ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಗದು ರಹಿತ ಪ್ರಯಾಣಕ್ಕಾಗಿ ಬಿಎಂಟಿಸಿ ಸ್ಮಾರ್ಟ್ ಕಾರ್ಡ್!

|
Google Oneindia Kannada News

ಬೆಂಗಳೂರು, ಡಿಸೆಂಬರ್ 28 : ಬಿಎಂಟಿಸಿ ಬಸ್ ಗಳಲ್ಲಿ ನಗದುರಹಿತ ಪ್ರಯಾಣಕ್ಕೆ ಬಿಎಂಟಿಸಿ ಮೊದಲ ಹೆಜ್ಜೆ ಇರಿಸಿದೆ. 335 ಇ ಮಾರ್ಗಕ್ಕೆ ಅನ್ವಯವಾಗುವಂತೆ ನಿಗಮ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಾರಂಭಿಸಿದೆ.

ಬೆಂಗಳೂರಿಗರಿಗೆ ಡಬ್ಬಲ್ ಡೆಕ್ಕರ್ ಬಸ್ ಭಾಗ್ಯ ಸದ್ಯಕ್ಕಿಲ್ಲಬೆಂಗಳೂರಿಗರಿಗೆ ಡಬ್ಬಲ್ ಡೆಕ್ಕರ್ ಬಸ್ ಭಾಗ್ಯ ಸದ್ಯಕ್ಕಿಲ್ಲ

ಮೊದಲ ದಿನ 21 ಜನ ಕಾರ್ಡ್ ಖರೀದಿಸಿದ್ದು, . ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು ಟಿಟಿಎಂಸಿ ಮತ್ತು ಐಟಿಪಿಎಲ್ ಟಿಟಿಎಂಸಿಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣಾ ಕೇಂದ್ರವನ್ನು ನಿಗಮ ತೆರೆದಿದೆ. ಮೊದಲ ದಿನವಾದ ಕಾರಣ ಕೆಲವೇ ಪ್ರಯಾಣಿಕರು ಕಾರ್ಡ್ ಖರೀದಿದ್ದಾರೆ.

BMTC travelling become cashless

ಪ್ರಯಾಣಿಕರು 25 ರೂ. ಪಾವತಿಸಿ ಸ್ಮಾರ್ಟ್ ಕಾರ್ಡ್ ಖರೀದಿಸಬೇಕು. ಈ ಸ್ಮಾರ್ಟ್ ಕಾರ್ಡ್ 3 ವರ್ಷದ ಮಾನ್ಯತೆ ಹೊಂದಿದ್ದು, ತಿಂಗಳಿಗೆ ಗರಿಷ್ಠ 10 ಸಾವಿರ ರೂ, ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಬಿಎಂಟಿಸಿ ಇ-ಪರ್ಸ್ ವ್ಯವಸ್ಥೆ ಜಾರಿಗೆ ತಂದಿದೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗೆ ಒಂದು ವಾರದಲ್ಲಿ ಟೆಂಡರ್ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗೆ ಒಂದು ವಾರದಲ್ಲಿ ಟೆಂಡರ್

ಇದಕ್ಕಾಗಿ ನಿಗಮಕ್ಕೆ ಪ್ರತಿ ವರ್ಷ 1 ಕೋಟಿ ರೂ. ಹಣವನ್ನು ಆಕ್ಸಿಸ್ ಬ್ಯಾಂಕ್ ನೀಡಲಿದೆ. ಇ-ಪರ್ಸ್ ಗಳನ್ನು ಬಿಎಂಟಿಸಿ ಬಸ್ ಗಳಲ್ಲಿ ಮಾತ್ರವಲ್ಲದೆ ಶಾಪಿಂಗ್ ಗೂ ಬಳಸಬಹುದಾಗಿದೆ.ಈ ರೀತಿ ಬಳಸಿದಲ್ಲಿ ಒಂದಿಷ್ಟು ಹಣ ಆಕ್ಸಿಸ್ ಬ್ಯಾಂಕ್ ನೀಡಲಿದೆ.

BMTC travelling become cashless

ಅಕ್ಟೋಬರ್ ವೇಳೆಗೆ ಎಲ್ಲ ನಿಲ್ದಾಣಗಳಲ್ಲೂ ಸ್ಮಾರ್ಟ್ ಕಾರ್ಡ್ ಲಭ್ಯ ವಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಸಾದ್ಯವಾಗಿಲ್ಲ. ಇದೀಗ ಒಂದು ಮಾರ್ಗದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಏಪ್ರಿಲ್ ಮೇ ನಲ್ಲಿ ಎಲ್ಲ ಬಸ್ ಗಳಲ್ಲೂ ಯೋಜನೆ ಪ್ರಾರಂಭಿಸುವ ನಿರೀಕ್ಷೆ ಇದೆ.

ಒಂದು ತಿಂಗಳ ಪ್ರಾಯೋಗಿಕ ಪರೀಕ್ಷೆ ಬಳಿಕ ಬಿಎಂಟಿಸಿ ಎಲ್ಲ ಹವಾನಿಯಂತ್ರಿತ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಲಭ್ಯವಾಗಲಿದೆ. ಪ್ರಯಾಣಿಕರ ದಟ್ಟಣೆ ನಿರ್ವಾಹಕ ಸ್ಮಾರ್ಟ್ ಕಾರ್ಡ್ ಬಳಸಿ ಟಿಕೆಟ್ ನೀಡಲು ತೆಗೆದುಕೊಳ್ಳುವ ಸಮಯ ಮುಂತಾದವುಗಳನ್ನು ಪರೀಕ್ಷಿಸಲು ಎಸಿ ಬಸ್ ಜತೆಗೆ ಒಂದು ಮಾರ್ಗದ ಸಾಮಾನ್ಯ ಬಸ್ ಒಂದರಲ್ಲೂ ಸ್ಮಾರ್ಟ್ ಕಾರ್ಡ್ ನೀಡಲಿದ್ದೇವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ ತಿಳಿಸಿದ್ದಾರೆ.

English summary
Now traveling in BMTC has also become cashless as the bmtc has introduced smart card for passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X