ಐಪಿಎಲ್ ಪಂದ್ಯಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್
ಬೆಂಗಳೂರು, ಮೇ.1 : ಬೆಂಗಳೂರಿನಲ್ಲಿ ಐಪಿಎಲ್ ಜ್ವರ ಏರುತ್ತಿದೆ. ಅರಬ್ ರಾಷ್ಟ್ರಗಳಲ್ಲಿ ಐಪಿಎಲ್ ಪಂದ್ಯಗಳನ್ನು ಮುಗಿಸಿ ಆಟಗಾರರು ಉದ್ಯಾನಗರಿಗೆ ಬಂದಿಳಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳನ್ನು ನೋಡಲು ಬರುವ ಪ್ರಯಾಣಿಕರಿಗೆ ಅಗತ್ಯ ಸೇವೆ ಒದಗಿಸಲು ಬಿಎಂಟಿಸಿ ಸಜ್ಜಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 4ರಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿವೆ. ಮೇ 4ರಂದು ಪಂದ್ಯ ವೀಕ್ಷಿಸಲು ಬರುವ ಬರುವ ಪ್ರೇಕ್ಷಕರ ಅನುಕೂಲಕ್ಕೆ ಬಿಎಂಟಿಸಿ ಹೆಚ್ಚುವರಿ ಬಸ್ಸುಗಳನ್ನು ಓಡಿಸಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಐಪಿಎಲ್ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ದಿನ ಸಂಜೆ 5ರ ನಂತರ ನಗರದ ವಿವಿಧ ಭಾಗಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹಾಗೂ ಕ್ರಿಕೆಟ್ ಪಂದ್ಯಾಟ ಮುಗಿದ ಬಳಿಕ ರಾತ್ರಿ ಮನೆಗೆ ತೆರಳಲು ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ. [ಐಪಿಎಲ್ ವೇಳಾಪಟ್ಟಿ]
ಬಸ್ಸಿನ ಮಾರ್ಗಗಳು : ಗೇಟ್ ನಂ 1 ರಿಂದ ಮಾಣಿಕ್ ಷಾ ಪರೇಡ್ ಗ್ರೌಂಡ್ಸ್ ನಿಂದ ಕಾಡುಗೋಡಿ ಬಸ್ ನಿಲ್ದಾಣ. ಗೇಟ್ ನಂ 2ರಿಂದ ಮಯೋಹಾಲ್ ನಿಂದ ಸರ್ಜಾಪುರ, ಗೇಟ್ 3 ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ. ಗೇಟ್ 4 ಬ್ರಿಗೇಡ್ ರಸ್ತೆಯಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್.
ಗೇಟ್ ನಂ 5 ಚಿನ್ನಸ್ವಾಮಿ ಸ್ಟೇಡಿಯಂನಿಂದ ಕಗ್ಗಲೀಪುರ, ಗೇಟ್ ನಂ 6 ಚಿನ್ನಸ್ವಾಮಿ ಸ್ಟೇಡಿಯಂನಿಂದನಿಂದ ಕೆಂಗೇರಿ ಕೆಎಚ್ ಬಿ ಕ್ವಾಟ್ರಸ್, ಗೇಟ್ ನಂ 7 ಬಿಆರ್ ವಿ ಪರೇಡ್ ನಿಂದ ಜನಪ್ರಿಯ ಟೌನ್ ಶಿಪ್, ಗೇಟ್ ನಂ 8 ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ನೆಲಮಂಗಲ, ಗೇಟ್ ನಂ 9 ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಹಂಕ ನ್ಯೂ ಟೌನ್.
ಗೇಟ್ ನಂ 10 ಬಿಆರ್ ವಿ ಪರೇಡ್ ಗ್ರೌಂಡ್ ನಿಂದ ಆರ್.ಕೆ.ಹೆಗ್ಡೆ ನಗರ, ಗೇಟ್ 11 ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬಾಗಲೂರು, ಗೇಟ್ 12 ಮಯೋ ಹಾಲ್ ನಿಂದ ಹೊಸಕೋಟೆ.












Click it and Unblock the Notifications