ಬೆಂಗಳೂರು; ಜೂನ್ 1ರಿಂದ 75 ಎಸಿ ವೋಲ್ವೊ ಬಸ್ ಸಂಚಾರ
ಬೆಂಗಳೂರು, ಮೇ 30 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜೂನ್ 1ರಿಂದ ನಗರದಲ್ಲಿ ಹವಾನಿಯಂತ್ರಿತ ಬಸ್‌ಗಳ ಸಂಚಾರವನ್ನು ಆರಂಭಿಸಲಿದೆ. ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಘೋಷಣೆಯಾದ ಬಳಿಕ ಎಸಿ ಬಸ್ ಸಂಚಾರ ಸ್ಥಗಿತಗೊಂಡಿತ್ತು.
ಬಿಎಂಟಿಸಿ ಶುಕ್ರವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ. ಈಗಾಗಲೇ ನಗರದಲ್ಲಿ ಕೆಲವು ಸಾಮಾನ್ಯ ಬಸ್‌ಗಳ ಸಂಚಾರ ಆರಂಭಿಸಲಾಗಿದ್ದು, ಕೆಲವು ಷರತ್ತುಗಳೊಂದಿಗೆ ಪ್ರಯಾಣಿಕರಿಗೆ ಸಂಚಾರ ನಡೆಸಲು ವ್ಯವಸ್ಥೆ ಮಾಡಲಾಗಿದೆ.

ಮಾರ್ಚ್ 22ರ ಬಳಿಕ ಮೊದಲ ಬಾರಿಗೆ ನಗರದಲ್ಲಿ ಬಿಎಂಟಿಸಿಯ ಎಸಿ ಬಸ್‌ಗಳ ಸಂಚಾರ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಾಯೋಗಿಕವಾಗಿ 72 ಬಸ್‌ಗಳನ್ನು 8 ಮಾರ್ಗದಲ್ಲಿ ಓಡಿಸಲಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ.
ಮಾರ್ಗಗಳ ವಿವರ
* ಕೆಂಪೇಗೌಡ ಬಸ್ ನಿಲ್ದಾಣ - ಹೊಸಕೋಟೆ
* ಕೆಂಪೇಗೌಡ ಬಸ್ ನಿಲ್ದಾಣ - ಕಾಡುಗೋಡಿ
* ಕೆಂಪೇಗೌಡ ಬಸ್ ನಿಲ್ದಾಣ - ಸರ್ಜಾಪುರ
* ಕೆಂಪೇಗೌಡ ಬಸ್ ನಿಲ್ದಾಣ - ಅತ್ತಿಬೆಲೆ
* ಹೆಬ್ಬಾಳ - ಬನಶಂಕರಿ
* ಹೆಬ್ಬಾಳ - ಸಿಲ್ಕ್ ಬೋರ್ಡ್
* ಬನಶಂಕರಿ - ಐಟಿಪಿಎಲ್
* ಎಲೆಕ್ಟ್ರಾನಿಕ್ ಸಿಟಿ - ಐಟಿಪಿಎಲ್












Click it and Unblock the Notifications