Get Updates
Get notified of breaking news, exclusive insights, and must-see stories!

ಬೆಂಗಳೂರು ಶಾಸಕರ ಸಾಧನೆ ಸಮೀಕ್ಷೆ ವರದಿ

ಬೆಂಗಳೂರು, ಅ.31 : ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಶಾಸಕರು ಒಂದು ವರ್ಷದ ಅವಧಿಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದಾರೆಯೇ?. ಬಿಪ್ಯಾಕ್ ಮತ್ತು ದಕ್ಷ ಸಂಸ್ಥೆ ನಡೆಸಿದ ಸಮೀಕ್ಷೆಯ ಫಲಿತಾಂಶ ಹೊರಬಂದಿದ್ದು, ಮಹಾನಗರದ ಶಾಸಕರು 10ಕ್ಕೆ ಸರಾಸರಿ 5.47 ಅಂಕಗಳನ್ನು ಗಳಿಸಿದ್ದಾರೆ.

28 ವಿಧಾನಸಭಾ ಕ್ಷೇತ್ರಗಳ 4167 ನಿವಾಸಿಗಳ ಅಭಿಪ್ರಾಯವನ್ನು 25 ಪ್ರಶ್ನೆಗಳ ಮೂಲಕ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಶಾಸಕರು ಗಳಿಸಿದ ಹೆಚ್ಚಿನ ಅಂಕವೆಂದರೆ 6.21 ಮತ್ತು ಅತೀ ಕಡಿಮೆ ಎಂದರೆ 3.45.[ಸಮೀಕ್ಷೆಯ ವಿವರ ಇಲ್ಲಿದೆ]

ಬೆಂಗಳೂರು ನಗರದಲ್ಲಿ ಉತ್ತಮ ಆಡಳಿತದ ಆಶಯವನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಬಿಪ್ಯಾಕ್ ಮತ್ತು ದಕ್ಷ ಸಂಸ್ಥೆ ಸ್ವತಂತ್ರವಾಗಿ ಸಿದ್ಧಪಡಿಸಿರುವ 'ಬೆಂಗಳೂರು ಶಾಸಕರ ಸಾಧನೆ ಮತ್ತು ಅಭಿಪ್ರಾಯ' ಸಮೀಕ್ಷೆ ಫಲಿತಾಂಶ ಶಾಸಕರ ಸಾಧನೆಯ ವಿವರಗಳನ್ನು ಒಳಗೊಂಡಿದೆ. [ಶಾಸಕರ ಸಾಧನೆ ನೋಡಿ]

ಈ ಸಮೀಕ್ಷೆ ಕೇವಲ ಶಾಸಕರ ಕಾರ್ಯಗಳನ್ನು ಬಿಂಬಿಸುವುದಿಲ್ಲ. ಸರ್ಕಾರದ ಕಾರ್ಯವೈಖರಿಯನ್ನು ತೋರಿಸುತ್ತದೆ. ಸರ್ಕಾರದ ಅನುದಾನದ ಸಹಾಯವಿಲ್ಲದೆ ಶಾಸಕರು ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದು ಸತ್ಯ. ಆದ್ದರಿಂದ ಬೆಂಗಳೂರು ನಗರಕ್ಕೆ ಸರ್ಕಾರ ಎಷ್ಟು ಗಮನ ನೀಡಿದೆ ಎಂಬುದು ಈ ಸಮೀಕ್ಷೆಯಿಂದ ಬಯಲಾಗಿದೆ.

ಜನರು ನೀಡಿರುವ ಉತ್ತರಗಳ ಆಧಾರದ ಮೇಲೆ 10ಕ್ಕೆ 6.21 ಅಂಕಗಳಿಸಿರುವ ಕೆ.ಆರ್.ಪುರಂ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಎ.ಬಸವರಾಜ್ ಮೊದಲ ಸ್ಥಾನಗಳಿಸಿದ್ದಾರೆ. ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಕೊನೆಯ ಸ್ಥಾನಗಳಿಸಿದ್ದರೆ, ಕೃಷ್ಣಪ್ಪ ಪುತ್ರ ಮತ್ತು ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯ ಕೃಷ್ಣ 26ನೇ ಸ್ಥಾನಗಳಿಸಿದ್ದಾರೆ.

10ಕ್ಕೆ 6.15 ಅಂಕಗಳಿಸಿರುವ ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರಾಜು, 6.5 ಅಂಕಗಳಿಸಿರುವ ರಾಜಾಜಿನಗರ ಶಾಸಕ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್, 5.97 ಅಂಕಗಳಿಸಿರುವ ಮಲ್ಲೇಶ್ವರಂ ಕ್ಷೇತ್ರದ ಬಿಜೆಪಿ ಶಾಸಕ ಡಾ.ಸಿ.ಎಸ್.ಅಶ್ವಥ್ ನಾರಾಯಣ ಪಟ್ಟಿಯಲ್ಲಿ ಐದನೇ ಸ್ಥಾನಗಳಲ್ಲಿದ್ದಾರೆ. 6.11 ಅಂಕಗಳಿಸಿರುವ ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಎಸ್.ವಿಜಯಕುಮಾರ್ 27ನೇ ಸ್ಥಾನ ಪಡೆದಿದ್ದರೆ. ಬಿಜೆಪಿ ಹಿರಿಯ ನಾಯಕ ಮತ್ತು ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್.ಅಶೋಕ್ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ 11 ಮತ್ತು 12ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

suresh kumar

ಕುಸಿದ ಸಚಿವರು : ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಾರಿಗೆ ಖಾತೆ ಹೊಂದಿರುವ ಮತ್ತು ಬೆಂಗಳೂರು ನಗರದ ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು 3.96 ಅಂಕಗಳಿಸಿದ್ದಾರೆ. ಗೃಹ ಸಚಿವ ಕೆಜೆ ಜಾರ್ಜ್ ಸಹ ಉತ್ತಮ ಅಂಕಗಳನ್ನುಗಳಿಸುವಲ್ಲಿ ವಿಫಲರಾಗಿದ್ದಾರೆ.

ಸಮೀಕ್ಷೆ ಕಾಂಗ್ರೆಸ್ ಪಕ್ಷದ ಶಾಸಕರ ಕೆಲಸಗಳ ಮೇಲೆ ಬೆಳಕು ಚೆಲ್ಲಿದ್ದು ತಮ್ಮದೇ ಪಕ್ಷದ ಸರ್ಕಾರ ಆಡಳಿತದಲ್ಲಿದ್ದರೂ ಶಾಸಕರು ಜನರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ಉತ್ತಮ ಸಾಧನೆ ಮಾಡಿದ್ದ ಪಕ್ಷ ಒಂದು ವರ್ಷದ ಅವಧಿಯಲ್ಲಿ ಅದನ್ನು ಉಳಿಸಿಕೊಳ್ಳುವತ್ತ ಗಮನಹರಿಸಿಲ್ಲ.

ಜೆಡಿಎಸ್ ಸಾಧನೆ ಏನು : ಜೆಡಿಎಸ್ ಪಕ್ಷದ ಮೂವರು ಶಾಸಕರು ಬೆಂಗಳೂರು ನಗರದಲ್ಲಿದ್ದು, ಮಹಾಲಕ್ಷ್ಮೀ ಲೇಔಟ್‌ನ ಗೋಪಾಲಯ್ಯ, ಪುಲಿಕೇಶಿ ನಗರದ ಶ್ರೀನಿವಾಸ ಮೂರ್ತಿ ಮತ್ತು ಚಾಮರಾಜಪೇಟೆಯ ಜಮೀರ್ ಅಹಮದ್ ಖಾನ್ ಸೇರಿ 5.97 ಎಷ್ಟು ಅಂಕ ಪಡೆದಿದ್ದಾರೆ. 5.96 ಅಂಕ ಪಡೆದಿರುವ ಶ್ರೀನಿವಾಸ ಮೂರ್ತಿ ಅವರು ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ.

ರಾಜಕೀಯ ಪಕ್ಷಗಳು ಗಳಿಸಿರುವ ಅಂಕ
ಬಿಜೆಪಿ (12 ಕ್ಷೇತ್ರ) - 5.53
ಕಾಂಗ್ರೆಸ್ (13 ಕ್ಷೇತ್ರ) - 5.30
ಜೆಡಿಎಸ್ ( 3 ಕ್ಷೇತ್ರ) - 5.94

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+