BMTC Good News: ನಮ್ಮ ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆ ಬೆನ್ನಲ್ಲೇ ಪ್ರಯಾಣಿಕರಿಗೆ ಬಿಎಂಟಿಸಿ ಬಿಗ್ ಗುಡ್ ನ್ಯೂಸ್
BMTC Good News: ಬೆಂಗಳೂರು ನಮ್ಮ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಆಗಸ್ಟ್ 10) ಉದ್ಘಾಟನೆ ಮಾಡಿದರು. ಇದರ ಬೆನ್ನಲ್ಲೇ ಬಿಎಂಟಿಸಿ ಭರ್ಜರಿ ನೀಡಿದ್ದು, ಈ ಮಾರ್ಗದಲ್ಲಿ ಫೀಡರ್ ಬಸ್‌ಗಳನ್ನು ಓಡಿಸಲು ನಿರ್ಧಾರ ಮಾಡಿದೆ. ಹಾಗಾದ್ರೆ, ಯಾವ್ಯಾವ ಮಾರ್ಗಗಳಲ್ಲಿ? ಬಸ್ ಸಂಖ್ಯೆ ಹಾಗೂ ಸಮಯಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಎಂಟಿಸಿ ಬೆಂಗಳೂರು ಜೀವನಾಡಿ ಸಾರಿಗೆ ಆಗಿದ್ದು, ಇದು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೊಸ ಮಾರ್ಗಗಳಲ್ಲಿ ಬಸ್‌ಗಳನ್ನು ಬಿಡುತ್ತಲಿರುತ್ತದೆ. ಇದೀಗ ಇಂದು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ 19.15 ಕಿಲೋ ಮೀಟರ್ ನಮ್ಮ ಮೆಟ್ರೋ ಯೆಲ್ಲೂ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು. ಇದರ ಬೆನ್ನಲ್ಲೇ ಈ ಮಾರ್ಗದಲ್ಲಿ ಸೋಮವಾರದಿಂದಲೇ ಬಿಎಂಟಿಸಿ ಫೀಡರ್ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ.

ಈ ಮೆಟ್ರೋ ಮಾರ್ಗದ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಬಿಎಂಟಿಸಿ ಆಗಸ್ಟ್ 11ರಿಂದ ಫೀಡರ್ ಬಸ್ ಸೇವೆ ಆರಂಭಿಸಲಿದೆ. ಇದರಿಂದ ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್ ಮತ್ತು ಬೊಮ್ಮಸಂದ್ರದಂತಹ ಪ್ರಮುಖ ತಾಂತ್ರಿಕ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಸಂಪರ್ಕವನ್ನ ಸುಧಾರಿಸಲಿದೆ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಆದಂತಾಗಲಿದೆ.
ಬಿಎಂಟಿಸಿ ಒಟ್ಟು 12 ಫೀಡರ್ ಬಸ್‌ಗಳನ್ನು ನಾಲ್ಕು ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲಿವೆ. ಎಲೆಕ್ಟ್ರಾನಿಕ್ ಸಿಟಿಯಿಂದ ದೊಡ್ಡಕನ್ನೆಲ್ಲಿ, ಕೋನಪ್ಪನ ಅಗ್ರಹಾರದಿಂದ ಚಂದಾಪುರ ವೃತ್ತ, ಬೊಮ್ಮಸಂದ್ರದಿಂದ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್, ಮತ್ತು ಕೋನಪ್ಪನ ಅಗ್ರಹಾರದಿಂದ ಹೆಬ್ಬಗೋಡಿಯವರೆಗೆ ಬಸ್‌ಗಳು ಸಂಚರಿಸಲಿವೆ.
ನಾಲ್ಕು ಮಾರ್ಗಗಳಲ್ಲಿ ಫೀಡರ್ ಬಸ್ ಸೇವೆ
* ಎಂಎಫ್-22: ಎಲೆಕ್ಟ್ರಾನಿಕ್ ಸಿಟಿಯ ವಿಪ್ರೋ ಗೇಟ್‌ನಿಂದ ದೊಡ್ಡಕನ್ನೆಲ್ಲಿ ಬಸ್ ನಿಲ್ದಾಣ, ಕೋನಪ್ಪನ ಅಗ್ರಹಾರ, ಹೊಸ ರಸ್ತೆ, ಕಸವನಹಳ್ಳಿ ಮತ್ತು ಕೈಕೊಂಡ್ರಹಳ್ಳಿ ಮಾರ್ಗದಲ್ಲಿ ಸಂಚಾರ ಮಾಡಲಿವೆ. ಈ ಮಾರ್ಗದಲ್ಲಿ 4 ಬಸ್‌ಗಳು ಬೆಳಗ್ಗೆ 8:20 ರಿಂದ ಸಂಜೆ 4:55 ಗಂಟೆವರೆಹೆ 32 ಟ್ರಿಪ್ ಓಡಾಡಲಿವೆ.
* ಎಂಎಫ್-22ಎ: ಕೋನಪ್ಪನ ಅಗ್ರಹಾರದಿಂದ ಎಲೆಕ್ಟ್ರಾನಿಕ್ ಸಿಟಿ, ಹುಸ್ಕೂರು ಗೇಟ್, ಚಿಂತಲ ಮಡಿವಾಳ, ಮುತ್ತಾನಲ್ಲೂರು ವೃತ್ತ, ತಿಮ್ಮಸಂದ್ರ ವೃತ್ತ, ಮತ್ತು ಚಂದಾಪುರ ವೃತ್ತದ ಮಾರ್ಗದಲ್ಲಿ ಸಂಚಾರ ಮಾಡಲಿವೆ. ಬೆಳಗ್ಗೆ 8:40 ರಿಂದ ಸಂಜೆ 4:50 ಗಂಟೆವರೆಗೆ 4 ಬಸ್‌ಗಳು 20 ಟ್ರಿಪ್ ಓಡಾಡಲಿವೆ.
* ಎಂಎಫ್-22ಬಿ: ಬೊಮ್ಮಸಂದ್ರದಿಂದ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್, ತಿರುಪಾಳ್ಯ ವೃತ್ತ, ಎಸ್-ಮಾಂಡೋ-3 ಮತ್ತು ಹೆಬ್ಬಗೋಡಿ ಮಾರ್ಗದಲ್ಲಿ ಸಂಚಾರ ಮಾಡಲಿವೆ. ಈ ಮಾರ್ಗದಲ್ಲಿ 2 ಬಸ್‌ಗಳು 20 ಟ್ರಿಪ್ ಸಂಚಾರ ಮಾಡಲಿವೆ.
* ಎಂಎಫ್-22ಸಿ ಮಾರ್ಗ: ಕೋನಪ್ಪನ ಅಗ್ರಹಾರದಿಂದ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ಗೆ, ಬೊಮ್ಮಸಂದ್ರ ಮತ್ತು ಹೆಬ್ಬಗೋಡಿ ಮಾರ್ಗದಲ್ಲಿ 2 ಬಸ್‌ಗಳು 20 ಟ್ರಿಪ್ ಓಡಾಡಲಿವೆ.
ಈ ಫೀಡರ್ ಬಸ್ ಸೇವೆಯು ಸಿಲ್ಕ್ ಬೋರ್ಡ್ ಜಂಕ್ಷನ್‌ನಂತಹ ದಟ್ಟಣೆ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ. ಅಲ್ಲದೆ, ಐಟಿ ಉದ್ಯೋಗಿಗಳಿಗೆ ಸುಗಮ ಸಾರಿಗೆ ಒದಗಿಸಿದಂತಾಗಲಿದೆ. ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್ ಅವರು ಈ ಬಗ್ಗೆ ಮಾತನಾಡಿದ್ದು, ಪ್ರಯಾಣಿಕರ ಸಂಖ್ಯೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಫೀಡರ್ ಬಸ್‌ಗಳ ಸಂಖ್ಯೆಯನ್ನ ಹೆಚ್ಚಣ ಮಾಡಲಾಗುವುದು ಎಂದು ಹೇಳಿದ್ದಾರೆ. ಬಿಎಂಟಿಸಿ ಮೊದಲಿನಿಂದಲೂ ಹೊಸ ಮಾರ್ಗಗಳಲ್ಲಿ ಪ್ರಯಾಣಿಕೆ ಅನುಕೂಲಕ್ಕೆ ತಕ್ಕಂತೆ ಬಸ್‌ಗಳನ್ನು ಬಿಡುತ್ತಲೇ ಇದೆ.












Click it and Unblock the Notifications