BMTC ಮೊದಲ AC ಎಲೆಕ್ಟ್ರಿಕ್ ಬಸ್‌ಗಳು ಸಂಚಾರ ಆರಂಭ, ಎಲ್ಲೆಲ್ಲಿ? ಮಾರ್ಗಗಳು
ಬೆಂಗಳೂರು, ಜನವರಿ 13: ಬೆಂಗಳೂರು ನಿವಾಸಿಗಳ ಜೀವನಾಡಿ ಆಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಗರದಲ್ಲಿ ಮೊದಲ ಬಾರಿಗೆ 'ಎಲೆಕ್ಟ್ರಿಕ್ ಎಸಿ ಬಸ್'ಗಳ ಸಂಚಾರ ಸೇವೆ ಆರಂಭಿಸಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಈ ಬಸ್‌ಗಳನ್ನು ಪರಿಚಯಿಸಿದೆ. ಕೆಲವು ಬಸ್‌ಗಳನ್ನು ಬದಲಾಯಿಸುವ ಗುರಿಯೊಂದಿಗೆ ಈ ವಿದ್ಯುತ್ ಬಸ್ ಆರಂಭಿಸಿದೆ.
OHM ಎಂಬುದು ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆಯಾಗಿದೆ. ಇದೇ ಸಂಸ್ಥೆಯು ಬಿಎಂಟಿಸಿಗೆ ಹವಾನಿಯಂತ್ರಿತ (ಎಸಿ) ವಿದ್ಯುತ್ ಬಸ್ ಪೂರೈಕೆ ಮಾಡಿದೆ. 05 ಬಸ್‌ಗಳನ್ನು ಪೂರೈಕೆ ಮಾಡಿದ್ದು, ಮೆಜೆಸ್ಟಿಕ್ ಮತ್ತು ಕಾಡುಗೋಡಿ (ವೈಟ್‌ಫೀಲ್ಡ್) ಮಧ್ಯದ ಮಾರ್ಗದಲ್ಲಿ ನಿಯೋಜನೆ ಮಾಡಲಾಗಿದೆ. ಕೆಲವು ಮಹತ್ವದ ಗುರಿಗಳೊಂದಿಗೆ ವಿದ್ಯುತ್ ಬಸ್ ಆರಂಭಿಸಲಾಗಿದೆ. ಇದು ಮೊದಲ ಬಾರಿ ಆಗಿದ್ದು, ಇದು ಪ್ರಾಯೋಗಿಕವಾಗಿ ಆರಂಭಿಸಲಾದ ಬಸ್ ಉಪಕ್ರಮವಾಗಿದೆ.

ವಿದ್ಯುತ್ ಬಸ್‌ಗಳ ಪೂರೈಕೆಯಿಂದ ನಗರದ ವಜ್ರ ಮತ್ತು ವಾಯು ವಜ್ರ ವಿಮಾನ ನಿಲ್ದಾಣ ಮಾರ್ಗಗಳಲ್ಲಿ ಓಡಾಡುತ್ತಿರುವ ಹಳೆಯ ವೋಲ್ವೋ ಬಸ್‌ಗಳನ್ನು ಬದಲಾಗಿ ಪರಿಸರ ಸ್ನೇಹಿ ಎಸಿ ವಿದ್ಯುತ್ ಬಸ್ ಓಡಿಸಲು ಪ್ಲಾನ್ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಎಸಿ ವಿದ್ಯುತ್ ಬಸ್‌ಗಳನ್ನು ರಸ್ತೆಗೆ ಇಳಿಸಿದೆ.
ಬಿಎಂಟಿಸಿ ವಿದ್ಯುತ್ ಪರಿವರ್ತನಾ ಉಪಕ್ರಮ
ಬಿಎಂಟಿಸಿ ಜೊತೆಗೆ OHM ಗ್ಲೋಬಲ್ ಮೊಬಿಲಿಟಿಯು ಸಕಾಲಕ್ಕೆ 320 ಹವಾನಿಯಂತ್ರಿತ ವಿದ್ಯುತ್ ಬಸ್‌ಗಳನ್ನು ಪೂರೈಕೆ ಮಾಡಲಾಗುವುದು ಎಂದು ಒಪ್ಪಂದ ಮಾಡಿಕೊಂಡಿದೆ. ಕಂಪನಿ ನೀಡುವ ಎಲ್ಲ ಬಸ್‌ಗಳು ಜಿಸಿಸಿ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಪ್ರತಿ ಕಿಲೋ ಮೀಟರ್‌ಗೆ ರೂ.65.8 ವೆಚ್ಚವಾಗಲಿದೆ. 2025ರ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಬಸ್‌ಗಳು ರಸ್ತೆಗೆ ಇಳಿಯುವ ಸಾಧ್ಯತೆ ಇದೆ.

13ಮೀಟರ್ ಉದ್ದದ ಬಸ್, ಓಡಾಟದ ವಿವರ
ಈ ಎಸಿ ವಿದ್ಯುತ್ ಬಸ್‌ಗಳು ಒಟ್ಟು 13ಮೀಟರ್ ಉದ್ದವಿದೆ. ವಿಶೇಷ ಚೇತನರಿಗೆ ಸರಳವಾಗಿ ಬಸ್ ಏರುವಂತೆ ಇಳಿಜಾರು ರೂಪದಲ್ಲಿ ವ್ಯವಸ್ಥೆ ಇದೆ. ಒಪ್ಪಂದದ ಪ್ರಕಾರ ನಿತ್ಯ ಪ್ರತಿಯೊಂದು ಬಸ್ 250 ಕಿಲೋಮೀಟರ್ ಸಂಚರಿಸಲಿವೆ. ಒಂದು ವರ್ಷಕ್ಕೆ ಸುಮಾರು 87000ಕ್ಕೂ ಹೆಚ್ಚು ಕಿಲೋ ಮೀಟರ್ ಕ್ರಮಿಸಲಿದೆ. ಸದ್ಯ ಐದು ಬಸ್‌ಗಳನ್ನು ಮಾತ್ರವೇ ರಸ್ತೆಗೆ ಇಳಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಎಂಟಿಸಿ ನಾಲ್ಕು ಡಿಪೋಗಳ ವ್ಯಾಪ್ತಿಯಲ್ಲಿ ಈ ಹೊಸ ಬಸ್‌ಗಳು ಓಡಾಡಲಿವೆ. ಸುಭಾಷ್‌ನಗರ ಡಿಪೋ, ಕತ್ರಿಗುಪ್ಪೆ ಡಿಪೋ ವೈಟ್‌ಫೀಲ್ಡ್ ಹಾಗೂ ಎಚ್‌ಎಸ್‌ಆರ್ ಲೇಔಟ್ ಡಿಪೋ ವ್ಯಾಪ್ತಿಯಲ್ಲಿ ಓಡಾಡಲಿವೆ. ಇವು ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿವೆ ಎಂದು ನಿಗಮ ವಿಶ್ವಾಸ ವ್ಯಕ್ತಪಡಿಸಿದೆ.
ಪ್ರಯಾಣಿಕರಿಗೆ ಇಷ್ಟವಾದ ಎಸಿ ಇ-ಬಸ್
ಜನದಟ್ಟಣೆ ಹೆಚ್ಚಿರುವ ಮೆಜೆಸ್ಟಿಕ್ ನಿಂದ ವೈಟ್‌ಫೀಲ್ಡ್ವರೆಗೆ ಸಂಚರಿಸುವ ಪ್ರಯಾಣಿಕರಿಗೆ ಈ ಹೊಸ ಪ್ಲೀಟ್ ಬಸ್‌ಗಳು ಹೊಸ ಅನುಭವ ನೀಡಲಿಎ. ವ್ಯವಸ್ಥಿತ ಹೆಡ್‌ರೆಸ್ಟ್‌ಗಳನ್ನು ಹೊಂದಿರುವ ಆಸನಗಳ ವ್ಯವ್ಥೆ, ವಿನೂತನ ಸೌಕರ್ಯ ಮತ್ತು ವಿನ್ಯಾಸ ಇದ್ದು, ಪ್ರಯಾಣಿಕರು ಈ ಬಸ್‌ಗಳನ್ನು ಇಷ್ಟಪಟ್ಟಿದ್ದಾರೆ.
ಆಸನಗಳು ಗುಣಮಟ್ಟದ್ದಾಗಿದ್ದು, ಉತ್ತಮ ಅನುಭವ ನೀಡುತ್ತಿವೆ. ಸಾಮಾನ್ಯ ಬಸ್ ಪ್ರಯಾಣಕ್ಕಿಂತಲೂ ಇದು ಉತ್ತಮ ಎನಿಸುತ್ತಿದೆ ಎಂದು ವೈಟ್‌ಫೀಲ್ಡ್ ನಿವಾಸಿಯೊಬ್ಬರು ತಿಳಿಸಿದ್ದಾರೆ. ವೋಲ್ವೋ ಬಸ್‌ಗಳಿಗೆ ಈ ಬಸ್‌ಗಳನ್ನು ಕೆಲವು ಪ್ರಯಾಣಿಕರು ಹೋಲಿಕೆ ಮಾಡುತ್ತಿದ್ದಾರೆ.












Click it and Unblock the Notifications