BMTC E-Bus: ಇ-ಬಸ್‌ಗಳ ಸಂಖ್ಯೆ ಏರಿಕೆಗೆ ಬಿಎಂಟಿಸಿ ಸಜ್ಜು: ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು, ನವೆಂಬರ್ 25: ಬೆಂಗಳೂರನ್ನು ವಾಯು ಮಾಲಿನ್ಯ ಮುಕ್ತ ಮಾಡುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಇ-ಬಸ್‌ಗಳನ್ನು ರಸ್ತೆಗಳಿಸಿದೆ. ಸದ್ಯ ಬಿಎಂಟಿಸಿ ಸಂಸ್ಥೆಯ 390 ವಿದ್ಯುತ್‌ಚಾಲಿತ ಬಸ್‌ಗಳನ್ನು ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನಷ್ಟು ಇ-ಬಸ್‌ಗಳನ್ನು ಬಸ್‌ಗಳನ್ನು ರಸ್ತೆಗಳಿಸಲು ಸಂಸ್ಥೆ ಮುಂದಾಗಿದೆ.
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಮತ್ತು ಕೇಂದ್ರ ಸರಕಾರದ ಫೇಮ್-2 ಯೋಜನೆಯಡಿ ಸಹಾಯಧನ ಪಡೆದು ಬಿಎಂಟಿಸಿ 390 ಎಲೆಕ್ಟ್ರಿಕ್ ಬಸ್‌ಗಳನ್ನು ಪಡೆದು ಓಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇ-ಬಸ್‌ಗಳ ಸಂಖ್ಯೆಯನ್ನು 1,751ಕ್ಕೆ ಏರಿಸಲು ಬಿಎಂಟಿಸಿ ಸಿದ್ಥತೆ ನಡೆಸುತ್ತಿದೆ. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಅದೇ ಮಾದರಿಯಲ್ಲಿ 921 ಹೆಚ್ಚುವರಿ ಇ-ಬಸ್‌ಗಳು ರಸ್ತೆಗಳಿಯುವ ಸಾಧ್ಯತೆ ಇದೆ.

ಇನ್ನು ಬಿಎಂಟಿಸಿ ಸಂಸ್ಥೆಯು 320 ಲೋ-ಪ್ಲೋರ್ ಎಸಿ ಬಸ್‌ಗಳನ್ನು ಹಾಗೂ ನಮ್ಮ ಮೆಟ್ರೋ ನಿಲ್ದಾಣಕ್ಕೆ ವೇಗವಾಗಿ ಸೇವೆ ನೀಡುವ 120 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಮುಂದಿನ ಯೋಜನೆಯಲ್ಲಿ ಡಬ್ಬಲ್-ಡೆಕ್ಕರ್ ಬಸ್‌ಗಳು ಕೂಡ ಸೇರಲಿದೆ. 1,751 ಇ-ಬಸ್‌ಗಳು ಯೋಜನೆಯಂತೆ ರಸ್ತೆಗಳಿದರೆ, ಈಗಿನ ಡಿಸೇಲ್ ಬಸ್ ಹಾಗೂ ಇ-ಬಸ್ ಸೇರಿ ಒಟ್ಟು ಬಿಎಂಟಿಸಿ ಸಂಸ್ಥೆಯ ಒಟ್ಟು ವಾಹನಗಳ ಸಂಖ್ಯೆ 7,500 ಆಗಲಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಯುವಜ್ರ, ಹವಾನಿಯಂತ್ರಿತ ವೋಲ್ವೊ ಸೇರಿದಂತೆ ಒಟ್ಟು 800ಕ್ಕೂ ಅಧಿಕ ಬಸ್‌ಗಳು ಸದ್ಯ ಬೆಂಗಳೂರು ನಗರದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಹೀಗಾಗಿ ನಗರದಲ್ಲಿ ವಾಹನಗಳಿಂದಾಗುವ ವಾಯು ಮಾಲಿನ್ಯ ನಿಯಂತ್ರಿಸಲು ಬಿಎಂಟಿಸಿ ಇ-ಬಸ್ ಕಾರ್ಯಾಚರಣೆ ಆರಂಭಿಸಿತ್ತು. ಡೀಸೆಲ್ ಚಾಲಿತ ಈ ಬಸ್‌ಗಳನ್ನೂ ಹಂತ ಹಂತವಾಗಿ ಬದಲಾಯಿಸಿ ನಗರದಲ್ಲಿ ಬಹುತೇಕವಾಗಿ ಇ-ಬಸ್ ಓಡಾಟಕ್ಕೆ ಬಿಎಂಟಿಸಿ ಮುಂದಾಗುತ್ತಿದೆ.
ಈ ಇ-ಬಸ್‌ಗಳು ಪರಿಸರಕ್ಕೆ ವರದಾನವಾಗಿ ನಗರದ ವಾಯು ಮಾಲಿನ್ಯ ಕಡಿಮೆಯಾಗುತ್ತಿದೆ ಆದರೂ ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಬಿಎಂಟಿಸಿಗೆ ನಿರೀಕ್ಷಿತ ಆದಾಯ ತಾರದೆ ನಷ್ಟವಾಗುತ್ತಿದೆ. ಆದರೆ ಡೀಸೆಲ್ ಬಸ್‌ಗಳಿಗೆ ಹೋಲಿಸಿದರೆ ಇ-ಬಸ್‌ಗಳಿಂದ ನಷ್ಟದ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗಿದೆ.












Click it and Unblock the Notifications