ಬಿಎಂಟಿಸಿ ಬಸ್ ಬಾಡಿಗೆಗೆ ಲಭ್ಯ: ಯಾವ ಬಸ್‌ಗೆ ಎಷ್ಟು ದರ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು, ಜನವರಿ 08: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್​ಗಳು ಕೆಎಸ್‌ಆರ್‌ಟಿಸಿ ಬಸ್‌ಗಳಂತೆ ಇನ್ನು ಮುಂದೆ ಶಾಲಾ ಪ್ರವಾಸ, ಪ್ರವಾಸ ಹಾಗೂ ಮದುವೆ ಸಮಾರಂಭ ಸೇರಿದಂತೆ ಇತ್ಯಾದಿಗಳ ಬಾಡಿಗೆಗೂ ದೊರೆಯಲಿದೆ.

ಸಾಂದರ್ಭಿಕ ಒಪ್ಪಂದದ ಆಧಾರದ ಮೇಲೆ ಸಾರ್ವಜನಿಕರಿಗೆ ಸಹಾಯ ಆಗುವಂತೆ ವಿವಿಧ ಮಾದರಿಯ ಬಸ್​ಗಳ ವಿವಿಧ ರೀತಿಯ ಬಾಡಿಗೆ ನಿಗದಿಪಡಿಸಿದ ಬಿಎಂಟಿಸಿ ಸಂಸ್ಥೆ ದರ ವಿವರವನ್ನು ಬಿಡುಗಡೆ ಮಾಡಿದ್ದು, ವಿವಾಹ ಸಮಾರಂಭ, ಪ್ರವಾಸ ಇತ್ಯಾದಿಗಳಿಗೆ ಬಸ್ ಒದಗಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಂದಾಗಿದೆ.

BMTC Bus Available For Rent And Here Is The Price List

ಬಾಡಿಗೆಗೆ ಲಭ್ಯವಾಗಿರುವ ಬಸ್‌ಗಳು ಹಾಗೂ ದರ ವಿವರ

ಪುಷ್ಪಕ್ ಬಸ್

47 ಆಸನಗಳಿರುವ ಬಿಎಂಟಿಸಿ ಪುಷ್ಪಕ್ ಬಸ್ 8 ಗಂಟೆ ಅವಧಿಗೆ ಕನಿಷ್ಟ 150 ಕಿ.ಮೀವರೆಗೆ ಸಂಚರಿಸಲಿದೆ. ಪ್ರತಿ ಕಿ.ಮೀಗೆ 55 ರೂಪಾಯಿಯಂತೆ 8 ಗಂಟೆಯ ಬಾಡಿಗೆ ದರ 8,250 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು 12 ಗಂಟೆ ಅವಧಿಗೆ ಬಿಎಂಟಿಸಿ ಪುಷ್ಪಕ್ ಬಸ್ ಕನಿಷ್ಠ 200 ಕಿಲೋ ಮೀಟರ್‌ ಸಂಚರಿಸಲಿದ್ದು, ಪ್ರತಿ ಕಿಲೋ ಮೀಟರ್‌ಗೆ 50 ರೂಪಾಯಿಯಂತೆ 10,000 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ

24 ಗಂಟೆ ಅವಧಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಚರಣಾ ವ್ಯಾಪ್ತಿಯಲ್ಲಿ ಬಾಡಿಗೆಗೆ ಲಭ್ಯವಿದ್ದು, ಕನಿಷ್ಟ 250 ಕಿ.ಮೀ ಸಂಚರಿಸಲಿದೆ. ಪ್ರತಿ ಕಿ.ಮೀ ದರ 45 ರೂಪಾಯಿಯಂತೆ 11,250 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ. ಇನ್ನು 24 ಗಂಟೆ ಅವಧಿಗೆ ಹೊರ ನಗರಗಳಿಗೆ ಕನಿಷ್ಠ 300 ಕಿ.ಮೀ ವರೆಗೆ ಪ್ರತಿ ಕಿ.ಮೀ ದರ 45 ರೂಪಾಯಿಯಂತೆ 13,500 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ.

ಬಿ.ಎಸ್- 6 ಬಸ್

41 ಆಸನಗಳಿರುವ ಬಿಎಂಟಿಸಿ ಬಿ.ಎಸ್- 6 ಬಸ್‌ 8 ಗಂಟೆ ಅವಧಿಗೆ ಕನಿಷ್ಟ 150 ಕಿಲೋ ಮೀಟರ್‌ ಸಂಚರಿಸಲಿದೆ. ಪ್ರತಿ ಕಿ.ಮೀಗೆ 60 ರೂಪಾಯಿಯಂತೆ 9,000 ರೂಪಾಯಿ ನಿಗದಿ ಮಾಡಲಾಗಿದೆ. 12 ಗಂಟೆ ಅವಧಿಗೆ ಕನಿಷ್ಠ 200 ಕಿ.ಮೀ ಸಂಚರಿಸಲಿದ್ದು, ಪ್ರತಿ ಕಿ.ಮೀ ದ 55 ರೂಪಾಯಿಯಂತೆ 11,000 ರೂಪಾಯಿ ನಿಗದಿ ಮಾಡಲಾಗಿದೆ. 24 ಗಂಟೆ ಅವಧಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಚರಣಾ ವ್ಯಾಪ್ತಿ ಕನಿಷ್ಟ 250 ಕಿ.ಮೀನಲ್ಲಿ ಪ್ರತಿ ಕಿ.ಮೀ ದರ 50 ರೂಪಾಯಿಯಂತೆ 12,500 ನಿಗದಿ ಮಾಡಲಾಗಿದೆ. 24 ಗಂಟೆ ಅವಧಿಗೆ ನಗರದ ಹೊರಗೆ ಕನಿಷ್ಠ 300 ಕಿ.ಮೀನಲ್ಲಿ ಪ್ರತಿ ಕಿ.ಮೀ ದರ 50 ರೂಪಾಯಿಯಂತೆ 15,000 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ.

ಎಲೆಕ್ಟ್ರಿಕ್ ಬಸ್‌ಗಳು

40 ಆಸನಗಳಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳು 25 ಗಂಟೆ ಅವಧಿಗೆ 150 ಕಿ.ಮೀವರೆಗೆ 15,000 ರೂಪಾಯಿ ಬಾಡಿಗೆ ದರ ನಿಗದಿ ಮಾಡಲಾಗಿದೆ. 33 ಆಸನಗಳಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳು 120 ಕಿ.ಮೀವರೆಗೆ 13,000 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು 35 ರಿಂದ 41 ಹವಾನಿಯಂತ್ರಿತ ವಾಹನಗಳು 12 ಗಂಟೆ ಅವಧಿಗೆ ಪ್ರತಿ ಕಿ.ಮೀ ದರ 80 ರಂತೆ 14,000 ರೂಪಾಯಿ ಬಾಡಿಗೆ ದರ ನಿಗದಿ ಮಾಡಲಾಗಿದೆ. 24 ಗಂಟೆ ಅವಧಿಗೆ ಪ್ರತಿ.ಕಿಮೀಗೆ 80ರಂತೆ 20,000 ರೂಪಾಯಿ ನಿಗದಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+