ಪ್ರತಿಭಟನೆ : ಶಾಂತಿನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ
Recommended Video

Bengaluru : BMTC Employees Strike In Shantinagar BMTC Depot No 2 | Oneindia Kannada
ಬೆಂಗಳೂರು, ಸೆಪ್ಟೆಂಬರ್ 19 : ಶಾಂತಿನಗರ ಬಿಎಂಟಿಸಿ ಬಸ್ ಡಿಪೋದಲ್ಲಿ ಚಾಲಕರು, ನಿರ್ವಾಹಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ದರಿಂದ, ಡಿಪೋ 2 ಮತ್ತು 3ರಿಂದ ಯಾವುದೇ ಬಸ್ಸುಗಳು ಸಂಚಾರ ನಡೆಸುತ್ತಿಲ್ಲ.
ಡಿಪೋ ಇನ್ ಚಾರ್ಜ್ ಶಿವಪ್ರಕಾಶ್ ಕಿರುಕಳ ಖಂಡಿಸಿ ಚಾಲಕರು, ನಿರ್ವಾಹಕರು ಮಂಗಳವಾರ ಬೆಳಗ್ಗೆಯಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಸೋಮವಾರ ರಾತ್ರಿ ಡಿಪೋದ ಚಾಲಕ ಮಧು ಶಿವಪ್ರಕಾಶ್ ಕಿರುಕುಳ ಖಂಡಿಸಿ ಜಿರಳೆ ಔಷಧಿ ಕುಡಿದ್ದರು.

ಡಿಪೋದಲ್ಲಿಯೇ ಔಷಧಿ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಮಧುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಬಳಿಕ ಮಧು ಚೇತರಿಸಿಕೊಳ್ಳುತ್ತಿದ್ದಾರೆ.












Click it and Unblock the Notifications