ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ 7 ಲಕ್ಷ ಕುಸಿತ; ಪ್ರತಿದಿನವೂ ನಷ್ಟ!

ಬೆಂಗಳೂರು, ಮಾರ್ಚ್ 20 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೆಂಗಳೂರು ನಗರದ ಜನರ ಜೀವನಾಡಿ. ಕೊರನಾ ಭೀತಿಯಿಂದ ನಗರದಲ್ಲಿ ಜನರ ಸಂಚಾರ ಕಡಿಮೆಯಾಗಿದ್ದು, ಬಿಎಂಟಿಸಿಯ ಪ್ರಯಾಣಿಕರ ಸಂಖ್ಯೆ ಸುಮಾರು 7 ಲಕ್ಷದಷ್ಟು ಕಡಿಮೆಯಾಗಿದೆ.

ಕರ್ನಾಟಕ ಸರ್ಕಾರದ ಆದೇಶದಂತೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪ್ರತಿನಿತ್ಯ ಬಸ್‌ನಲ್ಲಿ ಸಂಚಾರ ನಡೆಸುತ್ತಿದ್ದ 2 ರಿಂದ 3 ಲಕ್ಷ ವಿದ್ಯಾರ್ಥಿಗಳಿಲ್ಲ. ಹಲವು ಕಂಪನಿಗಳು ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿವೆ.

ಇದರಿಂದಾಗಿ ಬಿಎಂಟಿಸಿಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಪ್ರತಿ ದಿನದ ಟಿಕೆಟ್‌ ಸಂಗ್ರಹದಿಂದ ಬರುತ್ತಿದ್ದ ಸುಮಾರು 1 ಕೋಟಿ ರೂ. ಆದಾಯಕ್ಕೆ ಕತ್ತರಿ ಬಿದ್ದಿದೆ. ಶೇ 10ರಷ್ಟು ಬಸ್‌ಗಳ ಸಂಚಾರವನ್ನು ಬಿಎಂಟಿಸಿ ಸ್ಥಗಿತಗೊಳಿಸಿದೆ.

ಕಳೆದ ಒಂದು ವರ್ಷದ ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ ಬಿಎಂಟಿಸಿಯಲ್ಲಿ ಪ್ರತಿದಿನ 35 ಲಕ್ಷ ಜನರು ಸಂಚಾರ ಮಾಡುತ್ತಿದ್ದರು. ಈಗ ಕೊರೊನಾ ಭೀತಿಯಿಂದ ಸಾರ್ವಜನಿಕ ಸಾರಿಗೆ ಬಳಸುವವರ ಪ್ರಮಾಣ ಕಡಿಮೆಯಾಗುತ್ತಿದೆ.

ಪ್ರತಿದಿನದ ಆದಾಯ ಕುಸಿತ

ಪ್ರತಿದಿನದ ಆದಾಯ ಕುಸಿತ

ಕಳೆದ ಶನಿವಾರ ಬಿಎಂಟಿಸಿಯ ಆದಾಯ ಶೇ 13ರಷ್ಟು ಕುಸಿದಿದೆ. ಇದರ ಅಂದಾಜು ಮೌಲ್ಯ ಸುಮಾರು 60 ಲಕ್ಷ. ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಎಸಿ ಬಸ್‌ಗಳ ಆದಾಯ 15 ಲಕ್ಷದಷ್ಟು ಕುಸಿದಿದೆ. ಸಾಮಾನ್ಯ ಬಸ್‌ಗಳ ಆದಾಯ 45 ಲಕ್ಷ ಕುಸಿದಿದೆ.

200 ಬಸ್ ರಸ್ತೆಗೆ ಇಳಿದಿಲ್ಲ

200 ಬಸ್ ರಸ್ತೆಗೆ ಇಳಿದಿಲ್ಲ

ಬಿಎಂಟಿಸಿ ಶೇ 10ರಷ್ಟು ಅಂದರೆ 200 ಬಸ್‌ಗಳ ಸಂಚಾರವನ್ನು ಕಡಿತಮಾಡಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ವಾಯು ವಜ್ರ ಬಸ್‌ಗಳ ಆದಾಯ ಕುಸಿತಕಂಡಿದೆ. ಹಲವು ನೌಕರರಿಗೆ ಸುಧೀರ್ಘ ರಜೆಯನ್ನು ಸಂಸ್ಥೆ ನೀಡಿದೆ. ಪ್ರಯಾಣಿಕರ ಕೊರತೆ ಇರುವ ಮಾರ್ಗದಲ್ಲಿನ ಟ್ರಿಪ್‌ಗಳನ್ನು ಕಡಿಮೆ ಮಾಡಲಾಗಿದೆ.

125 ಕಿ. ಮೀ. ಸಂಚಾರ

125 ಕಿ. ಮೀ. ಸಂಚಾರ

8 ಗಂಟೆಯ ಅವಧಿಯಲ್ಲಿ ಒಂದು ಬಿಎಂಟಿಸಿಯ ಬಸ್ 6 ಟ್ರಿಪ್‌ಗಳನ್ನು ಮಾಡುತ್ತದೆ. ಅಂದರೆ ಸುಮಾರು 125 ಕಿ. ಮೀ. ಸಂಚಾರ ನಡೆಸುತ್ತದೆ. ಪ್ರತಿದಿನದ ಕಲೆಕ್ಷನ್ 3000 ದಿಂದ 1 ಸಾವಿರ ರೂ.ಗೆ ಕುಸಿದಿದೆ. 500 ರೂ. ಸಂಗ್ರಹವಾಗಿರುವ ಉದಾಹರಣೆಯೂ ಇದೆ.

ನಷ್ಟದಲ್ಲಿಯೇ ಸಾಗುತ್ತಿದೆ

ನಷ್ಟದಲ್ಲಿಯೇ ಸಾಗುತ್ತಿದೆ

ಮೊದಲೇ ಬಿಎಂಟಿಸಿ ನಷ್ಟದಲ್ಲಿತ್ತು. ಕೊರೊನಾ ಹೊಡೆತದಿಂದ ಮತ್ತಷ್ಟು ನಷ್ಟ ಉಂಟಾಗುತ್ತಿದೆ. ಸಂಸ್ಥೆಯ ಸಹಾಯಕ್ಕೆ ಸರ್ಕಾರ ಬರಲಿದೆಯೇ ಕಾದು ನೋಡಬೇಕು. ಕೆಲವು ದಿನಗಳ ಹಿಂದೆ ಸರ್ಕಾರ ಸರ್ಕಾರಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿತ್ತು. ಆದರೆ, ಬಿಎಂಟಿಸಿ ದರಗಳನ್ನು ಹೆಚ್ಚಳ ಮಾಡಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+