BMTC Namma Metro Feeder Bus; ಹೊಸ ಮಾರ್ಗ, ಬಸ್ ಸಂಖ್ಯೆ, ನಿಲ್ದಾಣ
ಬೆಂಗಳೂರು, ಜುಲೈ 31; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಮ್ಮ ಮೆಟ್ರೋ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ-ಫೀಡರ್ ಬಸ್‌ಗಳನ್ನು ಓಡಿಸುತ್ತದೆ. ಜನರು ಮೆಟ್ರೋ ನಿಲ್ದಾಣದಿಂದ ಬೇರೆ ಪ್ರದೇಶಕ್ಕೆ ಸಾಗಲು, ಮೆಟ್ರೋ ನಿಲ್ದಾಣಕ್ಕೆ ಬರಲು ಈ ಬಸ್‌ಗಳು ಸಹಾಯಕವಾಗಿವೆ.
ಬಿಎಂಟಿಸಿ ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ನಮ್ಮ ಮೆಟ್ರೋ ಪ್ರಯಾಣಿಕರಿಗೆ First and Last mile connectivity ನೀಡಲು ಹೊಸ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್‌ಗಳನ್ನು ಘೋಷಣೆ ಮಾಡಿದೆ.

ಈ ಬಸ್‌ಗಳು ಹವಾನಿಯಂತ್ರಣರಹಿತ ಬಸ್ ಸೇವೆಯಾಗಿದೆ. ನೂತನ ಮೆಟ್ರೋ ಫೀಡರ್ ಮಾರ್ಗಗಳನ್ನು ಆಗಸ್ಟ್ 1ರಿಂದ ಪರಿಚಯಿಸಲಾಗುತ್ತಿದೆ ಎಂದು ಬಿಎಂಟಿಸಿಯ ಪ್ರಕಟಣೆ ತಿಳಿಸಿದೆ. ಮಾರ್ಗ ಸಂಖ್ಯೆ, ಬಸ್ ಸಂಖ್ಯೆ, ಮಾರ್ಗದ ವಿವರಗಳನ್ನು ಸಹ ತಿಳಿಸಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಹೊಸ ಮಾರ್ಗಗಳ ವಿವರ
ಮಾರ್ಗ ಸಂಖ್ಯೆ ಎಂಎಫ್-1ಜಿ. ಐಟಿಪಿಎಲ್ ಮೆಟ್ರೋ ನಿಲ್ದಾಣದಿಂದ ಹೊರಟು ಐಟಿಪಿಎಲ್ ಮೆಟ್ರೋ ನಿಲ್ದಾಣಕ್ಕೆ ವಾಪಸ್. ಬಸ್‌ಗಳ ಸಂಖ್ಯೆ 1. ಈ ಮಾರ್ಗದ ಬಸ್ ಹೋಪ್ ಫಾರಂ, ಚನ್ನಸಂದ್ರ, ನಾಗೊಂಡನಹಳ್ಳಿ, ಇಮ್ಮಡಿಹಳ್ಳಿ, ವೈಟ್‌ಫೀಲ್ಡ್ ಪೋಸ್ಟ್ ಆಫೀಸ್, ಹೋಪ್ ಫಾರಂ ಮೂಲಕ ಸಂಚಾರ ನಡೆಸುತ್ತದೆ.
ಮಾರ್ಗ ಸಂಖ್ಯೆ ಎಂಎಫ್-1ಜಿಎ. ಐಟಿಪಿಎಲ್ ಮೆಟ್ರೋ ನಿಲ್ದಾಣದಿಂದ ಹೊರಟು, ಐಟಿಪಿಎಲ್ ಮೆಟ್ರೋ ನಿಲ್ದಾಣಕ್ಕೆ ವಾಪಸ್. ಈ ಮಾರ್ಗದಲ್ಲಿ 1 ಬಸ್ ಸಂಚಾರ ನಡೆಸಲಿದೆ. ಈ ಬಸ್ ಹೋಪ್ ಫಾರಂ, ವೈಟ್‌ಫೀಲ್ಡ್ ಪೋಸ್ಟ್ ಆಫೀಸ್, ಇಮ್ಮಡಿಹಳ್ಳಿ, ನಾಗೊಂಡನಹಳ್ಳಿ, ಚನ್ನಸಂದ್ರ , ಹೋಪ್ ಫಾರಂ ಮಾರ್ಗದಲ್ಲಿ ಓಡಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ಮೆಟ್ರೋ ಫೀಡರ್ ಸೇವೆಗಳನ್ನು ಆರಂಭಿಸಲಾಗಿದೆ.
— BMTC (@BMTC_BENGALURU) July 31, 2023
#@ ಸಮೂಹ ಸಾರಿಗೆ ಬಳಸಿ ವಾಯು ಮಾಲಿನ್ಯ ತಡೆಗಟ್ಟಲು ಸಹಕರಿಸಿ#@
For the convenience of commuters, New metro feeder services have been launched. #@ Help prevent air pollution by using mass transit #@ pic.twitter.com/mXUlPD9nTV
ಮಾರ್ಗ ಸಂಖ್ಯೆ ಎಂಎಫ್-1ಕೆ. ಕಾಡುಗೋಡಿ ಮೆಟ್ರೋ ನಿಲ್ದಾಣದಿಂದ ಕನ್ನಮಂಗಲ. ಈ ಮಾರ್ಗದಲ್ಲಿ 2 ಬಸ್‌ಗಳು ಸಂಚಾರ ನಡೆಸಲಿವೆ. ಈ ಬಸ್ ಬೆಳ್ತೂರು, ಸೀಗೆಹಳ್ಳಿ, ಕನ್ನಮಂಗಲ ಗೇಟ್ ಮೂಲಕ ಸಂಚಾರ ನಡೆಸಲಿದೆ.
ಮಾರ್ಗ ಸಂಖ್ಯೆ ಹೆಚ್ಎಸ್ಆರ್ ಎಫ್‌ಡಿಆರ್-1. ಅಗರ ದಿಂದ ಅಗರ. ಈ ಮಾರ್ಗದಲ್ಲಿ 5 ಬಸ್‌ಗಳು ಸಂಚಾರ ನಡೆಸಲಿವೆ. ಮೆಕ್ ಡೊನಾಲ್ಡ್, ಮಂಗಮ್ಮನಪಾಳ್ಯ, ಪರಂಗಿಪಾಳ್ಯ ಮೂಲಕ ಬಸ್‌ಗಳು ಸಂಚಾರ ನಡೆಸುತ್ತವೆ.
ಮಾರ್ಗ ಸಂಖ್ಯೆ ಹೆಚ್ಎಸ್ಆರ್ ಎಫ್‌ಡಿಆರ್-1ಎ. ಅಗರ ಬಸ್ ನಿಲುಗಡೆ ಯಿಂದ ಅಗರ ಬಸ್ ನಿಲುಗಡೆ. ಈ ಮಾರ್ಗದಲ್ಲಿ 5 ಬಸ್‌ಗಳು ಸಂಚಾರ ನಡೆಸಲಿವೆ. ಪರಂಗಿಪಾಳ್ಯ, ಮಂಗಮ್ಮನಪಾಳ್ಯ, ಮೆಕ್ ಡೊಲಾಲ್ಡ್ ಮೂಲಕ ಈ ಬಸ್‌ಗಳು ಸಂಚಾರ ನಡೆಸಲಿವೆ.












Click it and Unblock the Notifications