ಬಿಎಂಟಿಸಿ ಬಸ್‌ನಲ್ಲಿ ಮಾಸ್ಕ್ ಹಾಕದಿದ್ದರೆ 100 ರೂ. ದಂಡ
ಬೆಂಗಳೂರು, ನವೆಂಬರ್ 02 : ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಕಾಪಾಡಿಲ್ಲ ಎಂದರೆ ದಂಡ ಕಟ್ಟುವುದು ಅನಿವಾರ್ಯವಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಿಬ್ಬಂದಿ, ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಬಸ್‌ನಲ್ಲಿ ಮಾಸ್ಕ್ ಹಾಕದ ಪ್ರಯಾಣಿಕರಿಗೆ 100 ರೂ. ದಂಡವನ್ನು ಹಾಕಲಾಗುತ್ತಿದೆ.
ಮಾಸ್ಕ್ ಧರಿಸದ ಪ್ರಯಾಣಿಕರಿಂದ 100 ರೂ. ದಂಡ ವಸೂಲಿ ಮಾಡುವ ಅಧಿಕಾರನ್ನು ಟಿಕೆಟ್ ತನಿಖಾಧಿಕಾರಿಗೆ ನೀಡಲಾಗಿದೆ. ಸಿಬ್ಬಂದಿ ಸಹ ಮಾಸ್ಕ್ ಹಾಕದಿದ್ದರೆ ತನಿಖಾಧಿಕಾರಿಗಳು ದಂಡ ಹಾಕಬಹುದು.

ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಸಂಚಾರ ಮಾಡುವವರಾಗಿದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಇಲ್ಲವಾದಲ್ಲಿ 100 ರೂ. ದಂಡ ಕಟ್ಟಲು ಸಿದ್ಧವಾಗಿರಿ. ಸಾರ್ವಜನಿ ಸ್ಥಳದಲ್ಲಿ ಮಾಸ್ಕ್ ಹಾಕದಿದ್ದರೆ 250 ರೂ. ದಂಡವನ್ನು ಕಟ್ಟಬೇಕು.
ನಗರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರ ಕಾಪಾಡಿಲ್ಲ ಎಂದರೆ ಬಿಬಿಎಂಪಿ ಮಾರ್ಷಲ್‌ಗಳು ದಂಡ ಹಾಕುತ್ತಾರೆ. ಬಸ್‌ನಲ್ಲಿ ಮಾಸ್ಕ್ ಹಾಕಿಲ್ಲ ಎಂದರೂ ದಂಡ ಕಟ್ಟಬೇಕು. ಒಟ್ಟಿನಲ್ಲಿ ಮಾಸ್ಕ್ ಇಲ್ಲದೆ ಹೊರಬರುವಂತಿಲ್ಲ.
ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಭಾನುವಾರ ನಗರದಲ್ಲಿ 2,167 ಹೊಸ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,38,636ಕ್ಕೆ ಏರಿಕೆಯಾಗಿದೆ.












Click it and Unblock the Notifications