BMTC: UPI ಟಿಕೆಟಿಂಗ್ ವ್ಯವಸ್ಥೆ ಜಾರಿ, ಚಿಲ್ಲರೆ ಸಮಸ್ಯೆಗೆ ಶೀಘ್ರ ಮುಕ್ತಿ
ಬೆಂಗಳೂರು ಮಹಾಗನಗರ ಸಾರಿಗೆ ಸಂಸ್ಥೆ (BMTC) ನಗರ ನಿವಾಸಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ನಿಗದಮದಲ್ಲಿ ಬದಲಾವಣೆ ಆಗುತ್ತಿಲ್ಲ ಎಂಬ ದೂರುಗಳಿಗೆ ಬಿಎಂಟಿಸಿ ಅಂತ್ಯ ಹಾಡಲು UPI ಆಧಾರಿತ ಟಿಕೆಟ್ ವ್ಯವಸ್ಥೆ ಜಾರಿಗೆ ತರಲಿದೆ. ಈ ಬಗ್ಗೆ ತಿಳಿಯಿರಿ.
ಬೆಂಗಳೂರು, ಫೆಬ್ರವರಿ 20: ಬೆಂಗಳೂರು ಮಹಾಗನಗರ ಸಾರಿಗೆ ಸಂಸ್ಥೆ (BMTC) ನಗರ ನಿವಾಸಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ನಿಗದಮದಲ್ಲಿ ಬದಲಾವಣೆ ಆಗುತ್ತಿಲ್ಲ ಎಂಬ ದೂರುಗಳಿಗೆ ಬಿಎಂಟಿಸಿ ಅಂತ್ಯ ಹಾಡಲು ಮುಂದಾಗಿದೆ.
ಹೌದು, ಬಿಎಂಟಿಸಿ ನಿಗಮವು ತನ್ನ ಟಿಕೆಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಈ ಮೂಲಕ ಚಿಲ್ಲರೆ ಸಮಸ್ಯೆಗಳಿಂದ ನಿತ್ಯವು ಬಿಎಂಟಿಸಿ ಬಸ್ ನಿರ್ವಾಹಕರು ನಿತ್ಯ ಸಾವಿರಾರು ಪ್ರಯಾಣಿಕರ ಜೊತೆಗಿನ ವಾಗ್ವಾದ, ಜಗಳಕ್ಕೆ ಕೊನೆಯಾಗಲಿದೆ. ಇದು ಡಿಜಿಟಲ್ ವ್ಯವಸ್ಥೆ ಮೂಲಕ ಸಾಕಾರವಾಗಲಿದೆ.
ಬೆಂಗಳೂರಿನಲ್ಲಿ ನಿತ್ಯ ಸಾವಿರಾರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಬಿಎಂಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಸಂಚಾರ ವೇಳೆ ಟಿಕೆಟ್ ಪಡೆದು ಚಿಲ್ಲರೆ ನೀಡುವುದು ಇಲ್ಲವೇ ಪಡೆಯುವುದು ಭಾರಿ ಸಮಸ್ಯೆ ಆಗುತ್ತಿತ್ತು. ಈ ಕಾರಣಕ್ಕೆ ಬಿಎಂಟಿಸಿ UPI ಆಧಾರಿತ ಟಿಕೆಟ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.

ದಿನಬಳಕೆ ಡಿಜಿಟಲ್ ವಿಧಾನದಿಂದ ಟಿಕೆಟ್ ಪಡೆಯಿರಿ
ಡಿಸೆಂಬರ್ ತಿಂಗಳಲ್ಲಿ ಟಿಕೆಟ್‌ಗಳನ್ನು ಖರೀದಿಸಲು ಪ್ರಯಾಣಿಕರು ಗೋಗಲ್ ಪೇ (Google Pay), ಫೋನ್ ಪೇ (Phone Pe) ಹಾಗೂ ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್‌ಗಳ ಮೂಲಕ UPI ಆಧಾರಿತ ಟಿಕೆಟ್ ಪಡೆಯಬಹುದು ಎನ್ನಲಾಗಿದೆ, ಈ ಟೆಕೆಟಿಂಗ್ ವ್ಯವಸ್ಥೆಯನ್ನು ಹೊರತರಲು ಯೋಜನೆ ರೂಪಿಸಲಾಗಿದೆ. ಆದರೆ ಬ್ಯಾಂಕ್‌ಗಳಿಂದ ವಹಿವಾಟು ಶುಲ್ಕದಲ್ಲಿ ಉತ್ತಮ ಕೊಡುಗೆ ಸಿಗಬಹುದೆಂದು ನಿಗಮ ಕಾಯುತ್ತಿದೆ ಹೀಗಾಗಿ ತಡವಾಗುತ್ತಿದೆ ಎಂದು ತಿಳಿದು ಬಂದಿದೆ.

ಚಿಲ್ಲರೆ ಸಮಸ್ಯೆ: ಬಸ್‌ನಿಂದ ಇಳಿಸುವ ಪ್ರಸಂಗ
ವರ್ಷಗಳಿಂದಲೂ ಬಿಎಂಟಿಸಿ ವಿರುದ್ಧ ಟಿಕೆಟ್ ವಿಚಾರದಲ್ಲಿ ದೂರು ಇದೆ. ನಿರ್ವಾಹಕರು ನಿಖರ ಚಿಲ್ಲರೆ ನೀಡುವುದಿಲ್ಲ. ಚಿಲ್ಲರೆ ಇಲ್ಲದೇ ಪ್ರಯಾಣಿಕರನ್ನು ಬಸ್ ನಿಂದ ಇಳಿಯಲು ಹೇಳಿದ ಪ್ರಸಂಗಗಳು ಇವೆ. ಬಸ್ ಹತ್ತುವಾಗ ನಿಖರ ಚಿಲ್ಲರೆ ತರಬೇಕು, ಅಥವಾ ಪಡೆಯಬೇಕು ಎಂಬುದು ಎಷ್ಟು ಸಮಂಜಸ, ಇದು ನಿತ್ಯ ಸಾಧ್ಯತೆ ಎಂದು ಖಾಸಗಿ ಕಂಪನಿಯೊಂದರ ಮಹಿಳಾ ಉದ್ಯೋಗಿ ಪ್ರಶ್ನಿಸಿದರು.

ನಿರ್ವಾಹಕರು, ಪ್ರಯಾಣಿಕರು ಪರಸ್ಥಿತಿ ಅರ್ಥೈಸಿಕೊಳ್ಳಬೇಕು
ನಿತ್ಯ ಸಾವಿರಾರು ಪ್ರಯಾಣಿಕರನ್ನು ನೋಡುವ ನಿರ್ವಾಹಕರ (ಕಂಡಕ್ಟರ್) ಪರಿಸ್ಥಿತಿ ಅರ್ಥವಾಗುತ್ತದೆ. ನಾವು ಬಸ್ ಹತ್ತಲು ನಿಖರ ಚಿಲ್ಲರೆ ತರಲು ಹೇಗೆ ಸಾಧ್ಯವಾಗುತ್ತದೆ. ಹೀಗಿದ್ದಾಗ ನಿರ್ವಾಹಕರು ಪ್ರಯಾಣಿಕರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಅನೇಕ ಬಿಎಂಟಿಸಿ ಪ್ರಯಾಣಿಕರು ಯುಪಿಐ ಆಧಾರಿತ ಟಿಕೆಟ್ ಕಾಯುತ್ತಿದ್ದಾರೆ. ಇದರಿಂದ ಚಿಲ್ಲರೆ ಸಮಸ್ಯೆಗೆ ಮುಕ್ತ ದೊರೆಯಲಿದೆ ಎಂದು ಅವರು ತಿಳಿಸಿದರು.

UPI ಆಧಾರಿತ ವ್ಯವಸ್ಥೆ ಹೇಗರಲಿದೆ?
ಈ ಟಿಕೆಟಿಂಗ್ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧವಾಗಿದೆ. ಬ್ಯಾಂಕ್‌ಗಳು ವಹಿವಾಟು ಶುಲ್ಕ- ಮರ್ಚೆಂಟ್ ಡಿಸ್ಕೌಂಟ್ ದರದಲ್ಲಿ ಗರಿಷ್ಠ ರಿಯಾಯಿತಿ ಬಗ್ಗೆ ಅಂತಿಮವಾಗಬೇಕಿದೆ. ಇದಾದ ಬಳಿಕ ವ್ಯವಸ್ಥೆ ಜಾರಿಯಾಗಲಿದೆ.
ಹೊಸ ವ್ಯವಸ್ಥೆಯಲ್ಲಿ ಬಿಎಂಟಿಸಿ ಬಸ್ ನಿರ್ವಾಹಕರು ಹ್ಯಾಂಡ್ ಹೆಲ್ಡ್ ಸಾಧನ ಹೊಂದಿರುತ್ತಾರೆ. ಪ್ರಯಾಣಿಕರ ಹತ್ತುವ ಮತ್ತು ಗಮ್ಯಸ್ಥಾನ ಈ ಯಂತ್ರವು ಬೆಲೆಯ ಲೆಕ್ಕಾಚಾರ ಮಾಡುತ್ತದೆ. ನಂತರ ಕೋಡ್ ತೋರಿಸುತ್ತದೆ, ಪ್ರಯಾಣಿಕರು ತಮ್ಮ Google Pay ಅಥವಾ PhonePe ಮೂಲಕ ಸ್ಕ್ಯಾನ್ ಮಾಡಿ ವಹೀವಾಟು ಪೂರ್ಣಗೊಳಿಸಬೇಕು. ನಂತರವೇ ಭೌತಿಕ ಟಿಕೆಟ್ ಲಭ್ಯವಾಗಲಿದೆ. ವಿಫಲ ವಹಿವಾಟುಗಳಿಗೆ ಟಿಕೆಟ್‌ಗಳನ್ನು ರಚಿಸಲಾಗುವುದಿಲ್ಲ ಮತ್ತು ಅಂತಹ ಸಂದರ್ಭಗಳಲ್ಲಿ, ಪ್ರಯಾಣಿಕರು ನಗದು ಪಾವತಿಸಲೂ ಸಹ ಅವಕಾಶ ಇರಲಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.











Click it and Unblock the Notifications