BMTC: ಹೊಸ 148 ಬಸ್‌ಗಳ ಸೇರ್ಪಡೆ: ವೇಗಧೂತ ಎಕ್ಸ್‌ಪ್ರೆಸ್ & ಪ್ರವಾಸ ಪ್ಯಾಕೇಜ್ ಸಂಚಾರಕ್ಕೆ ಬಲ
ಬೆಂಗಳೂರು, ಜುಲೈ 12: ಬೆಂಗಳೂರಿನ ಮೂಲೆ ಮೂಲೆಗೂ ಸಂಚರಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳ ಸಮೂಹಕ್ಕೆ ಮತ್ತಷ್ಟು ಹೊಸ ಬಸ್‌ಗಳು ಸೇರ್ಪಡೆಯಾಗಿವೆ. ಸಾರ್ವಜನಿಕ ಸೇವೆಗಾಗಿ ಟಾಟಾ ಮೋಟರ್ಸ್ ಲಿಮಿಟೆಡ್ 148 ಹವಾ ನಿಯಂತ್ರಣರಹಿತ ವಿದ್ಯುತ್ ಚಾಲಿತ ಹೊಸ ಬಸ್ಸುಗಳ (BMTC 148 EV Bus) ಕಾರ್ಯಾಚರಣೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು. ಈ ಬಸ್‌ಗಳು ವಿಶೇಷತೆ ಏನು, ಇತ್ಯಾದಿ ಹೊಸ ಅಪ್ಡೇಟ್ ಇಲ್ಲಿದೆ.
ಬೆಂಗಳೂರಿನಲ್ಲಿ ಈಗಾಗಲೇ ಬಿಎಂಟಿಸಿ ಬಸ್ ಕಡಿಮೆ ನಿಲುಗಡೆಯ ಪ್ರಯಾಣಿಕ ಸ್ನೇಹಿ 'ಬಿಎಂಟಿಸಿ ವೇಗಧೂತ ಎಕ್ಸ್‌ಪ್ರೆಸ್' ಬಸ್‌ಗಳನ್ನು ಕೆಲವೇ ಕೆಲವು ಮಾರ್ಗಗಳಲ್ಲಿ ಬಿಡಲಾಗಿದೆ. ಅದೇ ಉಪಕ್ರಮಕ್ಕೆ ಈ ಹೊಸ ಕೆಲವು ಬಸ್‌ಗಳನ್ನು ಬಳಸಿಕೊಳ್ಳಬಹುದು. ಮತ್ತಷ್ಟು ಮಾರ್ಗಗಳಲ್ಲಿ ವೇಗಧೂತ ಬಸ್ ಸಂಚರಿಸಲಿವೆ. ಅಷ್ಟೇ ಅಲ್ಲದೇ ವೀಕೆಂಡ್ ಟೂರ್ ಪ್ಯಾಕೇಜ್ ಪ್ರವಾಸದಡಿಯಲ್ಲಿ ಈ ಹೊಸ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ ಎಂದು ಸಚಿವರ ರಾಮಲಿಂಗಾ ರೆಡ್ಡಿ ಅವರು ಮಾಹಿತಿ ನೀಡಿದರು.

30 ಹೊಸ ಮಾರ್ಗಗಳಲ್ಲಿ ಕಾರ್ಯಾಚರಣೆ
ಈ ಎಲ್ಲ 148 ಬಸ್‌ಗಳು ರಾಜಧಾನಿಯಲ್ಲಿ ಸುಮಾರು 30 ಹೊಸ ಮಾರ್ಗಗಳಲ್ಲಿ ಸಂಚರಿಸಲಿವೆ. ಪರಿಸರ ಸ್ನೇಹಿ ಇ-ಬಸ್‌ಗಳು ಸೇರ್ಪಡೆಯಿಂದ ಬೆಂಗಳೂರಿನ ವಾತಾವರಣೆಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ವಾಯು ಮಾಲಿನ್ಯ ಆಗದಂತೆ ಬಿಎಂಟಿಸಿ ಈ ಮೂಲಕ ಕೊಡುಗೆ ನೀಡುತ್ತಿದೆ. ಇವಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇದೆ. ಹೊಸ ವಿದ್ಯುತ್ ಚಾಲಿತ ಎಸಿ ಅಲ್ಲದ ಬಸ್‌ಗಳು ಮುಂದಿನ ಸುಮಾರು 12 ವರ್ಷಗಳ ವರೆಗೆ ಸೇವೆ ನೀಡಲಿವೆ. ಗುತ್ತಿಗೆ ಆಧಾರದಲ್ಲಿ 41ಪೈಸೆಗೆ ಪ್ರತಿ ಒಂದು ಕಿಲೋ ಮೀಟರ್ ಓಡಲಿವೆ. ಸದ್ಯ ಬಿಎಂಟಿಸಿ ನಿಗದಿಂದಲೇ ನಿರ್ವಾಹಕರು ಇರುತ್ತಾರೆ. ಟಾಟಾ ಮೋಟಾರ್ಸ್ ಕಂಪನಿಯಿಂದ ಚಾಲಕರೇ ಬಸ್ ಓಡಿಸಲಿದ್ದಾರೆ.
ವೇಗಧೂತ ಎಕ್ಸ್‌ಪ್ರೆಸ್ ಬಸ್ ಸೇವೆ ಆರಂಭಿಸಿರುವ ಬಿಎಂಟಿಸಿಗೆ ಹೊಸ ಬಸ್‌ಗಳು ಮತ್ತಷ್ಟು ಬಲ ನೀಡಲಿವೆ. ವೇಗಧೂತ ಉಪಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಹೊಸ ಮಾರ್ಗಗಳಲ್ಲಿ ಈ ಇವಿ ಬಸ್ ಸಂಚರಿಸಲಿವೆ. ಶಕ್ತಿ ಯೋಜನೆಯಡಿ ಮಹಿಳೆಯರು ಈ ಬಸ್‌ಗಳಲ್ಲಿ ಉಚಿತವಾಗಿ ಸಂಚಾರ ಮಾಡಬಹುದಾಗಿದೆ.
ಸಾರ್ವಜನಿಕ ಸೇವೆಗಾಗಿ ಮೆ|| ಟಾಟಾ ಮೋಟರ್ಸ್ ಲಿಮಿಟೆಡ್ ನ 148 ಹವಾನಿಯಂತ್ರಣರಹಿತ ವಿದ್ಯುತ್ ಚಾಲಿತ ಬಸ್ಸುಗಳು ಹಾಗೂ ವೇಗದೂತ ಸೇವೆಗಳು ಮತ್ತು ಪ್ಯಾಕೇಜ್ ಪ್ರವಾಸದಡಿಯಲ್ಲಿ ಪರಿಚಯಿಸಲಾಗುತ್ತಿರುವ ನೂತನ ಮಾರ್ಗಗಳನ್ನು ಇಂದು ಲೋಕಾರ್ಪಣೆಗೊಳಿಸಿದೆ.
— Ramalinga Reddy (@RLR_BTM) July 11, 2025
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್ ಆರ್., ಭಾ.ಆ.ಸೇ; ಶ್ರೀ ಅಕ್ರಂ… pic.twitter.com/Nf4ZMSe9Kv
148 ಇ-ಬಸ್‌ಗಳ ವಿಶೇಷತೆ ಏನು?
* ವಿದ್ಯುತ್ ಚಾಲಿ ಬಸ್ ಆಗಿರುವ ಹಿನ್ನೆಲೆ ಪರಿಸರಕ್ಕೆ ಪೂರಕವಾಗಿವೆ
* 12 ಮೀಟರ್ ಉದ್ದ ಇದ್ದ, 400 ಮಿಮೀ ಎತ್ತರ ಇದೆ.
* ಎಸಿ ಅಲ್ಲದ ಬಸ್‌ಗಳು ಇವಾಗಿವೆ
* ಒಮ್ಮೆ ಬ್ಯಾಟರಿ ಚಾರ್ಜ್ ಆದರೆ 200 ಕಿ.ಮೀ ಚಲಿಸಬಲ್ಲ ಸಾಮರ್ಥ್ಯ ಹೊಂದಿವೆ
* ಈ ಎಲ್ಲ ಹೊಸ ಬಸ್‌ಗಳೂ ಜಯನಗರ (ಘಟಕ-04)ದಿಂದ ಚಲಿಸಲಿವೆ.
* ಹಿರಿಯ ನಾಗರಿಕರು, ದಿವ್ಯಾಂಗರಿಗೆ, ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇದೆ
* ಒಟ್ಟು 35 ಸೀಟುಗಳು ವ್ಯವಸ್ಥೆ ಇದೆ. 1 ಗಾಲಿ ಕುರ್ಚಿಗೂ ಅವಕಾಶ ಇದೆ.
* ಬಸ್ ಒಳಭಾಗದಲ್ಲಿ ಮೂರು ಕ್ಯಾಮೆರಾಗಳ ಅಳವಡಿಕೆ ಇದೆ
* 4 ಎಲ್.ಇ.ಡಿ ಬೋರ್ಡ್ ಮತ್ತು ನಿಲ್ದಾಣಗಳ ಧ್ವನಿ ಪ್ರಕಟಣೆ ವ್ಯವಸ್ಥೆ ಇದೆ
* ಮಹಿಳೆಯರಿಗಾಗಿ 10 ತುರ್ತು ಪ್ಯಾನಿಕ್ ಬಟನ್ ವ್ಯವಸ್ಥೆ ಹೊಂದಿದೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications