ಸುತ್ತಿಗೆಯಿಂದ ಹೊಡೆದು ಕಾಮುಕನಿಂದ ತಪ್ಪಿಸಿಕೊಂಡ ಮಹಿಳಾ ಟೆಕ್ಕಿ

ಬೆಂಗಳೂರು, ಜನವರಿ 21: ಮನೆಗೆ ದರೋಡೆ ಮಾಡಲು ಬಂದು ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸುತ್ತಿಗೆಯಿಂದ ಹೊಡೆದು ಮಹಿಳಾ ಟೆಕ್ಕಿ ಪಾರಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಮನೆ ಬಾಗಿಲು ಮುರಿದು ಒಳಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿನ್ನಪ್ಪನಹಳ್ಳಿಯಲ್ಲಿ ಸಂಜೆ ಸುಮಾರು 4.30ಕ್ಕೆ ಈ ಘಟನೆ ನಡೆದಿದೆ.

ಸುತ್ತಿಗೆಯಿಂದ ಒದೆ ತಿಂದ ಆರೋಪಿಯಿಂದ ಪಾರಾಗುವ ಮೊದಲು ತನ್ನ ಹೆಸರನ್ನು ಅರುಣ್ ಎಂದು ಹೇಳಿದ್ದು, ಅಕ್ಕಪಕ್ಕದ ಮನೆಯವರು ಸರಿಯಾದ ಸಮಯಕ್ಕೆ ಬಂದಿದ್ದರಿಂದ ಪ್ರಾಣ ಉಳಿಯಿತು ಎಂದು ಸಂತ್ರಸ್ತೆ ಹೇಳಿದ್ದಾರೆ.

Brave techie in Bengaluru attacks man, foils bid to rape her

ಮನೆಯ 2ನೇ ಅಂತಸ್ತಿನಲ್ಲಿರುವ ಮಹಿಳಾ ಟೆಕ್ಕಿ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳ ಕೈಗೆ ಸಿಕ್ಕಿದ್ದನು ಬಾಚಿಕೊಳ್ಳುತ್ತಿದ್ದ. ಶಬ್ಧವಾದ ಕೂಡಲೇ ಎದ್ದ ಮಹಿಳಾ ಟೆಕ್ಕಿ ಕೂಡಲೇ ಮನೆಯ ಹಾಲ್ ಗೆ ಬಂದಿದ್ದಾರೆ.

ಈ ವೇಳೆ ಆಕೆಯನ್ನು ಕಂಡ ಕಳ್ಳ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ತನ್ನ ಬಳಿ ಗನ್ ಇದ್ದು, ನಿನ್ನನ್ನು ಇಲ್ಲೇ ಕೊಂದು ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಆತ ಮುಂದಾಗಿದ್ದು, ಈ ವೇಳೆ ಆಕೆ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಅಲ್ಲದೆ ಕಾಪಾಡಿ ಕಾಪಾಡಿಎಂದು ಕೂಗುತ್ತಲೇ ಆತನ ಬಿಗಿ ಹಿಡಿತದಿಂದ ತಪ್ಪಿಸಿಕೊಂಡು ಟೇಬಲ್ ಮೇಲಿದ್ದ ಸುತ್ತಿಗೆಗೆ ಕೈ ಹಾಕಿದ್ದಾಳೆ. ಸುತ್ತಿಗೆ ಸಿಗುತ್ತಲೇ ಆತನನ್ನು ಮನಸೋ ಇಚ್ಚೆ ಥಳಿಸಿದ್ದಾರೆ.

ಈ ವೇಳೆ ಮಹಿಳೆಯ ಕೂಗಾಟ ಕೇಳಿದ ಅಕ್ಕಪಕ್ಕದ ಮನೆಯವರು ಮನೆಯತ್ತ ಧಾವಿಸುತ್ತಲೇ ಕಾಲಿಗೆ ಬುದ್ಧಿ ಹೇಳಿದ ಕಾಮುಕ 2ನೇ ಅಂತಸ್ತಿನಿಂದಲೇ ಕೆಳಗ ಧುಮುಕಿ ಪರಾರಿಯಾಗಿದ್ದಾನೆ. ಆತ ಸುಮಾರು 30 ರಿಂದ 35 ವರ್ಷದೊಳಗಿನವನಾಗಿದ್ದು, ಇಂಗ್ಲಿಷ್ ಮಾತನಾಡುತ್ತಿದ್ದನು ಎಂದು ಯುವತಿ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+