ವಿದ್ಯಾರ್ಥಿಗಳ ಹಳೆ ಬಸ್‌ಪಾಸ್ ಅವಧಿ ಸೆ.30ರವರೆಗೆ ವಿಸ್ತರಿಸಿದ ಬಿಎಂಟಿಸಿ
Recommended Video

ಬೆಂಗಳೂರು, ಸೆಪ್ಟೆಂಬರ್ 1: ಬಿಎಂಟಿಸಿಯು ಹಳೆ ವಿದ್ಯಾರ್ಥಿಪಾಸ್ ಅವಧಿಯನ್ನು ವಿಸ್ತರಿಸಿದೆ. ಪಿಯು, ಪದವಿ, ಮೆಡಿಕಲ್, ಐಟಿಐ, ಡಿಪ್ಲೊಮಾ, ಸ್ನಾತಕೋತ್ತರ ಸೇರಿ ಇತರೆ ವಿದ್ಯಾರ್ಥಿಗಳು ಸೆಪ್ಟೆಂಬರ್ 30ರವರೆಗೂ ಕಾಲೇಜಿನ ಗುರುತಿನ ಚೀಟಿ ಮತ್ತು ಶುಲ್ಕ ಪಾವತಿಸಿ ರಸೀದಿ ಜತೆಗೆ ಹಿಂದಿನ ವರ್ಷದ ಬಸ್‌ಪಾಸ್ ತೋರಿಸಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ.
ಕಾಗದ ಮಾದರಿ ಬದಲಾಗಿ ಸ್ಮಾರ್ಟ್ ಕಾರ್ಡ್ ರೂಪದ ಪಾಸ್ ನೀಡಲು ನಿಗಮ ನಿರ್ಧರಿಸಿತ್ತು ವಿದ್ಯಾರ್ಥಿ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು ಆ.31 ಕೊನೆಯ ದಿನಾಂಕವಾಗಿತ್ತು.
ಅರ್ಜಿ ಸಲ್ಲಿಸಿರುವವರು ಸ್ವೀಕೃತಿ ಪತ್ರ ಮತ್ತು ಕಾಲೇಜಿನ ಗುರುತಿನಚೀಟಿಯೊಂದಿಗೆ ಸೆಪ್ಟೆಂಬರ್ ಒಂದರಿಂದ ಪಾಸ್ ತಲುಪುವವರೆಗೂ ಬಿಎಂಟಿಸಿಯಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ಪಾಸ್ ಗಳನ್ನು ತಲುಪಿಸುವುದಾಗಿ ನಿಗಮ ತಿಳಿಸಿತ್ತು ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಈ ಅವಕಾಶ ಮುಂದುವರೆಸುವಂತೆ ಕೋರಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳು ಸೆಪ್ಟೆಂಬರ್ 1ರಿಂದ ಪಾಸ್ ಗಾಗಿ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪತ್ರ ಮತ್ತು ಶಾಲಾ ಕಾಲೇಜು ಶುಲ್ಕ ಪಾವತಿಸಿದ ರಸೀದಿ ಮತ್ತು ಗುರುತಿನ ಚೀಟಿಯೊಂದಿಗೆ ಪಾಸ್ ತಲುಪುವವರೆಗೂ ವಾಸಸ್ಥಳದಿಂದ ಶಾಲೆ, ಕಾಲೇಜುಗಳಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.












Click it and Unblock the Notifications