2022ರಿಂದ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಿದೆ ಬಿಎಂಟಿಸಿ

ಬೆಂಗಳೂರು, ಜನವರಿ 22 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 2022ರ ತನಕ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುವುದಿಲ್ಲ. 2030ರ ವೇಳೆಗೆ ನಗರದ ರಸ್ತೆಗಳಲ್ಲಿ ಬಿಎಂಟಿಸಿಯ ವಿದ್ಯುತ್ ಚಾಲಿತ ಬಸ್‌ಗಳು ಮಾತ್ರ ಸಂಚಾರ ನಡೆಸಲಿವೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಈ ಕುರಿತು ಮಾತನಾಡಿದ್ದಾರೆ. "ಬಿಎಂಟಿಸಿ 2022ರಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿಯನ್ನು ಆರಂಭಿಸಲಿದೆ. ಮೊದಲ ಹಂತದಲ್ಲಿ 300 ಬಸ್ ಖರೀದಿ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

ಎಲೆಕ್ಟ್ರಿಕ್ ಬಸ್ ಖರೀದಿಗೂ ಮುನ್ನ ಬಿಎಂಟಿಸಿಯ ನಾಲ್ಕು ಬಸ್ ಡಿಪೋದಲ್ಲಿ ಚಾರ್ಜರ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 300, 2ನೇ ಹಂತದಲ್ಲಿ 500 ಮತ್ತು ಮೂರನೇ ಹಂತದಲ್ಲಿ 90 ವಿದ್ಯುತ್ ಚಾಲಿತ ಬಸ್‌ಗಳನ್ನು ಬಿಎಂಟಿಸಿ ಖರೀದಿ ಮಾಡಲಿದೆ.

BMTC TO Procure Electric Buses In 2022

2030ರ ವೇಳೆಗೆ ಬಿಎಂಟಿಸಿಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳೇ ಇರಲಿವೆ. ಪ್ರಸ್ತುತ ಸುಮಾರು 600 ಬಸ್‌ಗಳು ಬಿಎಂಟಿಸಿಯಲ್ಲಿವೆ. ಪ್ರತಿದಿನ ನಾಲ್ಕು ಲಕ್ಷಕ್ಕೂ ಅಧಿಕ ಜನರು ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿದೆ. ಬೆಸ್ಕಾಂ ನಗರದ 126 ಪ್ರದೇಶದಲ್ಲಿ ಚಾರ್ಜಿಂಗ್ ಪಾಯಿಂಟ್ ನಿರ್ಮಾಣ ಮಾಡುತ್ತಿದೆ. ಇವುಗಳಲ್ಲಿ 26 ಶೀಘ್ರವಾಗಿ ವಾಹನಗಳನ್ನು ಚಾರ್ಜ್ ಮಾಡುವ ಪಾಯಿಂಟ್‌ಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+