BMTC: ಐಟಿ ವೃತ್ತಿಪರರಿಗಾಗಿ 2 ಹೊಸ ಮಾರ್ಗದಲ್ಲಿ ಎಸಿ ಬಸ್ ಸೇವೆ ಆರಂಭ; ಎಲ್ಲಿಂದ-ಎಲ್ಲಿಗೆ? ವೇಳಾಪಟ್ಟಿ
ಬೆಂಗಳೂರು: ಐಟಿ ಕಾರಿಡಾರ್ ಗೆ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಗುಡ್‌ನ್ಯೂಸ್ ನೀಡಿದೆ. ಸಂಸ್ಥೆಯು ಮೂರು ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸೇವೆಯನ್ನು ಪರಿಚಯಿಸಿದೆ. ಇದರಲ್ಲಿ ಎರಡು ಮಾರ್ಗದಲ್ಲಿ ಹೊಸ ಎಸಿ ಬಸ್ ಓಡಿಸಲು ಮುಂದಾದಾದರೆ, ನೆಲಮಂಗಲದಿಂದ ನೂತನ ಮಾರ್ಗದಲ್ಲಿ ಸಾಮಾನ್ಯ ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ಮಾಡಲಾಗುತ್ತದೆ.
ಸೋಮವಾರದಿಂದ (ಜುಲೈ 27) ಕನಕಪುರ ಮತ್ತು ಚನ್ನಪಟ್ಟಣದಿಂದ NICE ರಸ್ತೆ ಮೂಲಕ ಬೆಂಗಳೂರಿನ ಐಟಿ ಕಾರಿಡಾರ್ ಎಲೆಕ್ಟ್ರಾನಿಕ್ಸ್ ಸಿಟಿ/ ವಿಪ್ರೋ ಗೇಟ್‌ಗೆವರೆಗೆ ಸಂಚಾರ ಮಾಡಲಿವೆ. ಈ ಎಸಿ ಬಸ್ ಸೇವೆಗಳು ಕೆಲವು ಉಪನಗರಗಳು ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿನ ಐಟಿ ಕಾರಿಡಾರ್ ನಡುವಿನ ಉತ್ತಮ ಸಂಪರ್ಕ ಸೇವೆ ನೀಡಲಿವೆ. ಕನಕಪುರ EX-V-KNP-1A ಮತ್ತು EX-V-CPT-1A ಚನ್ನಪಟ್ಟಣ ಹೊಸ ಮಾರ್ಗದಡಿ ನಿತ್ಯ ನೂರಾರು ಪ್ರಯಾಣಿಕರು ಎಸಿ ಬಸ್‌ಗಳ ಸೇವೆ ಪಡೆಯಬಹುದಾಗಿದೆ.

ಎಸಿ ಬಸ್ ಸಂಚಾರ ವೇಳಾಪಟ್ಟಿ, ಟಿಕೆಟ್ ದರ
* EX-V-KNP-1A ಮಾರ್ಗದಲ್ಲಿ ಕನಕಪುರದಿಂದ ಎಸಿ ಬಸ್ ಬೆಳಗ್ಗೆ 7.45ಕ್ಕೆ ಹೊರಡುತ್ತದೆ.
* EX-V-CPT-1A ಮಾರ್ಗದಲ್ಲಿ ಚನ್ನಪಟ್ಟಣದಿಂದ ಎಸಿ ಬಸ್ ಬೆಳಗ್ಗೆ 7.45ಕ್ಕೆ ಹೊರಟು ಈ ಎರಡು ಬಸ್‌ಗಳು ಎಲೆಕ್ಟ್ರಾನಿಕ್ ಸಿಟಿ, ವಿಪ್ರೋ ಗೇಟ್ ವರೆಗೆ ಸೇವೆ ನೀಡುತ್ತವೆ.
* ಮರಳಿ ಎಲೆಕ್ಟ್ರಾನಿಕ್ ಸಿಟಿ, ವಿಪ್ರೋ ಗೇಟ್ ಎರಡು ಬಸ್‌ಗಳು ಸಂಜೆ 5.45ಕ್ಕೆ ತೆರಳುತ್ತವೆ.
* ತಲಾ ಒಬ್ಬ ಪ್ರಯಾಣಿಕರಿಗೆ ಕನಕಪುರದಿಂದ ಬರುವವರಿಗೆ 130 ರೂಪಾಯಿ.
* ಚನ್ನಪಟ್ಟಣದಿಂದ ಬರುವವರಿಗೆ 170 ರೂಪಾಯಿ ನಿಗದಿ ಪಡಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೂರದ ಪ್ರದೇಶಗಳಿಂದ ಐಟಿ ಕಾರಿಡಾರ್‍ಗೆ ಬರುವನೌಕರರು, ಸಾರ್ವಜನಿಕರಿಗೆ ಹವಾ ನಿಯಂತ್ರಿತ ಎಸಿ ಬಸ್ ಆರಾಮದಾಯಕ ಸೇವೆ ನೀಡಲಿದೆ. ದಕ್ಷ ಹಾಗೂ ವಿಶ್ವಾಸನೀಯ ಸೇವೆ ಒದಗಿಸಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ನೆಲಮಂಗಲ-ದೊಡ್ಡಬೆಳವಂಗಲಕ್ಕೆ ಬಸ್ ಸೇವೆ ಶುರು
ಈ ಮೇಲಿನ ಎರಡು ಮಾರ್ಗ ಬಳಸುವ ಐಟಿ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಸೇರಿದಂತೆ ನೂರಾರು ಜನರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ. ಇನ್ನು ಮೂರನೇ ಹೊಸ ಮಾರ್ಗ ನೆಲಮಂಗಲದಿಂದ ದೊಡ್ಡಬೆಳವಂಗಲವರೆಗಿನ (258 ಟಿಡಿ) ಬಿಎಂಟಿಸಿ ಬಸ್ ಬಿಡಲಾಗಿದೆ. ಜುಲೈ 26ರಿಂದಲೇ ಸೇವೆ ಆರಂಭವಾಗಿದ್ದು, ಅನೇಕರು ಈ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಬಸ್ ಸಂಚಾರ ಸಮಯ ಹೀಗಿದೆ
ನೆಲಮಂಗಲ, ಬಸನವಹಳ್ಳಿ, ಕನ್ನಮಂಗಲ ಗೇಟ್, ಕನಸವಾಡಿ, ಪುಟ್ಟಯ್ಯನ ಅಗ್ರಹಾರ ಮಾರ್ಗವಾಗಿ ಸಾಗಲಿದೆ. ನಿತ್ಯ ಬೆಳಗ್ಗೆ ನೆಲಮಂಗಲವನ್ನು ಬೆಳಗ್ಗೆ 6.30, 8:00, 9.10, 10:20, ಮಧ್ಯಾಹ್ನ 1.45, 03:00, 4:20, 5.30, 6.40 ಮತ್ತು ರಾತ್ರಿ 8 ಗಂಟೆಗೆ ಹೊರಡುತ್ತದೆ. ಮರಳಿ ದೊಡ್ಡಬೆಳವಂಗಲದಿಂದ ಬೆಳಗ್ಗೆ 6.30, 8:00, 9.10, 10:20, 11:40 ಮಧ್ಯಾಹ್ನ 3.10, 4:20, 5.30, 6.40 ಮತ್ತು 8.40ಕ್ಕೆ ಹೊರಡುತ್ತದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.


Click it and Unblock the Notifications
