34 ವಾಯುವಜ್ರ ಬಸ್ ಸಂಚಾರ ಆರಂಭಿಸಲಿದೆ ಬಿಎಂಟಿಸಿ
ಬೆಂಗಳೂರು, ಸೆಪ್ಟೆಂಬರ್ 06: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 34 ವಾಯುವಜ್ರ ಬಸ್‌ಗಳ ಸಂಚಾರವನ್ನು ಆರಂಭಿಸಲಿದೆ. ಪ್ರಸ್ತುತ ಕೆಲವು ವಾಯುವಜ್ರ ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿವೆ.
ಬಿಎಂಟಿಸಿಯ ಹವಾನಿಯಂತ್ರಿತ ವಾಯುವಜ್ರ ಬಸ್‌ಗಳು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಗರದ ವಿವಿಧ ಪ್ರದೇಶಗಳಿಂದ ಸಂಪರ್ಕ ಕಲ್ಪಿಸುತ್ತವೆ. ಲಾಕ್ ಡೌನ್ ಘೋಷಣೆ ಬಳಿಕ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.
ಹೊಸಕೋಟೆ, ಅತ್ತಿಬೆಲೆ, ಕಾಡುಗೋಡಿ, ಹೆಬ್ಬಾಳ ಮತ್ತು ಐಟಿಪಿಎಲ್ ಸೇರಿದಂತೆ 6 ಮಾರ್ಗಗಳಿಂದ 34 ವಾಯುವಜ್ರ ಬಸ್‌ಗಳು ಸಂಚಾರವನ್ನು ಆರಂಭಿಸಲಿವೆ ಎಂದು ಬಿಎಂಟಿಸಿ ಹೇಳಿದೆ.

ಮೆಜೆಸ್ಟಿಕ್‌ನಿಂದ 3, ಬನಶಂಕರಿ ಟಿಟಿಎಂಸಿಯಿಂದ 2, ಸೆಂಟಲ್ ಸಿಲ್ಕ್ ಬೋರ್ಡ್‌ನಿಂದ 1 ಬಸ್ ಸಂಚಾರ ಆರಂಭಿಸಲಿದೆ. 34 ಬಸ್‌ಗಳು 148 ಟ್ರಿಪ್‌ಗಳನ್ನು ಮಾಡಲಿವೆ.
ಸರ್ಕಾರ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಆದ್ದರಿಂದ, ಬಸ್ ಸೇವೆ ಆರಂಭಿಸಲಾಗುತ್ತಿದೆ ಎಂದು ಬಿಎಂಟಿಸಿ ತಿಳಿಸಿದೆ.
8 ಹೊಸ ಬಸ್‌ಗಳು: ಬಿಎಂಟಿಸಿ 8 ಹೊಸ ವಾಯುವಜ್ರ ಬಸ್‌ಗಳನ್ನು ಸಹ ಆರಂಭಿಸಿದೆ. ಮೆಜೆಸ್ಟಿಕ್, ಎಚ್‌ಎಎಲ್, ವೈಟ್‌ಫೀಲ್ಡ್ ಟಿಟಿಎಂಸಿ, ಕಾಡುಗೋಡಿ, ಬನಶಂಕರಿ, ಹೆಚ್ಎಸ್‌ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣದಿಂದ ಬಸ್ ಹೊರಡಲಿದೆ.












Click it and Unblock the Notifications