ಬಿಎಂಟಿಸಿ ಆಪ್: ಬೆರಳ ತುದಿಯಲ್ಲೇ ಪ್ರಯಾಣ ಮಾಹಿತಿ
ಬೆಂಗಳೂರು, ಜ.13: ಬೆಂಗಳೂರಿನ ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಹು ನಿರೀಕ್ಷಿತ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದೆ.
ಒಂದು ಬಸ್ ನಿರ್ದಿಷ್ಟ ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ತಲುಪಲು ತೆಗೆದುಕೊಳ್ಳುವ ಅವಧಿ, ಆ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು, ಪ್ರಯಾಣ ದರ, ಪ್ರತಿಯೊಂದು ನಿಲ್ದಾಣದ ನಡುವಿನ ಅಂತರ, ಟ್ರಿಪ್ ಪ್ಲಾನರ್ ಸೇರಿದಂತೆ ಅನೇಕ ಮಾಹಿತಿಗಳನ್ನು ಈ ತಂತ್ರಾಂಶ ಒದಸಿಗುತ್ತದೆ ಎಂದು ಬಿಎಂಟಿಸಿ ಅಭಿವೃದ್ಧಿಪಡಿಸಿರುವ ಐಟಿ ವಿಭಾಗದ ಕುಮಾರ್ ಪುಷ್ಕರ್ ಹೇಳಿದ್ದಾರೆ. [ಪ್ರಯಾಣಿಕ ಸ್ನೇಹಿಯಾಗಲು ಬಿಎಂಟಿಸಿ ಸಿದ್ಧತೆ!]
ಪ್ರಯಾಣಿಕರಿಗೆ ಬೆರಳ ತುದಿಯಲ್ಲೇ ಬಸ್ ಪ್ರಯಾಣ ಮಾಹಿತಿಯನ್ನು ನೀಡುವ 'ಈಸಿ ಟ್ರಾವೆಲ್ ಇನ್‌ಫರ್ಮೇಶನ್ ಪ್ಲಾನರ್' ಬಿಎಂಟಿಸಿ ಮೊಬೈಲ್ ಅಪ್ಲಿಕೇಷನ್ ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಪ್ರಯಾಣಿಕರ ಬಳಕೆಗೆ ಮುಕ್ತಗೊಳಿಸಿದರು. ಇದೇ ಸಂದರ್ಭ 60ನೇ ಬಸ್ ದಿನಾಚರಣೆ ಮತ್ತು ನೂತನ ಚಕ್ರ ಸಾರಿಗೆ ಸೇವೆಯನ್ನು ಉದ್ಘಾಟಿಸಿದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್ ಕೌರ್ ಮಾತನಾಡಿ ''ಮುಂದಿನ ದಿನಗಳಲ್ಲಿ ಐಒಎಸ್ ಮಾದರಿ ಮೊಬೈಲ್‌ಗಳಲ್ಲೂ ಮಾಹಿತಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುವಂತೆ ಮಾಡಲಾಗುವುದು,'' ಎಂದರು. ಅಪ್ಲಿಕೇಷನ್ ನಲ್ಲಿ ಏನೇನಿದೆ? ಮುಂದೆ ಓದಿ...

ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಹೇಗೆ?
ಆಂಡ್ರಾಯ್ಡ್ ಆಧಾರಿತ ಮೊಬೈಲ್ ಫೋನ್ ಗಳಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ ತೆರಳಿ, ಬಿಎಂಟಿಸಿ (BMTC) ಎಂದು ಟೈಪ್ ಮಾಡಬೇಕು. ಇಲ್ಲಿ ಗಂಡಬೇರುಂಢ ಲಾಂಛನವಿರುವ 'ಈಸಿ ಟ್ರಾವೆಲ್ ಇನ್‌ಫರ್ಮೇಶನ್ ಪ್ಲಾನರ್' ಎಂಬ ತಂತ್ರಾಂಶ ಲಭ್ಯವಾಗುತ್ತದೆ. 9.5 ಎಂಬಿ ಇರುವ ಇನ್ ಸ್ಟಾಲ್ ಮಾಡಿಕೊಳ್ಳಿ. ಆಂಡ್ರಾಯ್ಡ್ OS 2.3.3 ಅಥವಾ ಮೇಲ್ಮಟ್ಟದ OS ಇದ್ದರೆ ಸಾಕು

ಲಭ್ಯ ವಿರುವ ಸೌಲಭ್ಯಗಳು
ಈ ಅಪ್ಲಿಕೇಷನ್ ತೆರೆದಾಕ್ಷಣ ಟ್ರಿಪ್ ಪ್ಲಾನರ್, ವೇಳಾಪಟ್ಟಿ, ಪ್ರಯಾಣ ದರ, ದೂರುಗಳು ಸೇರಿದಂತೆ ಒಟ್ಟು ಆರು ಆಯ್ಕೆಗಳು ಲಭ್ಯವಾಗುತ್ತವೆ.
* ಟ್ರಿಪ್ ಪ್ಲಾನರ್ ಅನ್ನು ಆಯ್ಕೆ ಮಾಡಿದರೆ ನೀವಿರುವ ಸ್ಥಳವು ಮೊಬೈಲ್ ಪರದೆ ಮೇಲೆ ಪ್ರದರ್ಶಿತವಾಗುತ್ತದೆ. ನಂತರ ತಲುಪಬೇಕಾದ ಸ್ಥಳವನ್ನು ಟೈಪ್ ಮಾಡಿದರೆ ಸಾಕು; ಹತ್ತಿರ ಬಸ್ ನಿಲ್ದಾಣವೆಲ್ಲಿದೆ, ದೂರವೆಷ್ಟು, ಕಾಲ್ನಡಿಗೆಯಲ್ಲಿ ಸಾಗಲು ಎಷ್ಟು ಸಮಯ ಹಿಡಿಯುತ್ತದೆ ಇತ್ಯಾದಿ ಮಾಹಿತಿ ನೀಡುತ್ತದೆ. ಬಸ್ ಬದಲಿ ಮಾರ್ಗಗಳು ಲಭ್ಯವಿದೆ
* ಸಮೀಪದ ಹೋಟೆಲ್, ರೆಸ್ಟೋರೆಂಟ್, ಸಿನಿಮಾ ಮಂದಿರ ಸೇರಿದಂತೆ ಹಲವು ಮಾಹಿತಿಯನ್ನು ಕೂಡ ಅಂಗೈನಲ್ಲೇ ಪಡೆಯಬಹುದಾಗಿದೆ.

ದೂರು ಸಲ್ಲಿಸುವುದು ಹೇಗೆ?
ಬಸ್‌ನಲ್ಲಿ ಚಾಲಕ, ನಿರ್ವಾಹಕರು ಅಸಭ್ಯ ವರ್ತನೆ ಹಾಗೂ ವಾಹನದ ದುಸ್ಥಿತಿಯ ಭಾವಚಿತ್ರವನ್ನು ಸೆರೆಹಿಡಿದು ದೂರು ನೀಡಬಹುದು. ಬಸ್ ಮಾರ್ಗದ ಸಂಖ್ಯೆ, ನೋಂದಣಿ ಸಂಖ್ಯೆ, ದೂರಿನ ವಿವರ, ದೂರುದಾರರ ಇಮೇಲ್ ವಿಳಾಸ ಮತ್ತು ಸಂಪರ್ಕ ಸಂಖ್ಯೆ ನೀಡಬೇಕು. ಬಳಿಕ ಸಂಸ್ಥೆಯು ದೂರುದಾರರಿಗೆ ಪ್ರತ್ಯೇಕ ಸಂಖ್ಯೆ ನೀಡಿ, ಕೈಗೊಂಡ ಕ್ರಮಗಳ ಬಗ್ಗೆ ಸಂದೇಶ ಕಳುಹಿಸಲಾಗುತ್ತದೆ.

ದರ ಪಟ್ಟಿ ವೇಳಾಪಟ್ಟಿ ಇತ್ಯಾದಿ
ಉದಾಹರಣೆಗೆ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಪ್ರಯಾಣ ದರ ತಿಳಿಯ ಬೇಕಾದರೆ ಎಲ್ಲಿಂದ ಎಲ್ಲಿಗೆ ಎಂಬುದನ್ನು ಹಾಕಿ ವಯಸ್ಸು, ಪ್ರಯಾಣದ ರೀತಿ ನಮೂದಿಸಿದರೆ ದರ ಲಭ್ಯವಾಗುತ್ತದೆ.
ವೇಳಾಪಟ್ಟಿಯಲ್ಲಿ ಸಾಮಾನ್ಯ, ಎಸಿ, ಇನ್ನಿತರೆ ಬಸ್ ಮಾದರಿಯ ವೇಳಾಪಟ್ಟಿ ಸಿಗುತ್ತದೆ

ಎಂ ಇಂಡಿಕೇಟರ್ ಸೌಲಭ್ಯ
ಮುಂಬೈನಲ್ಲಿರುವಂತೆ ಬಿಎಂಟಿಸಿ ಬಸ್ ಅಪ್ಲಿಕೇಷನ್ ಗಳಲ್ಲೂ ಎಂ ಇಂಡಿಕೇಟರ್ ಅಳವಡಿಸಲು ಬಿಎಂಟಿಸಿ ಸಜ್ಜಾಗಿದೆ.ಪೊಲೀಸ್, ಆಸ್ಪತ್ರೆ, ಆಂಬ್ಯುಲೆನ್ಸ್, ಅಗ್ನಿಶಾಮಕದಳ ಸೇರಿದಂತೆ ಅಗತ್ಯ ತುರ್ತು ಕರೆ ಮಾಡಲು ಹಾಗೂ ಇತರೆ ಸಾರಿಗೆ ಸೌಲಭ್ಯ ದರಗಳನ್ನು ಮಹಿಳೆಯರಿಗೆ ವಿಶೇಷವಾಗಿ ರೂಪಿಸಲಾಗುತ್ತಿದೆ.

ಬಿಎಂಟಿಸಿ ಆಪ್ ಹೇಗಿದೆ?
ಬಿಎಂಟಿಸಿ ಬಸ್ ಸಂಚಾರ, ಮಾರ್ಗ, ದರದ ಬಗ್ಗೆ ಈಗಾಗಲೇ ಸಾಕಷ್ಟು ಮೊಬೈಲ್ ಅಪ್ಲಿಕೇಷನ್ ಗಳಿವೆ. ಬಿಎಂಟಿಸಿಯ ಅಧಿಕೃತ ಅಪ್ಲಿಕೇಷನ್ ಆಂಡ್ರಾಯ್ಡ್ ನಲ್ಲಿ ಮಾತ್ರ ಲಭ್ಯವಿದ್ದು, ವಿಂಡೋಸ್, ಐಓಸ್ ನಲ್ಲೂ ಲಭ್ಯವಾದರೆ ಒಳ್ಳೆಯದು.
ಟ್ರಾಫಿಕ್ ರಿಯಲ್ ಟೈಮ್ ಅಪ್ಡೇಟ್ ಸಿಗುತ್ತಿಲ್ಲ. mybmtc.com ವೆಬ್ ನಲ್ಲಿರುವ ಸೌಲಭ್ಯಗಳನ್ನೇ ಮೊಬೈಲ್ ಆಪ್ ನಲ್ಲಿ ಇಳಿಸಲಾಗಿದೆ. ದಿನ ಕಳೆದಂತೆ ಹೆಚ್ಚೆಚ್ಚು ಬಳಕೆಯಾದಂತೆ ಆಪ್ ನ ಬಂಡವಾಳ ತಿಳಿಯಲಿದೆ. ಆದರೆ, ಇದು ಉತ್ತಮ ನಡೆ ಎಂದು ಹೇಳಬಹುದು. ಆಂಡ್ರಾಯ್ಡ್ ಫೋನ್ ಗಳಿಗೆ ಡೌನ್ ಲೋಡ್ ಲಿಂಕ್












Click it and Unblock the Notifications