BMTC: ಮೂರು ಹೊಸ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್ ಪರಿಚಯಿಸಿದ ಬಿಎಂಟಿಸಿ
ಬೆಂಗಳೂರು, ಜುಲೈ 15: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ಹೊಸ ಫೀಡರ್ ಮಾರ್ಗವನ್ನು ಘೋಷಣೆ ಮಾಡಿದೆ. ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಬಿಎಂಟಿಸಿ ಈಗಾಗಲೇ ಹಲವು ಮಾರ್ಗದಲ್ಲಿ ನಮ್ಮ ಮೆಟ್ರೋ ಫೀಡರ್ ಬಸ್‌ಗಳನ್ನು ಓಡಿಸುತ್ತಿದೆ. ಈಗ ಪ್ರಯಾಣಿಕರ ಬೇಡಿಕೆಯಂತೆ ಮೂರು ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಬಸ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಎಂಎಫ್-35, ಎಂಎಫ್-43, ಎಂಎಫ್-43ಎ ಮೂರು ಹೊಸ ಮಾರ್ಗವಾಗಿದೆ. ಜುಲೈ 15ರ ಸೋಮವಾರದಿಂದಲೇ ಜಾರಿಗೆ ಬರುವಂತೆ ಈ ಮಾರ್ಗದಲ್ಲಿ ಬಸ್‌ಗಳ ಸಂಚಾರ ಆರಂಭಿಸಲಾಗಿದೆ. ಪ್ರಯಾಣಿಕರು ಈ ಬಸ್‌ಗಳ ಮೂಲಕ ನಮ್ಮ ಮೆಟ್ರೋ ನಿಲ್ದಾಣ ತಲುಪಬಹುದು.
ಹೊಸ ಮಾರ್ಗದ ವಿವರ: ಎಂಎಫ್-35 ನಾನ್ ಎಸಿ ಬಸ್‌ಗಳು ಕೆಂಗೇರಿ ಟಿಟಿಎಂಸಿ-ಗೊಟ್ಟಿಗೆರೆ ನೈಸ್ ರಸ್ತೆ ಜಂಕ್ಷನ್ ನಡುವೆ ಸಂಚಾರ ನಡೆಸಲಿವೆ. ಈ ಬಸ್ ಶ್ರೀನಿವಾಸಪುರ ಕ್ರಾಸ್, ಕರಿಯಮ್ಮನಪಾಳ್ಯ, ಕರೀಷ್ಮಾ ಹಿಲ್ಸ್, ರಘುವನಹಳ್ಳಿ ಕ್ರಾಸ್, ಅವಲಹಳ್ಳಿ ಬಿಡಿಎ ಲೇಔಟ್, ಅಂಜನಾಪುರ, ಗೊಟ್ಟಿಗೆರೆ ನೈಸ್ ರಸ್ತೆ ಜಂಕ್ಷನ್ ಮಾರ್ಗದಲ್ಲಿ ಸಂಚಾರ ನಡೆಸಲಿವೆ.
ಈ ಬಸ್ ಕೆಂಗೇರಿ ಟಿಟಿಎಂಸಿಯಿಂದ 7.05, 7.35, 8.15, 8.50, 9.35, 10.30, 11, 11.40, 12.20, 12.50, 13.30, 14.00, 14.45, 15.15, 16.15, 16.45, 17.30, 18.00, 20.00, 20.30ಕ್ಕೆ ಹೊರಡಲಿವೆ.
ಗೊಟ್ಟಿಗೆರೆ ನೈಸ್‌ರೋಡ್ ಜಂಕ್ಷನ್‌ನಿಂದ 6.05, 6.35, 8.15, 8.45, 9.30, 10.30, 12.20, 12.50, 13.35, 14.05, 15.05, 16.50, 17.25, 17.55, 18.50, 19.20ಕ್ಕೆ ಹೊರಡಲಿವೆ ಎಂದು ಪ್ರಕಟಣೆ ಹೇಳಿದೆ.
ಎಂಎಫ್-43 ಮಾರ್ಗದ ಬಸ್ ಕೋಣನಕುಂಟೆ ಕ್ರಾಸ್-ಕೋಣನಕುಂಟೆ ಕ್ರಾಸ್ ನಡುವೆ ಸಂಚಾರ ನಡೆಸಲಿದೆ. ಈ ಬಸ್ ಮಾರ್ಗದಲ್ಲಿ ಉತ್ತರಹಳ್ಳಿ, ಇಂಡೋ-ಅಮೆರಿಕನ್ ಹೈಬ್ರೀಡ್ ಫಾರ್ಮ್ ಕ್ರಾಸ್, ಕರಿಯಪ್ಪನಪಾಳ್ಯ, ರಘುವನಹಳ್ಳಿ ಕ್ರಾಸ್ ಮಾರ್ಗದಲ್ಲಿ ಸಂಚಾರ ನಡೆಸಲಿದೆ. ಈ ಬಸ್ ಕೋಣನಕುಂಟೆ ಕ್ರಾಸ್‌ನಿಂದ 7.35, 8.30, 9.25, 10.55, 11.50, 12.45, 13.40, 15.10, 16.05 ಮತ್ತು 17.10ಕ್ಕೆ ಸಂಚಾರ ಹೊರಡಲಿದೆ.
ಎಂಎಫ್-43ಎಫ್ ಬಸ್ ಕೋಣನಕುಂಟೆ ಕ್ರಾಸ್-ಕೋಣನಕುಂಟೆ ಕ್ರಾಸ್ ನಡುವೆ ಸಂಚಾರ ನಡೆಸಲಿದೆ. ಈ ಬಸ್ ರಘುವನಹಳ್ಳಿ ಕ್ರಾಸ್, ಕರಿಯಪ್ಪನಪಾಳ್ಯ, ಇಂಡೋ-ಅಮೆರಿಕನ್ ಹೈಬ್ರೀಡ್ ಫಾರ್ಮ್ ಕ್ರಾಸ್, ಉತ್ತರಹಳ್ಳಿ ನಡುವೆ ಸಂಚಾರ ನಡೆಸಲಿದೆ. ಕೋಣನಕುಂಟೆ ಕ್ರಾಸ್‌ನಿಂದ ಬಸ್ 8.05, 9, 9.55, 11.25, 12.20, 13.15, 14.10, 15.40, 16.35, 17.40ಕ್ಕೆ ಹೊರಡಲಿದೆ.
ಬಿಎಂಟಿಸಿ ನಮ್ಮ ಮೆಟ್ರೋ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಫೀಡರ್ ಬಸ್‌ಗಳನ್ನು ಓಡಿಸುತ್ತದೆ. ಈ ಬಸ್‌ಗಳು ನಗರದ ವಿವಿಧ ಪ್ರದೇಶಗಳಿಂದ ನಮ್ಮ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುತ್ತವೆ. ಮೆಟ್ರೋ ರೈಲಿನಿಂದ ಇಳಿಯುವ ಪ್ರಯಾಣಿಕರು ಬಸ್ ಮೂಲಕ ಸಂಚಾರ ನಡೆಸಲು ಅನುಕೂಲವಾಗುತ್ತದೆ.












Click it and Unblock the Notifications