ಬಿಎಂಟಿಸಿ ಬಸ್ ಸರಣಿ ಅಪಘಾತ: 2 ಬಸ್, 5 ಕಾರುಗಳು ಜಖಂ
ಬೆಂಗಳೂರು, ಜನವರಿ 10: ಬಿಎಂಟಿಸಿ ಬಸ್ ಸರಣಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದಿದೆ.
Recommended Video
ಕಾರಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿ ಎರಡು ಬಸ್ ಹಾಗೂ ಐದು ಕಾರುಗಳು ಜಖಂ ಆಗಿರುವ ಘಟನೆ ಜಯನಗರ ಪಂಪ್ ಹೌಸ್ ಸಿಗ್ನಲ್ ಬಳಿ ನಡೆದಿದೆ.
ಡಿಪೋ 25ಕ್ಕೆ ಸೇರಿದ ಕೆಎ 01 ಎಫ್ 318 ಸಂಖ್ಯೆಯ ಬಿಎಂಟಿಸಿ ವೋಲ್ವೊ ಬಸ್ ಏರ್‌ಪೋರ್ಟ್ ರಸ್ತೆಯಿಂದ ಬಿಟಿಎಂ ಲೇಔಟ್ ಕಡೆ ತೆರಳುತ್ತಿತ್ತು. ಈ ವೇಳೆ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎಲ್ಲಾ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ.

ಆದರೆ ಯಾರಿಗೂ ಅಪಾಯವಾಗಿಲ್ಲ. ಈ ಸಂಬಂಧ ಮೈಕೊ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕ ಧರ್ಮೇಂದ್ರ ಸ್ಥಳದಿಂದ ಪರಾರಿಯಾಗಿದ್ದಾರೆ.
ಒಂದೇ ವಾರದಲ್ಲಿ ಬಿಎಂಟಿಸಿ ಬಸ್‌ನಿಂದ ನಡೆದ ಸರಣಿ ಅಪಘಾತ ಇದಾಗಿದೆ. ಘಟನಾ ಸ್ಥಳದಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿದ್ದು, ಟ್ರಾಫಿಕ್ ಪೊಲೀಸರು ಎಲ್ಲಾ ವಾಹನಗಳನ್ನು ಸ್ಥಳದಿಂದ ತೆರವು ಮಾಡಿ ಡ್ಯಾಮೇಜ್ ಆದ ವಾಹನಗಳನ್ನು ಮೈಕೊ ಲೇಔಟ್ ಠಾಣೆಗೆ ಕೊಂಡೊಯ್ದಿದ್ದಾರೆ.












Click it and Unblock the Notifications