ಜೂನ್‌ ಆರಂಭದಲ್ಲಿಯೇ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ : ಹಣಕ್ಕೆ ಕೊರತೆ ಇರುವುದಿಲ್ಲ, ಪ್ರತಿ ಹೆಜ್ಜೆಗೂ ಸಿಗುವುದು ಗೆಲುವು

ಇನ್ನೇನು ಎರಡು ದಿನಗಳಲ್ಲಿ ಜೂನ್ ತಿಂಗಳು ಪ್ರಾರಂಭವಾಗಲಿದೆ. ಜೂನ್ 2, 2026 ರಂದು ಗುರು ಮಿಥುನ ರಾಶಿಯನ್ನು ಬಿಟ್ಟು ಕರ್ಕಾಟಕ ರಾಶಿಗೆ ಸಂಕ್ರಮಿಸಲಿದ್ದಾನೆ. ಗುರುವಿನ ಸಂಚಾರ ಅನೇಕ ರಾಶಿಯವರಿಗೆ ಅದೃಷ್ಟ ತರುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಕಂಡ ಕನಸುಗಳು ನನಸಾಗುತ್ತವೆ. ಸಂಪತ್ತು ಹೆಚ್ಚಾಗುತ್ತದೆ ಜೊತೆಗೆ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಲಾಗುತ್ತದೆ.

ಜೂನ್ 8 ರಂದು ಶುಕ್ರನು ಕರ್ಕಾಟಕ ರಾಶಿಗೆ, ಜೂನ್ 15 ರಂದು ಸೂರ್ಯ ಮಿಥುನ ರಾಶಿಗೆ, ಜೂನ್ 21 ರಂದು ಮಂಗಳ ಗ್ರಹ ವೃಷಭ ರಾಶಿಗೆ ಮತ್ತು ಜೂನ್ 22 ರಂದು ಬುಧ ಗ್ರಹವು ಕರ್ಕಾಟಕ ರಾಶಿಗೆ ಸಂಕ್ರಮಣ ನಡೆಸಲಿದ್ದಾರೆ. ಈ ಎಲ್ಲಾ ಗ್ರಹಗಳು ಜನರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಈ ಜೂನ್ ತಿಂಗಳ ಗ್ರಹಗಳ ಸಂಚಾರ 5 ರಾಶಿಯವರಿಗೆ ಹೆಚ್ಚು ಶುಭವಾಗಿರುತ್ತವೆ.

ಜೂನ್ 2026 ರ ಅದೃಷ್ಟ ರಾಶಿಗಳು :

June 2026 Horoscope

1. ವೃಷಭ ರಾಶಿ : ಜೂನ್ ತಿಂಗಳು ವೃಷಭ ರಾಶಿಯವರ ವೃತ್ತಿಜೀವನದಲ್ಲಿ ಯಶಸ್ಸು ಸಿಗುವುದು. ಜವಾಬ್ದಾರಿಗಳು ಹೆಚ್ಚಾಗುತ್ತವೆ.ಸ್ಥಾನ ಮಾನ, ಪ್ರತಿಷ್ಠೆ, ಗೌರವ ಹೆಚ್ಚಾಗುವುದು. ಆರ್ಥಿಕ ಲಾಭವಾಗುವುದು. ಕೆಲವು ಪ್ರಮುಖ ಕೆಲಸಗಳು ಈ ಸಮಯದಲ್ಲಿ ಪೂರ್ಣವಾಗುವುದು. ಆರ್ಥಿಕ ಸಮಸ್ಯೆಗಳು ನೀಗುವುದು. ಜೂನ್ ತಿಂಗಳು ಉಜ್ವಲ ಭವಿಷ್ಯದತ್ತ ಒಂದು ಪ್ರಮುಖ ಹೆಜ್ಜೆಯನ್ನು ಹಾಕುವಿರಿ. ಆರೋಗ್ಯವು ಸುಧಾರಿಸುತ್ತದೆ.

June 2026 Horoscope

2. ಮಿಥುನ ರಾಶಿ : ಜೂನ್ 2026 ಮಿಥುನ ರಾಶಿಯವರಿಗೆ ಗಮನಾರ್ಹ ಆರ್ಥಿಕ ಲಾಭಗಳನ್ನು ತರಬಹುದು. ಇದು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸುತ್ತದೆ. ಭವಿಷ್ಯಕ್ಕಾಗಿ ಹೂಡಿಕೆಗಳನ್ನು ಯೋಜಿಸಬಹುದು. ಅನಿರೀಕ್ಷಿತವಾಗಿ ಬಡ್ತಿ ಸಿಗುವುದು. ನೀವು ಕೈಗೊಂಡ ಯೋಜನೆಗಳು ಯಶಸ್ವಿಯಾಗುತ್ತವೆ. ವೈವಾಹಿಕ ಜೀವನವು ಮತ್ತೆ ಹಳಿಗೆ ಬರುತ್ತದೆ. ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.

June 2026 Horoscope

3. ಸಿಂಹ ರಾಶಿ : ಜೂನ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ವೃತ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳು ಬರಬಹುದು. ಬಹಳ ದಿನಗಳಿಂದ ತಯಾರಿ ನಡೆಸುತ್ತಿದ್ದ ಯೋಜನೆ ಈಗ ಯಶಸ್ವಿಯಾಗಬಹುದು. ಉದ್ಯೋಗ ಮತ್ತು ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ. ಮನೆ, ಆಸ್ತಿ ಅಥವಾ ಕಾರನ್ನು ಖರೀದಿಸುವ ಯೋಗವಿದೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪ ಒದಗಿ ಬರುವುದು.

June 2026 Horoscope

4. ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯಲ್ಲಿ ಗುರು ಗ್ರಹವು ಉತ್ತುಂಗಕ್ಕೇರುತ್ತಿದ್ದು, ಈ ರಾಶಿಯಲ್ಲಿ ಜನಿಸಿದವರಿಗೆ ಅತ್ಯಂತ ಶುಭ ಫಲ ನೀಡಲಿದ್ದಾನೆ. ವೃತ್ತಿಯಲ್ಲಿ ಪ್ರಗತಿಯಾಗುವುದು, ಸಂಪತ್ತು ಹೆಚ್ಚಳವಾಗುವುದು ಮತ್ತು ಸಂಬಂಧಗಳಲ್ಲಿ ಮಾಧುರ್ಯವಿರುವುದು. ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳಾಗುವುದು. ನಿರ್ದಿಷ್ಟವಾಗಿ ಜೂನ್ ತಿಂಗಳ ದ್ವಿತೀಯಾರ್ಧವು ಗಮನಾರ್ಹ ಸಾಧನೆ ಅಥವಾ ಸಂತೋಷವನ್ನು ತರಬಹುದು.

June 2026 Horoscope

5. ಧನು ರಾಶಿ : ವೃತ್ತಿ, ಹಣಕಾಸು, ಹೂಡಿಕೆಗಳು ಮತ್ತು ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತಮ ಸಮಯ. ಗೊತ್ತಿಲ್ಲದ ಮೂಲಗಳಿಂದ ಹಣ ಹರಿದು ಬರುವುದು. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ನಿರೀಕ್ಷೆಯ ಕೆಲಸವೇ ಸಿಗುವುದು. ಮನಸ್ಸಿನ ಆಸೆಗಳು ಈಡೇರುವುದು. ನಿಮ್ಮ ಪ್ರತಿಷ್ಠೆಯೂ ಹೆಚ್ಚಾಗುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+