Aparna: ನಮ್ಮ ಮೆಟ್ರೋ ಕಂಚಿನ ಧ್ವನಿಗೆ ಭಾರದ ಮನಸ್ಸಿನಿಂದ 'ಧ್ವನಿ ನಮನ' ಸಲ್ಲಿಸಿದ BMRCL

ಬೆಂಗಳೂರು, ಜುಲೈ 12: ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ಚಿರಪರಿಚಿತವಾಗಿ ಧ್ವನಿಯಾಗಿದ್ದ, ಅಚ್ಚ ಕನ್ನಡತಿ ಖ್ಯಾತ ನಿರೂಪಕಿ ಮತ್ತು ನಟಿ ಅಪರ್ಣಾ ಅವರು ಕ್ಯಾನ್ಸರ್‌ನಿಂದ ನೆನ್ನೆ ಗುರುವಾರ ನಿಧನರಾಗಿದ್ದಾರೆ. ಅವರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಭಾರದ ಮನಸ್ಸಿನಿಂದ 'ಧ್ವನಿ ನಮನ' ಸಲ್ಲಿಸಿದೆ.

ಹೌದು, ಬೆಂಗಳೂರಿನಲ್ಲಿ ಸುಮಾರು 73 ಕಿಲೋ ಮೀಟರ್ ವ್ಯಾಪ್ತಿಯ ಜಾಲ ಹೊಂದಿರುವ ನಮ್ಮ ಮೆಟ್ರೋ ಒಟ್ಟು 65 ನಿಲ್ದಾಣಗಳು ಇವೆ. ಈ ಎಲ್ಲ ನಿಲ್ದಾಣಗಳಲ್ಲಿ ಮೆಟ್ರೋ ರೈಲಿಗೆ ತಮ್ಮ ಕಂಚಿನ ಕಂಠದಿಂದ ದಶಕಗಳ ಕಾಲ ಜೊತೆಯಾಗಿದ್ದ ಅಪರ್ಣಾ ಅರಿಗೆ 'ಧ್ವನಿ ನಮನ' ಸಲ್ಲಿಸಲಾಗಿದೆ.

BMRCL Special Voice Condolence to Anchor Aparna Death in All Namma Metro Stations

ನಗರದ ಮೆಟ್ರೋ ನಿಲ್ದಾಣಗಳಲ್ಲಿ ಅಗಲಿದ ಆತ್ಮಕ್ಕೆ ಆಡಿಯೋ ಮೂಲಕ ಅಂತಿಮ ನಮನ, ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಬಿಎಂಆರ್‌ಸಿಎಲ್ ಅಪರ್ಣಾ ನಿಧನ ಸುದ್ದಿ ತಿಳಿದು ಅತೀವ ಸಂತಾಪ ಸೂಚಿಸಿ ಎಲ್ಲ ನಿಲ್ದಾಣಗಳಲ್ಲಿ ಆಡಿಯೋ ಪ್ಲೇಮಾಡಿ ಕಂಚಿನ ಕಂಠದ ಅಪರ್ಣಾರ ಅಗಲಿಕೆಗೆ ಕಣ್ಣೀರಾಗಿದೆ.

ನಿಲ್ದಾಣಗಳ ಆಡಿಯೋದಲ್ಲಿ ''ನಮ್ಮ ಮೆಟ್ರೋ ಧ್ವನಿ ಸ್ಪಷ್ಟ, ಶುದ್ಧ ಕನ್ನಡ ಭಾಷಾಗ್ನೆ, ನಿರೂಪಕಿ ಅಪರ್ಣಾ ಅವರ ಅಗಲಿಕೆಗೆ BMRCLನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಅತೀವ ಸಂತಾಪ ಸೂಚಿಸುತ್ತದೆ. ಕನ್ನಡದ ಸುಮಧುರ ಸ್ಪಷ್ಟ ಧ್ವನಿ ಗುಚ್ಚವಾಗಿ ನಮ್ಮ ಮೆಟ್ರೋದಲ್ಲಿ ಅವರೆಂದು ಅಜರಾಮರ'' ಎಂದು ಬಿಎಂಆರ್‌ಸಿಎಲ್ ಆಡಿಯೋ (ಧ್ವನಿ) ಮೂಲಕ ಸಂತಾಪ ಸೂಚಿಸಿದೆ.

ಅಪರ್ಣಾ ಮತ್ತು ಬಿಎಂಆರ್‌ಸಿಎಲ್ ನಂಟು

ನಮ್ಮ ಮೆಟ್ರೋ ರೈಲು ಸುಮಾರು 14 ವರ್ಷಗಳ ಮೊದಲು ಬೆಂಗಳೂರಿನಲ್ಲಿ ಆರಂಭವಾಗಿದೆ. ಆಗಿನ್ನು ಬೈಯಪ್ಪನಹಳ್ಳಿ ಮತ್ತು ಎಂಜಿ ರಸ್ತೆ ವರೆಗೆ ಮಾತ್ರವೇ ಮೊದಲ ಪರ್ಪಲ್ ಮಾರ್ಗದಲ್ಲಿ ಸಂಚರಿಸಿತ್ತು. ಇದಕ್ಕೂ ಮೊದಲೇ ಬಿಎಂಆರ್‌ಸಿಎಲ್ ಅಧಿಕಾರಿಗಳು ನಿರರ್ಗಳವಾಗಿ ಸ್ವಚ್ಛಂದವಾಗಿ ಕನ್ನಡ ಮಾತನಾಡುವ ಮೂಲಕ, ನಿರೂಪಣೆ ಮೂಲಕ ಹೆಸರಾಗಿದ್ದ ನಟಿ ಅಪರ್ಣಾರನ್ನು ಸಂಪರ್ಕಿಸಿದ್ದರು.

ಅದಾಗಿ ಅವರಿಂದ ಕನ್ನಡ ಧ್ವನಿಯ ಆಡಿಯೋ ಪಡೆದು, ನಂತರ ಅವರ ಧ್ವನಿಯನ್ನೆ ಫೈನಲ್ ಮಾಡಿತ್ತು. ಅದಾಗಿ ಕೆಲವು ದಿನಗಳ ನಂತರ ಮೆಟ್ರೋ ಶುರುವಾಯಿತು. ಅಂದಿನಿಂದ ಈವರೆಗೆ ನಮ್ಮ ಮೆಟ್ರೋ ರೈಲುಗಳಲ್ಲಿ ಅಪರ್ಣಾ ಅವರ ಧ್ವನಿಯೇ ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿಯೂ ಅವರ ಧ್ವನಿಯೇ ಇರಲಿದೆ ಎಂದು ಬಿಎಂಆರ್‌ಸಿಎಲ್ ತನ್ನ ಸಂತಾಪ ಸೂಚನೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+