾಡುವುದಕ್ಕೆ ಸಾಧ್ಯವಿದೆಯೇ ಎನ್ನುವ ಬಗ್ಗೆ ಚರ್ಚೆ ನಡೆದಿದೆ.
ಎರಡು ವರ್ಷಗಳ ಹಿಂದೆ ದೊಮ್ಮಸಂದ್ರದಲ್ಲಿ ₹78 ಲಕ್ಷಕ್ಕೆ 3BHK ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಅದೇ ಈಗ ಈ ಬೆಲೆಯು ₹1.5-2 ಕೋಟಿಗೆ ಹೇಗೆ ಮನೆಗಳನ್ನು ಜನ ಖರೀದಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಮತ್ತೊಬ್ಬ ಖರೀದಿದಾರರು ತಿಂಗಳಿಗೆ ₹3 ಲಕ್ಷ ಆದಾಯವಿದೆ. ಆದರೆ 2023 ರಲ್ಲಿ ₹90 ಲಕ್ಷ ಮನೆ ಖರೀದಿಸಿದ್ದೆ, EMI ಹೊರೆಯೊಂದಿಗೆ ಇನ್ನೂ ಹೋರಾಡುತ್ತಿದ್ದಾರೆ ಎಂದಿದ್ದಾರೆ. ಕೆಲವರು ಮನೆ ಖರೀದಿ ಮಾಡುಬಹುದು ಆದರೆ 20 ವರ್ಷಗಳ ಸುದೀರ್ಘ ಇಎಂಐ ಸುಲಭವೇ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಕೆಲವರು ಇಎಂಐಗಳ ಭಯ ಹಾಗೂ ಉದ್ಯೋಗದ ಆತಂಕದ ಬಗ್ಗೆಯೂ ಮಾತನಾಡಿದ್ದಾರೆ. ಈಗೆಲ್ಲಾ ಇರುವ ಕೆಲಸ ಯಾವಾಗಬೇಕಾದರೂ ಹೋಗಬಹುದು. ಈ ರೀತಿ ಇರುವಾಗ ಕೆಲಸವನ್ನು ನಂಬಿಕೊಂಡು ಮನೆ ಖರೀದಿಯಂತಹ ಸಾಹಸಕ್ಕೆ ಇಳಿಯುವುದು ಕಷ್ಟ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡುವುದು ಜನ ಸಾಮಾನ್ಯರಿಗೆ ತುಸು ಕಷ್ಟವೇ. ಆದರೆ ಮೊದಲು ಬಾಡಿಗೆಯಿಂದ ಲೀಸ್ ಮನೆ ಅಲ್ಲಿಂದ ಸ್ವಂತ ಮನೆ ಖರೀದಿ ಮಾಡುವ ಕನಸು ಕಾಣಬಹುದು. ಏಕಾಏಕಿ ಮಾರ್ಕೆಂಟಿಂಗ್ ಜಾಹೀರಾತುಗಳಿಗೆ ಮರುಳಾಗಬೇಡಿ ಎಂದು ಹಲವರು ಎಚ್ಚರಿಸಿದ್ದಾರೆ.
ಅಲ್ಲದೇ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡುವುದು ಈಗ ಸುಲಭವಲ್ಲ. ಹೊರ ವಲಯ ಅಥವಾ ನಿಮ್ಮ ಆದಾಯಕ್ಕೆ ತಕ್ಕಂತೆ ಮನೆ ಖರೀದಿ ಮಾಡುವುದು ಉತ್ತಮ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಏಕಾಏಕಿ ಮನೆ ಖರೀದಿ ಮಾಡಲು ಸಾಧ್ಯವಾಗದೆ ಇದ್ದರೆ ಜಾಗ ಖರೀದಿ ಮಾಡಿ ಆ ನಂತರ ಮನೆ ಕಟ್ಟುವ ಅಥವಾ ಆ ಜಾಗವನ್ನು ಮಾರಾಟ ಮಾಡಿ ಮನೆ ಖರೀದಿ ಮಾಡುವುದು ಉತ್ತಮ ಎನ್ನುತ್ತಾರೆ ಈಗಾಗಲೇ ಇದರಲ್ಲಿ ಅನುಭವ ಹೊಂದಿರುವವರು.












Click it and Unblock the Notifications