BMTC: 820 ಡೀಸೆಲ್ ಬಸ್‌ಗಳನ್ನು ಖರೀದಿಸಲು ಟೆಂಡರ್ ಆಹ್ವಾನಿಸಿದ ಬಿಎಂಟಿಸಿ
ಬೆಂಗಳೂರು, ಫೆಬ್ರವರಿ.12: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಬಸ್‌ಗಳನ್ನು ರಸ್ತೆಗೆ ಇಳಿಸುತ್ತಿದೆ. ಈಗ ಮತ್ತೆ ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಲು 820 ಡೀಸೆಲ್ ಬಸ್‌ಗಳನ್ನು ಖರೀದಿಸಲು ಟೆಂಡರ್‌ಗಳನ್ನು ಆಹ್ವಾನಿಸಿದೆ.
ಫೆಬ್ರವರಿ 9 ರಂದು, ಬಿಎಂಟಿಸಿ ಸಂಪೂರ್ಣವಾಗಿ ನಿರ್ಮಿಸಲಾದ 820 ಭಾರತ್ ಸ್ಟೇಜ್ 6 ಡೀಸೆಲ್ ಬಸ್‌ಗಳನ್ನು ಖರೀದಿಸಲು ಟೆಂಡರ್‌ಗಳನ್ನು ಕರೆದಿದೆ. ಫೆಬ್ರವರಿ 17 ಬಿಡ್ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ವರ್ಷಾಂತ್ಯದ ಒಳಗೆ ಬಿಎಂಟಿಸಿ ಒಟ್ಟು 1,900 ಹೊಸ ಬಸ್‌ಗಳನ್ನು ರಸ್ತೆಗೆ ಇಳಿಸಲು ನಿರ್ಧರಿಸಿದೆ. ಈ ಪೈಕಿ 921 ಬಸ್‌ಗಳು ಎಲೆಕ್ಟ್ರಿಕ್ ಬಸ್‌ಗಳಾಗಿವೆ. 820 ಡೀಸೆಲ್ ಬಸ್‌ಗಳು ಇದರಲ್ಲೇ ಸೇರಿವೆ.

820 ಡೀಸೆಲ್ ಬಸ್‌ಗಳನ್ನು ರಾಜ್ಯ ಸರ್ಕಾರದ ಹಣದಲ್ಲಿ ಖರೀದಿಸಲಾಗುವುದು ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಜಿಟಿ ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ. ಟಾಟಾ ಮೋಟಾರ್ಸ್‌ನಿಂದ ಪ್ರಾಯೋಗಿಕವಾಗಿ ಕೇವಲ 20 ಬಸ್‌ಗಳನ್ನು ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತೆ ಅಗ್ರಸ್ಥಾನಕ್ಕೆ ಏರಲಿದೆಯೇ ಬೆಂಗಳೂರು?
ಬೆಂಗಳೂರು ನಗರ ಸಾರಿಗೆ ಸಂಸ್ಥೆಯು ಅಲ್ಪಾವಧಿಯಲ್ಲಿ ಯೋಜಿಸಿರುವ ಬಸ್ ಖರೀದಿಗಳ ಸರಣಿಯಲ್ಲಿ ಇದು ಕೊನೆಯದು. ಈ ಸಿಟಿ ಬಸ್‌ಗಳ ಖರೀದಿಯಿಂದಾಗಿ ಸಿಟಿ ಬಸ್ ಸೇವೆಯಲ್ಲಿ ಬೆಂಗಳೂರು ಮತ್ತೆ ಅಗ್ರಸ್ಥಾನವನ್ನು ಮರಳಿ ಪಡೆಯುವ ನಿರೀಕ್ಷೆಯಿದೆ. ಮೊದಲ ಸ್ಥಾನದಲ್ಲಿ ನವ ದೆಹಲಿಯುದ್ದು, ಅಲ್ಲಿ 7,135 ಸಿಟಿ ಬಸ್ಸುಗಳಿವೆ. ಇದು ಇಡಿ ಭಾರತದಲ್ಲೇ ಅತಿಹೆಚ್ಚು ಸಿಟಿ ಬಸ್‌ಗಳನ್ನು ಹೊಂದಿರುವ ನಗರ.
ಎರಡು ವರ್ಷಗಳ ಹಿಂದೆ ಅಕ್ಟೋಬರ್ 2022 ರಲ್ಲಿ, ಬಿಎಂಟಿಸಿ 840 ಡೀಸೆಲ್ ಬಸ್‌ಗಳನ್ನು ಖರೀದಿಸಲು ಟೆಂಡರ್ ಹೊರಡಿಸಿತ್ತು. ಆದರೆ, ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯ ಕಾರಣ ಪ್ರಕ್ರಿಯೆಯನ್ನು ತಡೆಹಿಡಿಯಬೇಕಾಯಿತು. ಬಿಎಂಟಿಸಿಯು 1,000 ಎಂಎಂ ಮಹಡಿ ಎತ್ತರವಿರುವ ಬಸ್‌ಗಳನ್ನು ಖರೀದಿಸುತ್ತಿದ್ದು, ವಿಕಲಚೇತನರಿಗೆ ಕಷ್ಟವಾಗುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಮಾರ್ಚ್ 2023 ರಲ್ಲಿ, ಗಾಲಿಕುರ್ಚಿಗಳನ್ನು ಬಳಸುವ ಪ್ರಯಾಣಿಕರಿಗೆ ವಾಹನಗಳು ಸಂಪೂರ್ಣ ಪ್ರವೇಶವನ್ನು ಒದಗಿಸುತ್ತವೆ ಎಂದು ಸಂಸ್ಥೆ ಮಾಹಿತಿ ನೀಡಿದ ನಂತರ ಬಿಎಂಟಿಸಿಗೆ ಬಸ್ ಖರೀದಿ ಮಾಡಲು ನ್ಯಾಯಾಲಯವು ಅನುಮತಿ ನೀಡಿದೆ. ಆದರೆ, ವಿಧಾನಸಭೆ ಚುನಾವಣೆ ಪ್ರಕ್ರಿಯೆ ಹಿನ್ನೆಲೆ ವಿಳಂಬವಾಯಿತು.
ನಂತರ ಬಿಎಂಟಿಸಿ ಹೊಸ ಟೆಂಡರ್ ಕರೆಯಲು ನಿರ್ಧರಿಸಿತು. ಇನ್ನೆರಡು ತಿಂಗಳಲ್ಲಿ ಟೆಂಡರ್ ಅಂತಿಮಗೊಳ್ಳಲಿದ್ದು, ಈ ವರ್ಷದಲ್ಲಿ ಬಸ್‌ಗಳು ಬರಲಿವೆ ಎಂದು ಬಿಎಂಟಿಸಿ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಬಿಎಂಟಿಸಿ ಡೀಸೆಲ್ ಬಸ್‌ಗೆ ಕಿಮೀಗೆ 78 ರೂಪಾಯಿ ಖರ್ಚು ಮಾಡುತ್ತದೆ. ಆದರೆ, ಕೇವಲ 66 ರೂಪಾಯಿ ಗಳಿಸುತ್ತದೆ. ವೋಲ್ವೋ ಬಸ್‌ಗಳು ಕಿಮೀಗೆ 105 ರೂಪಾಯಿ ಖರ್ಚು ಮಾಡಿ, ಕೇವಲ 70 ರೂಪಾಯಿ ಗಳಿಸುತ್ತವೆ.

ಮಾರ್ಚ್ 31, 2023 ರ ವೇಳೆಗೆ 6,688 ಬಸ್‌ಗಳನ್ನು ಹೊಂದಿದ್ದ ಬಿಎಂಟಿಸಿ, 2,211 ವಾಹನಗಳನ್ನು ಖರೀದಿಸಲು ಅಥವಾ ಬಾಡಿಗೆಗೆ ಪಡೆಯುವ ಯೋಜನೆಯನ್ನು ರೂಪಿಸಿದೆ. ಇವುಗಳಲ್ಲಿ 921 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳು, 840 ಡೀಸೆಲ್ ಬಸ್‌ಗಳು, 320 ಎಸಿ ಇ-ಬಸ್‌ಗಳು, 120 ಮಿಡಿ ಬಸ್‌ಗಳು ಮತ್ತು 10 ಎಸಿ ಡಬಲ್ ಡೆಕ್ಕರ್ ಇ-ಬಸ್‌ಗಳು ಸೇರಿವೆ.
ಡಿಸೆಂಬರ್ 2023 ರಲ್ಲಿ ಟಿಎಂಡಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್‌ನಿಂದ 921 ನಾನ್-ಎಸಿ ಇ-ಬಸ್‌ಗಳಲ್ಲಿ 100 ಅನ್ನು ಪರಿಚಯಿಸಿದರು. ಉಳಿದವುಗಳನ್ನು ಮುಂದಿನ ಕೆಲವು ತಿಂಗಳುಗಳಲ್ಲಿ ಪಡೆಯುವ ನಿರೀಕ್ಷೆಯಿದೆ. ಬಿಎಂಟಿಸಿ ಈಗಾಗಲೇ 320 ಎಸಿ ಇ-ಬಸ್‌ಗಳು, 120 ಮಿಡಿ ಬಸ್‌ಗಳು ಮತ್ತು 10 ಡಬಲ್ ಡೆಕ್ಕರ್ ಬಸ್‌ಗಳನ್ನು ಬಾಡಿಗೆಗೆ ಪಡೆಯಲು ಟೆಂಡರ್‌ಗಳನ್ನು ಕರೆದಿದೆ. ಬಿಎಂಟಿಸಿ ಅಧಿಕಾರಿಯ ಪ್ರಕಾರ, ಈ ವರ್ಷದ ಕೊನೆಯಲ್ಲಿ ಈ ಬಸ್‌ಗಳು ರಸ್ತೆಗಿಳಿಯುವ ಸಾಧ್ಯತೆಯಿದೆ.
ಮಾರ್ಚ್ ವೇಳೆಗೆ 700 ಬಸ್‌ಗಳಿಗೆ ಕೋಕ್
ಬಿಎಂಟಿಸಿ ಮಾರ್ಚ್ ವೇಳೆಗೆ ಸುಮಾರು 300 ವೋಲ್ವೋ ಬಸ್‌ಗಳು ಸೇರಿದಂತೆ ಸುಮಾರು 700 ಅವಧಿ ಮೀರಿದ ಬಸ್‌ಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಬೇಕಾಗಿದೆ. 15 ವರ್ಷಗಳ ಹಿಂದೆ 11 ಲಕ್ಷ ಕಿಲೋಮೀಟರ್ ಓಡುವ ಅಥವಾ ತಿರುಗುವ ಬಸ್ ಅನ್ನು ಬಿಎಂಟಿಸಿ ನಿಯಮಗಳ ಪ್ರಕಾರ ರದ್ದುಗೊಳಿಸಬೇಕು.
ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನ ಹೆಚ್ಚುತ್ತಿದ್ದು, ಅಗತ್ಯಗಳನ್ನು ಪೂರೈಸಲು ಬಿಎಂಟಿಸಿಗೆ 10,000 ಬಸ್‌ಗಳ ಅಗತ್ಯವಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಹಿಂದೆ ಹೇಳಿದ್ದರು.
ಡಬಲ್ ಡೆಕ್ಕರ್ ಬಸ್ಸುಗಳು
ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಜಿಸಿಸಿ) ಮಾದರಿಯಲ್ಲಿ 10 ಡಬಲ್ ಡೆಕ್ಕರ್ ಬಸ್‌ಗಳನ್ನು ಬಾಡಿಗೆಗೆ ಪಡೆಯಲು ಬಿಎಂಟಿಸಿ ಟೆಂಡರ್ ಆಹ್ವಾನಿಸಿದೆ. ಗುತ್ತಿಗೆದಾರರು ಬಸ್ ಅನ್ನು ಪೂರೈಸಬೇಕು ಮತ್ತು ನಿರ್ವಹಿಸಬೇಕು. ಬಿಎಂಟಿಸಿ ಪ್ರತಿ ಕಿಲೋಮೀಟರ್ ಆಧಾರದ ಮೇಲೆ ಪಾವತಿಸುತ್ತದೆ. ಬಿಡ್ ಪೂರ್ವ ಸಭೆ ಸೋಮವಾರ ನಡೆಯಲಿದ್ದು, ಬಿಡ್ ಸಲ್ಲಿಸಲು ಮಾರ್ಚ್ 4 ಕೊನೆಯ ದಿನವಾಗಿದೆ.
ಜನವರಿ 2023 ರಲ್ಲಿ, ಬಿಎಂಟಿಸಿ ಐದು ಡಬಲ್-ಡೆಕ್ಕರ್ ಇ-ಬಸ್‌ಗಳನ್ನು ಖರೀದಿಸಲು ಬಿಡ್‌ಗಳನ್ನು ಕರೆದಿದೆ. ಅಶೋಕ್ ಲೇಲ್ಯಾಂಡ್-ಬೆಂಬಲಿತ ಸ್ವಿಚ್ ಮೊಬಿಲಿಟಿ ಪರವಾಗಿ ಟೆಂಡರ್ ಅನ್ನು ಬಹುತೇಕ ಅಂತಿಮಗೊಳಿಸಿತು. ಆದರೆ, ರಾಜ್ಯ ಸರ್ಕಾರವು ಟೆಂಡರ್ ಅನ್ನು ರದ್ದುಗೊಳಿಸಿತು ಮತ್ತು ಬಸ್‌ಗಳನ್ನು ಬಾಡಿಗೆಗೆ ಪಡೆಯುವಂತೆ ಬಿಎಂಟಿಸಿಗೆ ತಿಳಿಸಿದೆ.












Click it and Unblock the Notifications