BMTC: ಪ್ರಯಾಣಿಕರಿಗೆ ಗುಡ್ ನ್ಯೂಸ್: ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸೇವೆ, ವೇಳಾಪಟ್ಟಿ ವಿವರ
ಬೆಂಗಳೂರು, ಆಗಸ್ಟ್ 17: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬೆಂಗಳೂರಿನ ವಿವಿಧ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಸೇವೆ ಆರಂಭಿಸಿದೆ. ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿದೆ. ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ಅನೂಕೂಲ ಉಂಟಾಗಿದೆ. ಹೊಸ ಮಾರ್ಗದಲ್ಲಿ ವಾಯು ವಜ್ರ ಬಸ್ ಬಿಟ್ಟಿದ್ದು, ಇದು ನಗರದಿಂದ ಏರ್‌ಪೋರ್ಟ್ ಸಂಪರ್ಕಿಸುತ್ತದೆ. ಯಾವೆಲ್ಲ ಮಾರ್ಗಗಳ ಮೂಲಕ ಬಿಎಂಟಿಸಿ ಬಸ್ ಸೇವೆ ಆರಂಭವಾಗಿದೆ ಎಂಬ ಮಾಹಿತಿ ಇಲ್ಲಿದೆ.
ನಗರದ ತಟ್ಟನಹಳ್ಳಿ-ಬನಶಂಕರಿಗೆ ನೇರ ಬಿಎಂಟಿಸಿ ಸಂಪರ್ಕ ಕಲ್ಪಿಸಲಾಗಿದೆ. ಈ ಹೊಸ ಸೇವೆಯು ಅವಡದೇನಹಳ್ಳಿ, ಮರಸೂರು ಗೇಟ್, ಚಂದಾಪುರ, ಬೊಮ್ಮಸಂದ್ರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸ ರಸ್ತೆ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್ ಮತ್ತು ರಾಗಿಗುಡ್ಡ ಮೂಲಕ ಪ್ರಯಾಣಿಸಲು ಸಹಾಯವಾಗುತ್ತದೆ.
ಬೆಳಗ್ಗೆ ತಟ್ಟನಹಳ್ಳಿಯಿಂದ 09.30 ಕ್ಕೆ ಆರಂಭವಾಗಲಿದೆ. ಮರಳಿ ಬನಶಂಕರಿಯಿಂದ 16.30ಕ್ಕೆ ಸಂಚರಿಸಲಿದೆ. ಅಷ್ಟೇ ಅಲ್ಲದೇ ಅವಡದೇನಹಳ್ಳಿ, ಮರಸೂರು ಗೇಟ್, ಚಂದಾಪುರ, ಬೊಮ್ಮಸಂದ್ರ, ಹೆಬ್ಬಗೋಡಿ, ಹೊಸ ರಸ್ತೆ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ರಾಗಿ ಗುಡ್ಡ ಮಾರ್ಗವಾಗಿ ಓಡಾಡಲಿದೆ. ನಿತ್ಯ ಸಾವಿರಾರು ಪ್ರಯಾಣಿಕರಿಗೆ ಈ ಸಾರಿಗೆ ಸೇವೆ ಸಿಗುತ್ತಿದೆ.

ಬನ್ನೇರುಘಟ್ಟ ಮತ್ತು ಜಿಗಣಿಯಿಂದ ಮೊದಲ ನೇರ ವಿಮಾನ ಸಂಪರ್ಕ ಸಹ ಕಲ್ಪಿಸಲಾಗಿದೆ. ಹೊಸ ವಾಯು ವಜ್ರ (KIA-14A) ಜಿಗಣಿ ಎಪಿಸಿ ಸರ್ಕಲ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (KIA) ಸಂಪರ್ಕಿಸುತ್ತದೆ. ಈ ಬಸ್ ಬನ್ನೇರುಘಟ್ಟ, ಡೈರಿ ಸರ್ಕಲ್ ಮೂಲಕ ಸಂಪರ್ಕಿಸುವ ಬಸ್ ಆಗಿದೆ. ದಿನವೀಡಿ ನಗರದಿಂದ ಏರ್‌ಪೋರ್ಟ್‌ಗೆ ಓಡಾಡುವವರಿಗೆ ಮತ್ತು ಅಲ್ಲಿಂದ ನಗರಕ್ಕೆ ಬರುವವರಿಗೆ ಸಹಾಯವಾಗಲಿದೆ.
ಈ ವಾಯು ವಜ್ರ ಬಸ್ ಬನ್ನೇರುಘಟ್ಟ ವೃತ್ತ, ಕೋಳಿ ಫಾರಂ ಗೇಟ್, ಗೊಟ್ಟೆಗೆರೆ, ಹುಳಿಮಾವು ಗೇಟ್, ಜೆಪಿ ನಗರ ೩ನೇ ಹಂತ (ವೆಗಾ ಸಿಟಿ ಮಾಲ್), ಗೋಪಾಲನ್ ಮಾಲ್ ಮೈಕೊ ಚೆಕ್ಟೋಸ್ಟ್ ಜಯದೇವ, ಡೈರಿ ವೃತ್ತ, ಶಾಂತಿನಗರ, ರಿಚ್ಯಂಡ್ ವೃತ್ತ, ಸ್ಟೇಡಿಯಂ, ಮೇನ್ರಿ ವೃತ್ತ, ಹೆಬ್ಬಾಳ ಮಾರ್ಗವಾಗಿ ಸಾಗಲಿದೆ.
ಜಿಗಣಿ ಎಪಿಸಿ ವೃತ್ತದಿಂದ ಹೊರಡುವ ಸಮಯ: 05:00, 06:00, 07:00, 08:00, 09:00, 10:00, 16:00, 17:00, 18:00, 19:00, 20:00, 21:00 ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ
02:00, 03:00, 04:00, 05:00, 06:00, 07:00, 12:45, 14:00, 15:00, 16:00, 17:00, 18:10 ಗಂಟೆಗೆ ಹೊರುಡುತ್ತದೆ ಎಂದು ಬಿಎಂಟಿಸಿ ಪ್ರಕಟಣೆ ಮಾಹಿತಿ ನೀಡಿದೆ.












Click it and Unblock the Notifications