ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಳೆಯ ಬಸ್ ಗಳಿಗೆ ಗುಡ್ ಬೈ ಹೇಳಲು ಬಿಎಂಟಿಸಿ ನಿರ್ಧಾರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಪದೇ ಪದೇ ಕೆಟ್ಟು ನಿಲ್ಲುವುದರ ಜತೆಗೆ, ತಾಂತ್ರಿಕ ದೋಷಗಳಿಂದಾಗಿ ಪ್ರಯಾಣಿಕರ ಜೀವಕ್ಕೆ ಆಪತ್ತು ತರುವ ಭೀತಿ ಹುಟ್ಟಿಸಿರುವ ತನ್ನ ಹಳೆಯ ಬಸ್ ಗಳನ್ನು ಗುಜರಿಗೆ ಕಳುಹಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಿರ್ಧರಿಸಿದೆ.

ಪ್ರತಿಭಟನೆ : ಶಾಂತಿನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಪ್ರತಿಭಟನೆ : ಶಾಂತಿನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ

ಇತ್ತೀಚೆಗೆ, ಹಳೆಯ ಬಸ್ ಗಳಲ್ಲಿ ಹಲವಾರು ಬಸ್ ಗಳು ಮಾರ್ಗ ಮಧ್ಯೆಯೇ ಕೆಟ್ಟು ನಿಂತಿದ್ದು, ಸಂಚಾರದ ವೇಳೆ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ,ಈ ಕ್ರಮ ಕೈಗೊಳ್ಳಲಾಗಿದೆ.

BMTC plans to scrap over 1000 old buses

ಈ ಹಿನ್ನೆಲೆಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಸೇವೆ ನೀಡಿರುವ ಸುಮಾರು 2 ಸಾವಿರ ಬಸ್ ಗಳನ್ನು ಬಿಎಂಟಿಸಿ ಗುರುತಿಸಿದ್ದು, ಅವುಗಳಲ್ಲಿ 1,300 ಬಸ್ ಗಳನ್ನೂ ಗುಜರಿಗೆ ಸಾಗಿಸಲು ನಿರ್ಧರಿಸಿದೆ. ಈ ಎಲ್ಲಾ ಬಸ್ ಗಳೂ 8ರಿಂದ 9 ಲಕ್ಷ ಕಿ.ಮೀ. ಓಡಿರುವುದಾಗಿ ತಂತ್ರಜ್ಞರು ತಿಳಿಸಿದ್ದಾರೆ.

ಹಳೆಯ ಬಸ್ ಗಳ ಬದಲಿಗೆ ಹೊಸ ಬಸ್ ಗಳ ಖರೀದಿ ಪ್ರಕ್ರಿಯೆಗೂ ಈಗಾಗಲೇ ಬಿಎಂಟಿಸಿ ಕೈ ಹಾಕಿದ್ದು, ಸದ್ಯಕ್ಕೆ150 ಎಸಿ ಬಸ್ ಗಳು ಸೇರಿ ಸುಮಾರು 600 ಬಸ್ ಗಳನ್ನು ಖರೀದಿಸಲು ಬಿಎಂಟಿಸಿ ಮುಂದಾಗಿದೆ.

English summary
After being embarrassed over repeated incidents of bus breakdowns, risking lives of passengers, the Bangalore Metropolitan Transport Corporation (BMTC) has decided to get rid of the old fleet of buses. BMTC has identified 1,300-old buses to scrap and it will be done in within a few months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X