Get Updates
Get notified of breaking news, exclusive insights, and must-see stories!

ಬೆಂಗಳೂರಿನ ಜನರಿಗೆ ಹೊಸ ವರ್ಷಕ್ಕೆ ಹೊಸ ಶುಲ್ಕದ ಬರೆ

ಬೆಂಗಳೂರು, ನವೆಂಬರ್ 10: ಬೆಂಗಳೂರು ನಗರದಲ್ಲಿ ಮನೆಯಿಂದ ಕಸ ಸಂಗ್ರಹಣೆ ಮಾಡಲು ಶುಲ್ಕ ನೀಡಬೇಕೆ?. ಹೌದು 2025ರಿಂದ ಈ ಮಾದರಿ ಶುಲ್ಕವನ್ನು ವಸೂಲಿ ಮಾಡಲು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿ. ಪ್ರಸ್ತಾವನೆ ಸಿದ್ಧಗೊಳಿಸಿದೆ. ಇದರಿಂದಾಗಿ ವಾರ್ಷಿಕ 600 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಸಂಗ್ರಹ ಮಾಡುವ ಗುರಿಯನ್ನು ಸಹ ಹಾಕಿಕೊಳ್ಳಲಾಗಿದೆ. ಇದು ಇನ್ನೂ ಪ್ರಸ್ತಾವನೆ ಹಂತದಲ್ಲಿದ್ದು, ಅಂತಿಮ ಒಪ್ಪಿಗೆ ಸಿಕ್ಕಿಲ್ಲ.

ಮನೆಯಿಂದ ಕಸ ಸಂಗ್ರಹ ಮಾಡಲು ಬಳಕೆದಾರರ ಶುಲ್ಕವನ್ನು ವಸೂಲಿ ಮಾಡುವುದು ಪ್ರಸ್ತಾವನೆಯಾಗಿದೆ. 2025-26ನೇ ಆರ್ಥಿಕ ವರ್ಷದಿಂದ ಈ ಮಾದರಿ ಶುಲ್ಕವನ್ನು 46 ಲಕ್ಷ ಮನೆಗಳಿಂದ ಸಂಗ್ರಹ ಮಾಡಲು ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ. ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಈ ಮಾದರಿ ಶುಲ್ಕಕ್ಕೆ ಈಗ ಅಂತಿಮ ರೂಪ ನೀಡಿ ಪ್ರಸ್ತಾವನೆ ತಯಾರು ಮಾಡಲಾಗಿದೆ.

BSWML Proposed To Collect User Fees For Disposal Of Waste From Home

ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿ. ಮನೆಯಿಂದ ಕಸ ಸಂಗ್ರಹ ಮಾಡಲು ಶುಲ್ಕವನ್ನು ಸಂಗ್ರಹ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಜನರು ಆಸ್ತಿ ತೆರಿಗೆ ಪಾವತಿ ಮಾಡುವಾಗಲೇ ಕಸ ನಿರ್ವಹಣಾ ಶುಲ್ಕವನ್ನು ಸೇರಿಸಿ ಸಂಗ್ರಹ ಮಾಡುವ ಪ್ರಸ್ತಾವನೆ ಇದಾಗಿದ್ದು, ಸರ್ಕಾರ ಇನ್ನೂ ಅಂತಿಮ ಒಪ್ಪಿಗೆ ನೀಡಿಲ್ಲ.

ಎಷ್ಟು ಶುಲ್ಕ ಸಂಗ್ರಹ: ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದ ಸುದ್ದಿಗಳಿಗೆ ಈಗ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿ. ಅಂತಿಮ ರೂಪ ನೀಡಿ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ನಗರದ ಶಾಸಕರು ಪ್ರತಿ ಮನೆಗೆ 200 ರೂ. ಶುಲ್ಕವನ್ನು ಸಂಗ್ರಹ ಮಾಡಬಹುದು ಎಂದು ಕಳೆದ ವರ್ಷ ಸಲಹೆಗಳನ್ನು ನೀಡಿದ್ದರು.

ಈ ಪ್ರಸ್ತಾವನೆಗೆ ಅಂತಿಮ ಒಪ್ಪಿಗೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿ. ಇದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಬೇಕಿದೆ.

ಕಸ ಸಂಗ್ರಹ ಶುಲ್ಕ ನಿಗದಿಗೆ ಒಟ್ಟು 6 ವಿಭಾಗ ಮಾಡಲಾಗಿದೆ. ಪ್ರತಿ ತಿಂಗಳು 200 ರೂ. ನಿಂದ 400 ರೂ. ತನಕ ಶುಲ್ಕವನ್ನು ಸಂಗ್ರಹ ಮಾಡುವ ಪ್ರಸ್ತಾವನೆ ಇದಾಗಿದೆ. ಆದರೆ ಹೋಟೆಲ್, ವಾಣಿಜ್ಯ ಸಂಕೀರ್ಣ ಇವುಗಳಿಗೆ ಯಾವ ಮಾದರಿಯಲ್ಲಿ ಶುಲ್ಕ ಸಂಗ್ರಹ ಮಾಡಲಾಗುತ್ತದೆ ಎಂಬ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಇಲ್ಲ. ಕೇವಲ ಮನೆಯಿಂದ ಶುಲ್ಕ ಸಂಗ್ರಹ ಮಾಡುವ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.

ಬಿಬಿಎಂಪಿ ಕಸ ಸಂಗ್ರಹ ಶುಲ್ಕ ಸಂಗ್ರಹ ಮಾಡಲು ಘನ ತ್ಯಾಜ್ಯ ನಿರ್ವಹಣಾ ಬೈಲಾ 2019, ಬಿಬಿಎಂಪಿ ಕಾಯ್ದೆ 2020ರ ಅಡಿ ಕಾನೂನಿನ ಅಡೆತಡೆಗಳಿವೆ. ಹಸಿರು ನ್ಯಾಯಾಧೀಕರಣದ ಆದೇಶವನ್ನು ಪಾಲಿಕೆ ಪಾಲನೆ ಮಾಡಬೇಕಿದೆ. ಆದ್ದರಿಂದ ಇದನ್ನು ಆಸ್ತಿ ತೆರಿಗೆ ಜೊತೆಯೇ ಸೇರಿಸಿ ಸಂಗ್ರಹಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದು ವೇಳೆ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿ. ಮನೆಯಿಂದ ಕಸ ಸಂಗ್ರಹ ಮಾಡಲು ಶುಲ್ಕ ಹಾಕಿದರೆ ನಗರದ ಖಾಲಿ ಸೈಟುಗಳಲ್ಲಿ ಎಲ್ಲೆಂದರಲ್ಲಿ ಜನರು ಕಸವನ್ನು ಎಸೆಯುತ್ತಾರೆ. ಈಗಲೇ ಕಸ ಸಂಗ್ರಹ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಪ್ರತಿ ತಿಂಗಳು ಶುಲ್ಕ ಕಟ್ಟಿಯೂ ಸರಿಯಾಗಿ ಮನೆಗಳಿಂದ ಕಸ ಸಂಗ್ರಹ ಮಾಡದಿದ್ದರೆ ಯಾರು ಹೊಣೆ? ಎಂದು ಜನರು ಪ್ರಶ್ನೆ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+