ಆಗಸ್ಟ್‌ ಅಂತ್ಯದೊಳಗೆ ವಿದ್ಯಾರ್ಥಿಗಳ ಕೈಗೆ ಬಿಎಂಟಿಸಿ ಸ್ಮಾರ್ಟ್‌ ಪಾಸ್‌

ಬೆಂಗಳೂರು, ಜು.24: ಬಿಎಂಟಿಸಿಯು ವಿದ್ಯಾರ್ಥಿಗಳ ರಿಯಾಯಿತಿ ಬಸ್‌ಪಾಸ್‌ಗಳನ್ನು ನೀಡಲು ವಿಳಂಬ ಮಾಡುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿತ್ತು. ಇದೀಗ ಬಿಎಂಟಿಸಿ ಮೌನ ಮುರಿದಿದ್ದು ಆಗಸ್ಟ್‌ ಅಂತ್ಯದೊಳಗೆ ರಿಯಾಯಿತಿ ಬಸ್‌ಪಾಸ್‌ ನೀಡುವುದಾಗಿ ತಿಳಿಸಿದೆ.

ಇಘಾಗಲೇ 500 ಸ್ಮಾರ್ಟ್‌ ಪಾಸ್‌ಗಳನ್ನು ನೀಡಲಾಗಿದೆ, ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕವೇ ಪಾಸ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ, ಮೊಬೈಲ್‌ನಲ್ಲಿ 161 ಡಯಲ್‌ ಮಾಡಿದರೆ ಅದರಲ್ಲಿ ಅರ್ಜಿ ದೊರೆಯುತ್ತದೆ ಅದನ್ನು ಭರ್ತಿ ಮಾಡಿ ಸಬ್‌ಮಿಟ್‌ ಮಾಡಿದರೆ ವಿದ್ಯಾರ್ಥಿಗಳ ಮನೆಗೆ ಬಸ್‌ ಪಾಸ್‌ ಬರುವ ಸೌಲಭ್ಯವನ್ನು ಮಾಡಿದ್ದೇವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್‌ ತಿಳಿಸಿದ್ದಾರೆ.

BMTC will issue smartcard passes to students by Aug-end

ಸದ್ಯಕ್ಕೆ ಕಳೆದ ವರ್ಷದ ಬಸ್‌ಪಾಸ್‌ ತೋರಿಸಿ ವಿದ್ಯಾರ್ಥಿಗಳು ಪ್ರಯಾಣಿಸಬಹುದಾಗಿದೆ.2017ರಲ್ಲಿ ಬಿಎಂಟಿಸಿಯು 3.7 ಲಕ್ಷ ರಿಯಾಯಿತಿ ದರದ ಬಸ್‌ಪಾಸ್‌ಗಳನ್ನು ನೀಡಿದೆ.ಈಬಾರಿ ಆ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಪ್ರತಿನಿತ್ಯ ಓಡಾಡುವ ಪ್ರಯಾಣಿಕರಿಗಾಗಿ ಬಿಎಂಟಿಸಿ ಸ್ಮಾರ್ಟ್‌ ಕಾರ್ಡ್‌ನ್ನು ನೀಡಲಿದೆ. ಇದರಿಂದ ಹಣವನ್ನು ನೀಡದೆ ಸಂಚರಿಸಬಹುದಾಗಿದೆ. ಎಲೆಕ್ಟ್ರಾನಿಕ್ ಟಿಕೆಟಿಂಗ್‌ ಯಂತ್ರದಿಂದ ಹಣವನ್ನು ಸಂದಾಯ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+