ಟಿಕೆಟ್ ಇಲ್ಲದೆ ಬಿಎಂಟಿಸಿ ಪ್ರಯಾಣ ಯಾವತ್ತಪ್ಪ?

ಬೆಂಗಳೂರು, ಡಿ.17: ಎಟಿಎಂ ಬಗ್ಗೆ ಕೇಳಿರಬಹುದು ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಈಗ ಇಟಿಎಂ ಜಪ ಮಾಡುತ್ತಿದೆ. 'ಟಿಕೆಟ್ ಇಲ್ಲದೆ ಪ್ರಯಾಣ, ದಂಡಕ್ಕೆ ಆಹ್ವಾನ' ಎಂಬ ಬೋರ್ಡ್ ಬದಲಿಸಲು ಬಿಎಂಟಿಸಿ ಮುಂದಾಗಿದೆ. ಟಿಕೆಟ್ ಇಲ್ಲದೆಯೂ ಬಸ್ ಗಳಲ್ಲಿ ಪ್ರಯಾಣ ಸಾಧ್ಯವಾಗಲಿದೆಯಂತೆ.

ಹತ್ತು ಹಲವು ಹೊಸ ಸೌಲಭ್ಯ, ಯೋಜನೆಗಳನ್ನು ಜಾರಿಗೆ ತಂದು ಸತತವಾಗಿ ದೇಶದ 'ಶ್ರೇಷ್ಠ ಸಾರಿಗೆ' ಎನಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಈಗ ಇನ್ನೊಂದು ಹೆಜ್ಜೆ ಮುಂದಿಟ್ಟು ಎಂಟು ತಿಂಗಳುಗಳೇ ಕಳೆದಿದೆ. ಬಿಎಂಟಿಸಿಯಲ್ಲಿ 'ಟಿಕೆಟ್ ರಹಿತ ಪ್ರಯಾಣ' ಸಾಧ್ಯ ಎಂದು ಅಂದಿನ ಸಾರಿಗೆ ಆರ್ ಅಶೋಕ ಘೋಷಿಸಿದ್ದರು. ಈಗ ಈ ಯೋಜನೆ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರನ್ನು ಪ್ರಶ್ನಿಸಿದರೆ, ಇನ್ನೂ ಆರು ತಿಂಗಳು ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ ಎನ್ನುತ್ತಾರೆ.[ಬಿಟಿಎಸ್ ರೂಟ್ ನಂ. 11 ಮ್ಯಾಜಿಕ್ ಬಾಕ್ಸ್]

ಪೇಪರ್ ಲೆಸ್ ಸರ್ಕಾರಿ ಕಚೇರಿಗಳಂತೆ ಬಿಎಂಟಿಸಿ ಕೂಡಾ ಸಂಪೂರ್ಣ ಪೇಪರ್ ಲೆಸ್ ಆಗಲಿದೆ. ಇಂಟಲಿಜೆನ್ಸ್ ಟ್ರಾನ್ಸ್ ಪೋರ್ಟ್ ವ್ಯವಸ್ಥೆ(ITS) ಜಾರಿಗೆ ಬರಲಿದ್ದು, ಕರ್ನಾಟಕ ಸಾರಿಗೆ ಸಂಸ್ಥೆಗಳು ಟಿಕೆಟ್ ರಹಿತ ಪ್ರಯಾಣ ಸಾಧ್ಯವಾಗಿಸಲಿದೆ. ಬಸ್ ಟಿಕೆಟ್ ಬದಲಿಗೆ ಕ್ರೆಡಿಟ್ ವ್ಯವಸ್ಥೆ ಜಾರಿಗೆ ಬರಲಿದೆ. ಸ್ಮಾರ್ಟ್ ಕಾರ್ಡ್ ಗಳ ಮೂಲಕ ಹಣ ಪಾವತಿಸಿ ಪ್ರಯಾಣಿಸಬಹುದು.

ದೆಹಲಿಯ DIMMTS ಹಾಗೂ ಶೋಭಾ ಅಪ್ಲೈಡ್ DSP ಸಂಸ್ಥೆಗೆ ಜಂಟಿಯಾಗಿ ಯೋಜನೆ ಸಿಕ್ಕಿದೆ. ಜತೆಗೆ ಆಕ್ಸಿಸ್ ಬ್ಯಾಂಕ್ ಕೂಡಾ ಕೈಜೋಡಿಸಿದೆ. ಸದ್ಯದಲ್ಲೇ ಅದೇಶ ಹೊರಬೀಳುವ ಸಾಧ್ಯತೆಯಿದೆ. ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಬಸ್ ಗಳಿಗೆ ಜಿಪಿಎಸ್ ನಂತರ ಬಿಎಂಟಿಸಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್(ETMs)ಗಳನ್ನು ಹೊರ ತರುತ್ತಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು. ಏನಿದು ಸ್ಮಾರ್ಟ್ ಕಾರ್ಡ್? ಬಿಎಂಟಿಸಿ ಮುಂದಿನ ಯೋಜನೆ ಏನಿದೆ? [ಬಸ್ಸಲ್ಲಿ ಓಡಾಡುವವಳ ಸ್ವಗತ]

ಏನಿದು ಸ್ಮಾರ್ಟ್ ಕಾರ್ಡ್?

ಏನಿದು ಸ್ಮಾರ್ಟ್ ಕಾರ್ಡ್?

ತಿಂಗಳ ಪಾಸ್, ಟಿಕೆಟ್ ಬದಲಿಗೆ ಎಟಿಎಂ ಕಾರ್ಡ್ ಮಾದರಿ ಸ್ಮಾರ್ಟ್ ಕಾರ್ಡ್ ಗಳನ್ನು ಬಳಸಲಾಗುತ್ತದೆ. ಸ್ಮಾರ್ಟ್ ಕಾರ್ಡ್ ಗಳನ್ನು ರೀ ಚಾರ್ಚ್ ಮಾಡಿಸಿಕೊಳ್ಳಬಹುದು. ಬಸ್ ನಲ್ಲಿ ಪ್ರಯಾಣಿಸುವಾಗ ದುಡ್ಡು ಕೊಟ್ಟು ಟಿಕೆಟ್ ಪಡೆಯುವ ಬದಲು ಕಾರ್ಡ್ ಸ್ವೈಪ್ ಮಾಡಿದರೆ ತಕ್ಷಣವೆ ಹಣ ಕಡಿತಗೊಳ್ಳುತ್ತದೆ. ಎಲ್ಲಾ ರೀತಿ ಪಾಸ್ ಗಳಿಗೂ ಇದೇ ವ್ಯವಸ್ಥೆ ಅಳವಡಿಸಲು ಚಿಂತಿಸಲಾಗಿದೆ ಎಂದು ಅಂಜುಮ್ ಹೇಳಿದ್ದಾರೆ.

ಎರಡು ರೀತಿ ಸ್ಮಾರ್ಟ್ ಕಾರ್ಡ್

ಎರಡು ರೀತಿ ಸ್ಮಾರ್ಟ್ ಕಾರ್ಡ್

ಒಂದು ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಸುವ ಸೌಲಭ್ಯ ಹೊಂದಿರುತ್ತದೆ. ಮತ್ತೊಂದು ತಿಂಗಳ ಪಾಸ್ ಬದಲಿಗೆ ತಿಂಗಳು ಪೂರ್ತಿ ಬಳಸಬಹುದಾದ ಪೋಸ್ಟ್ ಪೇಯ್ಡ್ ಕಾರ್ಡ್ ಆಗಿರುತ್ತದೆ. ಕನಿಷ್ಠ ರೀಚಾರ್ಜ್ 40 ರು . ಪ್ರತಿ ಸ್ಮಾರ್ಟ್ ಕಾರ್ಡ್ ನಲ್ಲಿ ಬಳಕೆದಾರರ ಭಾವಚಿತ್ರ ಹಾಗೂ ವಿಳಾಸ ಇರುತ್ತದೆ.

ಮುಂದಿನ ಯೋಜನೆ ಏನಿದೆ?

ಮುಂದಿನ ಯೋಜನೆ ಏನಿದೆ?

ನಮ್ಮ ಮೆಟ್ರೋ ಹಾಗೂ ಬಿಎಂಟಿಸಿಗೆ ಕಾಮನ್ ಬಸ್ ಪಾಸ್ ತರುವ ಯೋಜನೆ ಕೂಡಾ ಜಾರಿಯಲ್ಲಿದೆ. ಬಿಎಂಟಿಸಿ ಹಾಗೂ ಬಿಎಂಆರ್ ಸಿಎಲ್ ಅಧಿಕಾರಿಗಳು ಇತ್ತೀಚೆಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಿಎಂಟಿಸಿಯಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಕ್ಲಿಕ್ ಆದರೆ, ಕೆಎಸ್ಸಾರ್ಟಿಸಿಯಲ್ಲೂ ಇದೇ ವ್ಯವಸ್ಥೆ ಬರಲಿದೆ. ಗೂಗಲ್ ಮ್ಯಾಪ್ ಬಳಸಿ ಹೊರಡುವ ಸ್ಥಳ ಹಾಗೂ ತಲುಪುವ ಸ್ಥಳದ ಮಾರ್ಗ ಸೂಚಿಯನ್ನು ಪ್ರಯಾಣಿಕರಿಗೆ ಸೂಕ್ತವಾಗಿ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಂಜುಮ್ ಹೇಳಿದರು.

ಪಾರದರ್ಶಕ ವ್ಯವಸ್ಥೆ

ಪಾರದರ್ಶಕ ವ್ಯವಸ್ಥೆ

ಕಂಡೆಕ್ಟರ್ ಗಳು ಚಿಲ್ಲರೆ ನುಂಗುತ್ತಾರೆ ಎಂಬ ಆಪಾದನೆಯನ್ನು ಈ ಸ್ಮಾರ್ಟ್ ಕಾರ್ಡ್ ಮುಕ್ತಗೊಳಿಸುತ್ತದೆ. 2006ರಲ್ಲೇ ಈ ವ್ಯವಸ್ಥೆ ಬಗ್ಗೆ ಪ್ರಸ್ತಾವನೆ ಬಂದಿತ್ತು. ಆದರೆ, ಜಾರಿಗೊಳಿಸಲು ಸೂಕ್ತ ಸೌಲಭ್ಯಗಳ ಕೊರತೆ ಎದುರಿಸಬೇಕಾಯಿತು.

ಬಿಎಂಟಿಸಿಯ 2004ರ ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಲ್ಯೂಷನ್ ನ ಭಾಗವಾಗಿ ಎಲೆಕ್ಟ್ರಾನಿಕ್ ಟಿಕೆಟ್ ಮೆಷಿನ್ ಗಳು ಕಾರ್ಯ ನಿರ್ವಹಣೆ ವಿಳಂಬವಾಗಿರುವುದು ವ್ಯವಸ್ಥೆಯ ದೋಷಕ್ಕೆ ಕನ್ನಡಿಯಾಗಿದೆ ಎಂದು ಟ್ರಾಫಿಕ್ ತಜ್ಞ ಎಂ.ಎನ್ ನರಹರಿ ಬೇಸರ ವ್ಯಕ್ತಪಡಿಸಿದ್ದಾರೆ.

ಡಬ್ಬಲ್ ಡೆಕ್ಕರ್ ಯೋಜನೆ?

ಡಬ್ಬಲ್ ಡೆಕ್ಕರ್ ಯೋಜನೆ?

ದಶಕದ ಹಿಂದೆ ಬೆಂಗಳೂರಿನ ವಿವಿಧೆಡೆ ಸಂಚರಿಸುತ್ತಿದ್ದ ಡಬ್ಬಲ್ ಡೆಕ್ಕರ್ ಬಸ್ ಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಆಮೇಲೆ ಹೊಸ ಬಸ್ ಗಳು ಬಂದ ಮೇಲೆ ಡಬ್ಬಲ್ ಡೆಕ್ಕರ್ ಮೂಲೆಗುಂಪಾಗಿಬಿಟ್ಟಿತು.

ಡಬ್ಬಲ್ ಡೆಕ್ಕರ್ ಬಸ್ ಸಂಚಾರಕ್ಕೆ ಯಾವ ಯಾವ ಪ್ರದೇಶ ಯೋಗ್ಯವಾಗಿದೆ? ಎಲ್ಲಿ ರಸ್ತೆ ಗುಂಡಿಗಳಿಲ್ಲ. ಎಲ್ಲಿ ವಿದ್ಯುತ್ ಕೇಬಲ್ ಗಳು ಜೋತು ಬಿದ್ದಿಲ್ಲ. ಮರಗಳು ಅಡ್ಡ ಬರುವುದಿಲ್ಲ ಎಂದು ಸಮೀಕ್ಷೆ ನಡೆಸಿದ ಬಿಎಂಟಿಸಿ ಎರಡು ವರ್ಷಗಳ ನಂತರ ಯೋಜನೆ ಕೈ ಬಿಟ್ಟಿರುವ ಸುದ್ದಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+