ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣಿಕ ಸ್ನೇಹಿಯಾಗಲು ಬಿಎಂಟಿಸಿ ಸಿದ್ಧತೆ!

|
Google Oneindia Kannada News

ಬೆಂಗಳೂರು, ಸೆ.17 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಲು ಸಿದ್ಧತೆ ನಡೆಸಿದೆ. ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಅನುಷ್ಠಾನಕ್ಕೆ ತರುವ ಮೂಲಕ ಸಾರ್ವಜನಿಕರಿಂದ ಬರುವ ದೂರಿನಿಂದ ಮುಕ್ತಿ ಪಡೆಯಲು ಚಿಂತನೆ ಆಲೋಚಿಸಿದೆ.

ಬಸ್ ನಿರ್ವಹಣಾ ವ್ಯವಸ್ಥೆ, ಪ್ರಯಾಣಿಕರು ಮತ್ತು ನಿರ್ವಾಹಕರ ಜಟಾಪಟಿ, ಕೊನೆ ಕ್ಷಣದಲ್ಲಿ ಬಸ್ ರದ್ದು, ಸಮಯಕ್ಕೆ ಸರಿಯಾಗಿ ಬಸ್ ಆಗಮಿಸದೆ ಇರುವುದು ಮುಂತಾದ ದೂರುಗಳಿಂದ ಬೇಸತ್ತ ಬಿಎಂಟಿಸಿ ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಅನುಷ್ಠಾನಕ್ಕೆ ತರಲು ಮುಂದಾಗಿದೆ.

bmtc

ಈ ಮೂಲಕ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡಿ ಜನಸ್ನೇಹಿ ಆಗಲಿದೆ. ಈ ತಂತ್ರಜ್ಞಾನ ಅಳವಡಿಕೆಯಿಂದ ನಿಯಂತ್ರಣ ಕೊಠಡಿಯಲ್ಲೇ ಬಸ್ ಎಲ್ಲಿದೆ? ಎಷ್ಟು ಹೊತ್ತಿಗೆ ನಿಲ್ದಾಣಕ್ಕೆ ಬರುತ್ತದೆ? ಮುಂತಾದ ಮಾಹಿತಿಗಳು ದೊರೆಯಲಿದ್ದು, ಇವು ಪ್ರಯಾಣಿಕರಿಗೂ ಲಭ್ಯವಾಗಲಿವೆ.

ಬಿಎಂಟಿಸಿ ಪ್ರಾಯೋಗಿಕವಾಗಿ ಅತೀ ಹೆಚ್ಚು ಸಮಸ್ಯೆ ಇರುವ ಯಲಹಂಕ ಡಿಪೋದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಮುಂದಿನ 3-4ತಿಂಗಳಿನಲ್ಲಿ ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಯೋಜನೆ ಅನುಷ್ಠಾನಗೊಳ್ಳಲಿದೆ.

ಪ್ರಾಯೋಗಿಕ ಯೋಜನೆಯ ಯಶಸ್ಸಿನ ನಂತರ, ಉಳಿದ ಡಿಪೋಗಳಿಗೆ ಈ ವ್ಯವಸ್ಥೆ ವಿಸ್ತರಣೆ ಮಾಡಲು ಬಿಎಂಟಿಸಿ ಯೋಜನೆ ರೂಪಿಸಿದೆ. ಈ ವ್ಯವಸ್ಥೆ ಅನ್ವಯ ಎಲ್ಲಾ ಬಸ್ ಗಳಿಗೂ ಜಿಪಿಎಸ್ ಅಳವಡಿಸಿ, ಬಸ್ ಗಳ ಪ್ರತಿಯೊಂದು ಮಾಹಿತಿ ಸಂಗ್ರಹಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.

ಹೈದರಾಬಾದ್ ಮೂಲದ ಕಂಪನಿಯೊಂದಕ್ಕೆ ಈ ಯೋಜನೆಯ ಟೆಂಡರ್ ನೀಡಲಾಗಿದೆ. ಇದರ ಪ್ರಕಾರ ಸಂಸ್ಥೆ ಯೋಜನೆಯ ವಿನ್ಯಾಸ ರೂಪಿಸಿ ಅಭಿವೃದ್ಧಿ, ಪರೀಕ್ಷೆ, ತಪಾಸಣೆ, ಅಳವಡಿಕೆ, ಕಾರ್ಯನಿರ್ವಹಣೆ, ಸಂವಹನ, ಜಾಲ, ತರಬೇತಿ ಮುಂತಾದವುಗಳ ನಿರ್ವಹಣೆ ನೋಡಿಕೊಳ್ಳಬೇಕಿದೆ.

ಈ ಯೋಜನೆ ಜಾರಿಗೆ ಬಂದ ನಂತರ, ಕೇಂದ್ರ ಕಚೇರಿಯ ನಿಯಂತ್ರಣಾ ಕೊಠಡಿಯಿಂದಲೇ ಬಸ್ ಗಳ ಮೇಲ್ವಿಚಾರಣೆ ನಡೆಯಲಿದೆ. ಇದರಿಂದ ಬಸ್‌ಗಳ ಸ್ಥಿತಿಯ ಕ್ಷಣ ಕ್ಷಣದ ಮಾಹಿತಿಯನ್ನು ನಿಯಂತ್ರಣ ಕೊಠಡಿಯಲ್ಲೇ ಪಡೆದುಕೊಳ್ಳಬಹುದು.

ಯೋಜನೆ ಅನ್ವಯ 10,000 ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್‌ಗಳು (ಇಟಿಎಂ) ಗಳನ್ನು ವಿತರಿಸಲು ನಿರ್ಧರಿಸಲಾಗಿದ್ದು, ಇದರಿಂದ ಹಳೆಯ ಟಿಕೆಟ್ ನೀಡಿ, ಪ್ರಯಾಣಿಕರನ್ನು ವಂಚಿಸುವ ನಿರ್ವಾಹಕರಿಗೆ ಕಡಿವಾಣ ಬೀಳಲಿದೆ.

ಸದ್ಯ ಬಿಎಂಟಿಸಿ 6,500 ಬಸ್ ಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 8,500 ಆಗುವ ಸಾಧ್ಯತೆ ಇದೆ. ಆದ್ದರಿಂದ ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಜಾರಿಗೆ ತರಲು ಬಿಎಂಟಿಸಿ ಸಿದ್ಧತೆ ನಡೆಸಿದೆ.

English summary
The Bangalore Metropolitan Transport Corporation (BMTC)’s plan for a massive fleet upgrade to 16,000 City buses and 52 depots will demand a technology-driven approach to manage its operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X