Namma Metro: ಮೆಟ್ರೋ ಪಿಲ್ಲರ್‌ಗಳ ಸುರಕ್ಷತೆ ಮೇಲೆ ಡ್ರೋನ್ ಕಣ್ಗಾವಲು

ಬೆಂಗಳೂರು, ಜನವರಿ 14: ನಮ್ಮ ಮೆಟ್ರೋ ಬೆಂಗಳೂರು ನಗರ ಜೀವನಾಡಿಯಾಗಿ ಬದಲಾಗುತ್ತಿದೆ. ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ಮೆಟ್ರೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಮೆಟ್ರೋ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್‌ಸಿಎಲ್ ಮೆಟ್ರೋ ಪಿಲ್ಲರ್‌ಗಳ ಮೇಲೆ ಕಣ್ಗಾವಲು ವಹಿಸಲಿದೆ. ಇದಕ್ಕಾಗಿ ಎಐ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

2011ರಲ್ಲಿ ಆರಂಭವಾದ ಎಂಜಿ ರಸ್ತೆ-ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ಹಂತ-1 ಮಾರ್ಗದ ಪಿಲ್ಲರ್, ವಯಾಡಕ್ಟ್‌ಗಳ ಮೇಲೆ ಕಣ್ಗಾವಲು ಇಡಲು ಎಐ ಆಧಾರಿತ ಡ್ರೋನ್‌ ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಶೀಘ್ರವೇ ಟೆಂಡರ್ ಕರೆಯಲು ಬಿಎಂಆರ್‌ಸಿಎಲ್ (ಕಾರ್ಯಾಚರಣೆ & ನಿರ್ವಹಣೆ) ವಿಭಾಗ ತಯಾರಿಯನ್ನು ನಡೆಸಿದೆ.

BMRCL Plans To Use AI Drones To Monitor Metro Pillars

ಉತ್ತಮ ಗುಣಮಟ್ಟದ ಕ್ಯಾಮರಾಗಳನ್ನು ಹೊಂದಿರುವ ಡ್ರೋನ್‌ಗಳು ಈ ಮೆಟ್ರೋ ಕಂಬಗಳು, ವಯಾಡಕ್ಟ್‌ನ ಚಿತ್ರಗಳನ್ನು ಸಂಗ್ರಹ ಮಾಡಲಿವೆ. ಅವುಗಳಲ್ಲಿ ದೋಷಗಳು ಕಂಡುಬಂದರೆ, ನಿರ್ವಹಣೆ ಅಗತ್ಯವಿದ್ದರೆ ಅವುಗಳನ್ನು ಮಾಡಲು ಬಿಎಂಆರ್‌ಸಿಎಲ್‌ಗೆ ಸಹಾಯ ಮಾಡಲಿವೆ. ಮೊದಲು ಮೆಟ್ರೋ ಸಂಚಾರ ಆರಂಭವಾದ ಮಾರ್ಗದ ಪಿಲ್ಲರ್‌, ವಯಾಡಕ್ಟ್‌ಗಳನ್ನು ಮೊದಲು ಪರಿಶೀಲನೆ ನಡೆಸಲಾಗುತ್ತದೆ.

ಕಾಲಮಿತಿಯಲ್ಲಿ ಸಮಸ್ಯೆ ಗುರುತಿಸುವುದು: ಎಐ ಆಧಾರಿತ ಡ್ರೋನ್ ಬಳಕೆ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ. ಆದರೆ ಟೆಂಡರ್ ಕರೆಯುವ ಮೊದಲು ಯಾವ ಯಾವ ಕಾರ್ಯ ನಿರ್ವಹಣೆ ಪರಿಶೀಲನೆ ಮಾಡಬೇಕು ಎಂಬುದುನ್ನು ಅಂತಿಮಗೊಳಿಸಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಿಲ್ಲರ್‌ಗಳಲ್ಲಿನ ದೋಷಗಳು, ವಯಾಡಕ್ಟ್‌ನಲ್ಲಿನ ಸಮಸ್ಯೆ ಮುಂತಾದವುಗಳನ್ನು ಈ ಡ್ರೋನ್ ಕ್ಯಾಮರಾಗಳು ಪತ್ತೆ ಹಚ್ಚಿ ಇಂಜಿನಿಯರಿಂಗ್ ವಿಭಾಗಕ್ಕೆ ಕಳಿಸಲಿವೆ. ಆದ್ದರಿಂದ ಕಾಲಮಿತಿಯಲ್ಲಿ ನಿರ್ವಹಣೆಯನ್ನು ಕೈಗೊಳ್ಳಲು ಇಂಜಿನಿಯರ್‌ಗಳಿಗೆ ಸಹ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.

ವಯಾಡಕ್ಟ್‌ ಮತ್ತು ಪಿಲ್ಲರ್‌ ನಡುವೆ ಆಗಾಗ ದೋಷ ಕಾಣಿಸುತ್ತದೆ. ನಿರಂತರವಾಗಿ ರೈಲುಗಳು ಸಂಚಾರ ನಡೆಸುವ ಕಾರಣ ಇವುಗಳ ಮೇಲೆ ಕಣ್ಗಾವಲು ಇಡಲಾಗುತ್ತದೆ. ಎಐ ಆಧಾರಿತ ತಂತ್ರಜ್ಞಾನ ದೋಷವನ್ನು ಗುರುತಿಸುವುದು ಮಾತ್ರವಲ್ಲ, ಯಾವುದು ತುರ್ತಾಗಿ ನಿರ್ವಹಣೆ ಆಗಬೇಕು ಎಂದು ಶಿಫಾರಸು ಸಹ ಮಾಡಲಿವೆ. ಮೆಟ್ರೋ ರೈಲು ಸಂಪರ್ಕ ಸ್ಥಗಿತಗೊಳಿಸದೇ ಈ ಮಾದರಿ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಲು ಬಿಎಂಆರ್‌ಸಿಎಲ್‌ಗೆ ಇದು ಸಹಾಯಕವಾಗಲಿದೆ.

ಸದ್ಯ ಈ ಮಾದರಿ ಪರೀಕ್ಷೆಗಳು, ಕಣ್ಗಾವಲನ್ನು ಬೈನಾಕ್ಯುಲರ್ ಮೂಲಕ ಮಾನವ ಸಂಪನ್ಮೂಲ ಉಪಯೋಗಿಸಿ ಕೈಗೊಳ್ಳಲಾಗುತ್ತಿದೆ. ಎಐ ಆಧಾರಿತ ಡ್ರೋನ್‌ಗಳು ಮಾನವ ಬಳಕೆಯನ್ನು ಕಡಿಮೆ ಮಾಡಲಿವೆ. ಅಲ್ಲದೇ ಅತ್ಯುತ್ತಮ ಗುಣಮಟ್ಟದ ಚಿತ್ರಗಳು, ವಿಡಿಯೋಗಳು ಸಿಗುವ ಕಾರಣ ನಿರ್ವಹಣೆ ಕೆಲಸ ಸುಲಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾನವ ಸಂಪನ್ಮೂಲ ಬಳಕೆ ಮಾಡಿಕೊಂಡು ಇಂತಹ ಕಾರ್ಯ ಕೈಗೊಳ್ಳುವಾಗ ಮೆಟ್ರೋ ಪಿಲ್ಲರ್ ಕೆಳಗೆ ಹೈಡ್ರಾಲಿಕ್ ಬಳಕೆ ಮಾಡಬೇಕು. ಆಗ ಆ ರಸ್ತೆಯ ವಾಹನ ಸಂಪರ್ಕವನ್ನು ಸಹ ಸ್ಥಗಿತಗೊಳಿಸಬೇಕಾಗುತ್ತದೆ. ಆದರೆ ಎಐ ಆಧಾರಿತ ಡ್ರೋನ್ ಬಳಕೆ ಮಾಡುವಾಗ ಇಂತಹ ಸಮಸ್ಯೆ ಇರುವುದಿಲ್ಲ. ಎಐ ತಂತ್ರಜ್ಞಾನ ಆಧಾರಿತ ಕ್ಯಾಮರಾಗಳು 3ಡಿ ಮಾದರಿ ವಿನ್ಯಾಸವನ್ನು ಸಹ ನೀಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಆರ್‌ಸಿಎಲ್ ಎಂಜಿ ರಸ್ತೆ-ಬೈಯಪ್ಪನಹಳ್ಳಿ ಮಾರ್ಗ ಮಾತ್ರವಲ್ಲ 'ಹಳದಿ' ಮಾರ್ಗದ ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿಯೂ ಈ ಮಾದರಿ ಎಐ ಕ್ಯಾಮರಾ ಬಳಕೆ ಮಾಡಲಿದೆ. ಈ ಮಾರ್ಗದಲ್ಲಿ ಶೀಘ್ರದಲ್ಲೇ ನಮ್ಮ ಮೆಟ್ರೋ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಅಲ್ಲದೇ ಇಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಇರುವ ಕಾರಣ ಎಐ ಮಾದರಿ ಡ್ರೋನ್ ಬಳಕೆ ಮಾಡುವುದು ಸಹಾಯಕವಾಗಲಿದೆ.

ಮೆಟ್ರೋ ಪಿಲ್ಲರ್, ವಯಾಡಕ್ಟ್‌ನಲ್ಲಿನ ಸಮಸ್ಯೆಗಳ ಕುರಿತು ಮೊದಲು ಟಿಸಿಎಂಎಸ್ ಕೇಂದ್ರಕ್ಕೆ ಮಾಹಿತಿ ಹೋಗಲಿದೆ. ಅಲ್ಲದೇ ರೈಲುಗಳನ್ನು ಬಳಕೆ ಮಾಡಿಕೊಂಡು ಹಳಿಗಳಲ್ಲಿನ ಸಮಸ್ಯೆಗಳನ್ನು ಸಹ ಪತ್ತೆ ಹಚ್ಚಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+