Breaking: ಬೆಂಗಳೂರಿನ ಹೋಟೆಲ್‌ಗಳು ರಾತ್ರಿ 1ರವರೆಗೂ ಓಪನ್: ಪೊಲೀಸರಿಗೆ ಸೂಚನೆ
ಬೆಂಗಳೂರು,ಅ.14: ಬೆಂಗಳೂರು ನಗರದಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೂ ಹೋಟೆಲ್‌ಗಳು ತೆಗೆಯಲು ಅವಕಾಶ ನೀಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ 2016ರಲ್ಲಿಯೇ ಹೊರಡಿಸಿದ ಆದೇಶದ ಪ್ರಕಾರ ಬೆಂಗಳೂರು ನಗರದಲ್ಲಿ ಹೋಟೆಲ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ ತಿನಿಸುಗಳನ್ನು ಒದಗಿಸುವ ವ್ಯಾಪಾರಿಗಳು ರಾತ್ರಿ 1ರವರೆಗೂ ಕಾರ್ಯನಿರ್ವಹಿಸಲು ಅನುಮತಿ ನೀಡಿ ಆದೇಶ ಹೊರಡಿಸಲಾಗಿತ್ತು.

ಪೊಲೀಸ್ ಇಲಾಖೆಯೇ ಆದೇಶ ನೀಡಿದ್ದರೂ ಸಹ ಪೊಲೀಸರು ರಾತ್ರಿ 11 ಗಂಟೆಯಾಗುತ್ತಿದ್ದಂತೆ ಹೋಟೆಲ್‌ಗಳನ್ನು ಬಂದ್ ಮಾಡಿಸುತ್ತಿದ್ದರು. ಇದನ್ನು ಖಂಡಿಸಿ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದಿಂದ ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು.

ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೊಂದು ಆದೇಶ ಹೊರಡಿಸಿರುವ ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ, ಹೋಟೆಲ್‌ಗಳ ಸಮಯ ವಿಸ್ತರಣೆಯ ಬಗ್ಗೆ ನಗರ ಉಪ ಪೊಲೀಸ್ ಆಯುಕ್ತರು ತಮ್ಮ ಅಧೀನದ ಅಧಿಕಾರಿ, ಸಿಬ್ಬಂದಿಗೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳುವಳಿಕೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.












Click it and Unblock the Notifications