5 ರುಪಾಯಿಗೆ ಬಿಎಂಟಿಸಿ ಸ್ಮಾರ್ಟ್ ಕಾರ್ಡ್ ಪಡೆಯಿರಿ
ಬಿಎಂಟಿಸಿ ಬಸ್ಸುಗಳಲ್ಲಿ ಇನ್ನು ಮುಂದೆ ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣ ಮಾಡಬಹುದಾಗಿದೆ. ಬಹುನಿರೀಕ್ಷಿತ ಈ ಯೋಜನೆಗೆ ಮಾರ್ಚ್ ಅಂತ್ಯಕ್ಕೆ ಪ್ರಾಯೋಗಕವಾಗಿ ಚಾಲನೆ ಸಿಗಲಿದೆ.
ಬೆಂಗಳೂರು, ಫೆಬ್ರವರಿ 06/ (updated) ಮಾರ್ಚ್ 24: ಬಿಎಂಟಿಸಿ ಬಸ್ಸುಗಳಲ್ಲಿ ಇನ್ನು ಮುಂದೆ ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣ ಮಾಡಬಹುದಾಗಿದೆ. ಬಹುನಿರೀಕ್ಷಿತ ಈ ಯೋಜನೆಗೆ ಫೆಬ್ರವರಿ 15ರಿಂದ ಪ್ರಾಯೋಗಕವಾಗಿ ಚಾಲನೆ ಸಿಗಲಿದೆ ಎಂದು ಸುದ್ದಿ ಬಂದಿತ್ತು. ಈಗ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ಜಾರಿಗೊಳ್ಳಲಿದೆ
ಸ್ಮಾರ್ಟ್ ಕಾರ್ಡ್ ಬಂದ ಮೇಲೆ ಚಿಲ್ಲರೆ ಸಮಸ್ಯೆ, ಹಣ ನೀಡಿ ಟಿಕೆಟ್ ಖರೀದಿಸುವ ಜಂಜಾಟ ತಪ್ಪಲಿದೆ. ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ಮೋದಿ ಅವರ ಡಿಜಿಟಲ್ ಇಂಡಿಯಾ ಅನುಷ್ಠಾನಗೊಂಡಂತೆ ಆಗುತ್ತದೆ.[ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ಆಕ್ಸಿಸ್ ಬ್ಯಾಂಕ್ ಜಂಟಿಯಾಗಿ ಸ್ಮಾರ್ಟ್ ಕಾರ್ಡ್ ಹೊರ ತಂದಿವೆ. ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಸ್ಮಾರ್ಟ್ ಕಾರ್ಡ್ ಬಿಡುಗಡೆ ಮಾಡಲಿದ್ದಾರೆ.['ಚತುರ ಸಾರಿಗೆ' ವ್ಯವಸ್ಥೆಗೆ ಚಾಲನೆ ನೀಡಿದ ಸಿದ್ದರಾಮಯ್ಯ]
'ಪ್ರಯಾಣಿಕರಿಗೆ ಸಮಸ್ಯೆ ರಹಿತ ಪ್ರಯಾಣ ಅನುಭವ ಒದಗಿಸಲು ಬಿಎಂಟಿಸಿ-ಆಕ್ಸಿಸ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದ್ದು, ಸ್ಮಾರ್ಟ್ ಕಾರ್ಟ್ ಬಿಡುಗಡೆ ಮಾಡಿವೆ. ವಿಶ್ವದ ಹಲವು ರಾಷ್ಟ್ರಗಳು ನಗದು ರಹಿತ ಪ್ರಯಾಣ ವ್ಯವಸ್ಥೆಯತ್ತ ಮುಖ ಮಾಡುತ್ತಿವೆ, ಬೆಂಗಳೂರಿನಲ್ಲಿಯೂ ಈ ವ್ಯವಸ್ಥೆ ಜಾರಿಗೆ ಬಂದಿದೆ' ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕರೂಪ್ ಕೌರ್ ಹೇಳಿದರು.

ಸ್ಮಾರ್ಟ್ ಕಾರ್ಡ್ ಎಲ್ಲಿ ಸಿಗಲಿದೆ?
ಸದ್ಯಕ್ಕೆ ಶಿವಾಜಿನಗರ ಹಾಗೂ ಶಾಂತಿನಗರ ಕಚೇರಿಯಲ್ಲಿ ಮಾತ್ರ ಲಭ್ಯ. ನಂತರದ ದಿನಗಳಲ್ಲಿ ಬಿಎಂಟಿಸಿಯ ಕಚೇರಿ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಸ್ಮಾರ್ಟ್‌ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಮೊಬೈಲ್ ಪ್ರೀಪೇಯ್ಡ್ ರೀಚಾರ್ಜ್ ಮಾಡುವ ಮಾದರಿಯಲ್ಲಿ ಹಣ ನೀಡಿ ಈ ಕಾರ್ಡ್ ಅನ್ನು ಆಕ್ಸಿಸ್ ಬ್ಯಾಂಕ್ ಇಲ್ಲವೇ ಬಿಎಂಟಿಸಿ ಕೇಂದ್ರಗಳಲ್ಲಿ ಟಾಪ್ ಅಪ್ ಮಾಡಿಕೊಳ್ಳಬೇಕು.

ಟಾಪ್ ಅಪ್ ಮಾಡಿಕೊಳ್ಳಬೇಕು.
ಆಕ್ಸಿಸ್ ಬ್ಯಾಂಕ್ ಇಲ್ಲವೇ ಬಿಎಂಟಿಸಿ ಕೇಂದ್ರಗಳಲ್ಲಿ ಟಾಪ್ ಅಪ್ ಮಾಡಿಕೊಳ್ಳಬೇಕು.
ಟಾಪ್ ಅಪ್ ಮಿತಿ 10,000 ರು ಎಂದು ನಿಗದಿ ಪಡಿಸಲಾಗಿದೆ. ಇದನ್ನು ಆನ್ ಲೈನ್ ಅಥವಾ ಆಕ್ಸಿಸ್ ಬ್ಯಾಂಕಿನ ಎಟಿಎಂ ಮೂಲಕ ತುಂಬಬಹುದು. 10 ಸಾವಿರ ರುಗಿಂತ ಅಧಿಕ ಮೊತ್ತ ಬೇಕಾದರೆ ಗುರುತಿನ ಚೀಟಿ ನೀಡಬೇಕಾಗುತ್ತದೆ.
ಶಾಪಿಂಗ್ ಮಾಡಬಹುದು
ಈ ಸ್ಮಾರ್ಟ್ ಕಾರ್ಟ್ ಬಸ್ಸುಗಳಲ್ಲಿ ಪ್ರಯಾಣಿಸಲು ಮಾತ್ರ ಅನುಕೂಲವಾಗುವುದಿಲ್ಲ. ಶಾಪಿಂಗ್, ಕ್ಯಾಬ್ , ಹೋಟೆಲ್ ವಹಿವಾಟಿನಲ್ಲಿಯೂ ಬಳಸುವಂತೆ ವ್ಯವಸ್ಥೆ ಮಾಡಲಾಗಿದೆ' ಎಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಆನಂದ್ ತಿಳಿಸಿದರು.

10 ಮಾರ್ಗಗಳಲ್ಲಿ ಮಾತ್ರ
ಬೆಂಗಳೂರಿನ ಸದಕ್ಕೆ 10 ಮಾರ್ಗಗಳಲ್ಲಿ ಮಾತ್ರ ಸ್ಮಾರ್ಟ್ ಕಾರ್ಡ್ ಪ್ರಯೋಗಕವಾಗಿ ಜಾರಿಯಲ್ಲಿರುತ್ತದೆ. ಶಿವಾಜಿನಗರ ಹಾಗೂ ಶಾಂತಿ ನಗರದಿಂದ ಹೊರಡುವ ಮಾರ್ಗಗಳಾಗಿವೆ. ಕಾರ್ಡ್ ಬೆಲೆ 5 ರು, ಎಲ್ಲವೂ ಪ್ರೀ ಪೇಯ್ಡ್ ಕಾರ್ಡ್ (ಡೆಬಿಟ್ /ಕ್ರೆಡಿಟ್) ಆಗಿರುತ್ತದೆ.

ನಗದು ಬಳಕೆಗೆ ಗುಡ್ ಬೈ
ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ಪಡೆಯಲು ಹಣ ಪಾವತಿ ಮಾಡಬೇಕಿಲ್ಲ. ಕಂಡಕ್ಟರ್ ಬಳಿ ಇರುವ ಯಂತ್ರಕ್ಕೆ ಕಾರ್ಡ್ ಹಾಕಿದರೆ, ಹಣ ಪಾವತಿಯಾಗುತ್ತದೆ. ದೇಶದ 12 ಲಕ್ಷ ಮಳಿಗೆಗಳಲ್ಲಿ ಇದನ್ನು ಬಳಸಿ ಶಾಪಿಂಗ್ ಸಹ ಮಾಡಬಹುದಾಗಿದೆ

ಬಿಎಂಟಿಸಿ-ಮೆಟ್ರೋ ಸ್ಮಾರ್ಟ್ ಕಾರ್ಡ್
'ಈ ಕಾರ್ಡ್ ಬಿಎಂಟಿಸಿ ಪ್ರಯಾಣಕ್ಕೆ ಮಾತ್ರವಲ್ಲ. ಇದನ್ನು ಮೆಟ್ರೋ ಟ್ರೈನ್, ವಾಹನ ನಿಲುಗಡೆ ಪಾರ್ಕಿಂಗ್ ಶುಲ್ಕ, ವ್ಯಾಪಾರಿ ಮಳಿಗೆಗಳಲ್ಲೂ ಇದನ್ನು ಹಣ ಪಾವತಿಗಾಗಿ ಬಳಸಿಕೊಳ್ಳಬಹುದಾಗಿದೆ" ಎಂದು ಏಕರೂಪ್ ಕೌರ್ ಹೇಳಿದ್ದಾರೆ. ಆದರೆ, ಇದಕ್ಕೆ ಇನ್ನೂ ಕಾಲಾವಕಾಶ ಬೇಕಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು












Click it and Unblock the Notifications